Srirastu Shubhamastu: ಹಿರಿಯರಿಗೆ ಕನಿಷ್ಠ ಗೌರವ ಕೊಡೋದು ಗೊತ್ತಿಲ್ವಾ? ನಿರ್ದೇಶಕನ ಮೇಲೆ ನೆಟ್ಟಿಗರ ಸಿಟ್ಟು

Written by Soma Shekar

Published on:

---Join Our Channel---

Srirastu Shubhamastu : ಇತ್ತೀಚಿನ ದಿನಗಳಲ್ಲಿ ಅಂದರೆ ಸೋಶಿಯಲ್ ಮೀಡಿಯಾಗಳ ಪ್ರಭಾವ ಜೋರಾಗಿರುವ ದಿನಗಳಲ್ಲಿ ಜನರು ಸೀರಿಯಲ್ ಗಳಲ್ಲಿ ಕಾಣುವ ತಪ್ಪುಗಳನ್ನು, ಲಾಜಿಕ್ ಇಲ್ಲದೇ ಓಡುವ ಕಥೆಗಳನ್ನು ಕುರಿತಾಗಿ ಮುಕ್ತವಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಜೊತೆಗೆ ಆ ಸೀರಿಯಲ್ ನ ನಿರ್ದೇಶಕರಾದಿಯಾಗಿ ಕಲಾವಿದರನ್ನು ಸಹಾ ಭರ್ಜರಿಯಾಗಿ ಟ್ರೋಲ್ ಮಾಡೋದು ಸಾಮಾನ್ಯವಾಗಿದೆ.

ಇದೀಗ ಶ್ರೀರಸ್ತು ಶುಭಮಸ್ತು (Srirastu Shubhamastu) ಸೀರಿಯಲ್ ನಲ್ಲಿ ಕಂಡ ಒಂದು ದೃಶ್ಯದಲ್ಲಿನ ತಪ್ಪನ್ನು ಗಮನಿಸಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕನಿಗೆ ಕ್ಲಾಸ್ ತಗೊಂಡಿದ್ದಾರೆ. ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಜನಾರ್ಧನ ಆಸ್ತಿಯನ್ನು ಹೇಗಾದರೂ ಸರಿ ತನ್ನದಾಗಿಸಿಕೊಳ್ಳಲು, ತನ್ನ ಹಿರಿ ಮಗಳು ಪೂರ್ಣಿ ಎಂದು ಎಲ್ಲರನ್ನು ನಂಬಿಸುವ ಪ್ರಯತ್ನಕ್ಕೆ ಮುಂದಾಗಿ ಬಹುತೇಕ ಅದರಲ್ಲಿ ಸಫಲನಾಗಿದ್ದ.

ಆದರೆ ವನಜಾ ಅವರ ತಂದೆ ಜನಾರ್ಧನನ ಬುದ್ಧಿ ತಿಳಿದು ತಮ್ಮ ಸ್ನೇಹಿತನಾದ ತಾತ ದತ್ತನಿಗೆ (Dutta) ವರ್ಷಗಳ ಹಿಂದೆಯೇ ಆಸ್ತಿಯ ವಿಚಾರದಲ್ಲಿ ನಿಗಾ ವಹಿಸುವ ಜವಾಬ್ದಾರಿ ಕೊಟ್ಟು ಹೋಗಿದ್ದಾರೆ. ಆದ್ದರಿಂದಲೇ ಲಾಯರ್ ದತ್ತ ಅವರನ್ನು ಕರೆದುಕೊಂಡು ಮಾಧವನ ಮನೆಗೆ ಬಂದಿದ್ದಾರೆ. ತಾತನ ಎಂಟ್ರಿ ಬಹಳ ಖಡಕ್ಕಾಗೇ ಆಗಿದ್ದು ಮಾತ್ರವೇ ಅಲ್ಲದೇ ಎಲ್ಲರಿಗೂ ಶಾಕ್ ಸಹಾ ನೀಡಿತ್ತು.

ಮನೆಗೆ ಬಂದ ತಾತ ಜನಾರ್ಧನನ ಅಸಲಿ ಮುಖವನ್ನು ಎಲ್ಲರ ಮುಂದೆ ಬಯಲು ಮಾಡಿದ್ದು, ಎಲ್ಲರಿಗೂ ಜನಾರ್ಧನನ ಪ್ರೀತಿಯ ಹಿಂದಿನ ಕುಹಕ ಏನಂತ ಅರ್ಥ ಆಗಿದೆ. ಇದೆಲ್ಲಾ ಸರಿ, ಇದು ಪ್ರೇಕ್ಷಕರಿಗೆ ಮನರಂಜನೆ ಖಂಡಿತ ನೀಡಿದೆ. ಆದರೆ ಇಷ್ಟೆಲ್ಲಾ ನಡೆಯುವಾಗ ಅಂದ್ರೆ ತಾತ ದತ್ತ ಮನೆಗೆ ಬಂದಾಗಿನಿಂದ, ವಿಷಯ ಇತ್ಯರ್ಥ ಆಗೋವರೆಗೂ ನಿಂತೇ ಇರ್ತಾರೆ. ಇದನ್ನ ನೋಡಿ ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ.

ವಯಸ್ಸಿನಲ್ಲಿ ಎಲ್ಲರಿಗಿಂತ ಅವರು ಹಿರಿಯರು ಅವರು ಮನೆಗೆ ಬಂದಾಗ ಕನಿಷ್ಠ ಅವರಿಗೆ ಕೂರೋದಕ್ಕೆ ಸಹಾ ಹೇಳುವಷ್ಟು ಇಂಗಿತ ಜ್ಞಾನ ಅಲ್ಲಿದ್ದವರಲ್ಲಿ ಯಾರಿಗೂ ಇರಲಿಲ್ವೇ, ತುಳಸಿಗೂ ಮಾವ ಎಂದ್ರೆ ಎಷ್ಟು ಗೌರವ, ಭಕ್ತಿ ಆದ್ರೆ ಅವರಿಗೂ ಸಹಾ ಮಾವನನ್ನ ಕೂತ್ಕೊಳ್ಳಿ ಅಂತ ಹೇಳೋದು ಮರೆತು ಹೋಯ್ತಾ?? ನಿರ್ದೇಶಕರಿಗೆ ಇಂತಹ ಸಣ್ಣ ವಿಷಯ ಕೂಡಾ ಹೊಳೀಲಿಲ್ವಾ, ಹಿರಿಯರಿಗೆ ಅಗೌರವ ತೋರೋದು ಸರಿಯಲ್ಲ ಅಂತ ಅಸಮಾಧಾನ ಹೊರ ಹಾಕಿದ್ದಾರೆ.

Leave a Comment