Kangana Ranaut: ಬಾಲಿವುಡ್ ನ ಕ್ವೀನ್ ಖ್ಯಾತಿಯ ನಟಿ ಕಂಗನಾ ರಣಾವತ್ (Kangana Ranaut) ನಟಿ ಮಾತ್ರವೇ ಅಲ್ಲದೇ ನಿರ್ಮಾಪಕಿ ಹಾಗೂ ನಿರ್ದೇಶಕಿ ಸಹಾ ಆಗಿದ್ದಾರೆ. ಪ್ರಸ್ತುತ ನಟಿ ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ಸಿನಿಮಾ ಎಮರ್ಜೆನ್ಸಿ (Emergency) ಟ್ರೇಲರ್ ಬಿಡುಗಡೆ ಆದ ನಂತರ ಅದು ಹೊಸ ವಿ ವಾ ದವೊಂದಕ್ಕೆ ಕಾರಣವಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಈಗ ಅಕಲಾ ತಕ್ತ್ (Akhal Takht) ಮತ್ತು ಶಿರೋಮಣಿ ಗುರುದ್ವಾರ್ ಪರಬಂಧಕ್ ಸಮತಿಯು (Shiromani Gurudwar Parabandhak Committee) ಕಂಗನಾ ಅವರ ಎಮರ್ಜೆನ್ಸಿ ಸಿನಿಮಾವನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿದೆ. ಎಸ್ಜಿಪಿಸಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಈ ವಿಚಾರವಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಸಿನಿಮಾದಲ್ಲಿ ಸಿಖ್ ಸಮುದಾಯವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದಿದ್ದಾರೆ.
ಎಮರ್ಜೆನ್ಸಿ ಸಿನಿಮಾದಲ್ಲಿ ಸಿಖ್ ಸಮುದಾಯದ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ತೋರಿಸಲಾಗಿದೆ. ನಾವು ಜರ್ನೈಲ್ ಸಿಂಗ್ ಖಾಲ್ಸಾ ಬಿಂದ್ರನ್ ವಾಲೆ ನಾವು ಇಂದಿಗೂ ಸಹಾ ಹುತಾತ್ಮ ಎಂದೇ ಪರಿಗಣಿಸಿದ್ದೇವೆ. ಸಿನಿಮಾದ ಟ್ರೇಲರ್ ನಲ್ಲಿ ಸಿಖ್ ಸಮುದಾಯವನ್ನು ತೋರಿಸಿರುವ ರೀತಿ ಸರಿಯಾಗಿಲ್ಲ, ನಾವದನ್ನ ಇಷ್ಟಪಟ್ಟಿಲ್ಲ. ಅದಕ್ಕೆ ಎಸ್ಜಿಪಿಸಿ ಕಂಗನಾ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಕಂಗನಾ 1975 ರಲ್ಲಿ ಹೇರಲಾದ ಎಮರ್ಜೆನ್ಸಿ ಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಇದರಲ್ಲಿ ಇಂದಿರಾಗಾಂಧಿ ಅವರ ಜೀವನ, ಎದುರಿಸಿದ ರಾಜಕೀಯ ಸವಾಲುಗಳ ಕುರಿತಾಗಿ ತೋರಿಸಲಾಗಿದೆ. ಆದರೆ ಸಿಖ್ ಸಮುದಾಯದ ಬಗ್ಗೆ ಇತಿಹಾಸವನ್ನು ತಪ್ಪಾಗಿ ತೋರಿಸಲಾಗಿದೆ ಎನ್ನುವುದೇ ಈಗ ಸಿಖ್ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.
Madhya Pradesh: ಸ್ವಾತಂತ್ರ್ಯ ದಿನಾಚರಣೆ ದಿನ ಶಾಲೆ ನಾಟಕದಲ್ಲಿ ಪಾಕ್ ಧ್ವಜ, ಶಾಲೆಯ ಅನುಮತಿ ರದ್ದು