Madhya Pradesh: ಮಧ್ಯಪ್ರದೇಶದ (Madhya Pradesh) ರತ್ಲಾಮ್ ನಲ್ಲಿ (Ratlam) ಸ್ವಾತಂತ್ರ್ಯ ದಿನಾಚರಣೆಯ. ಪರ್ವ ದಿನದಂದೇ ಇಡೀ ದೇಶ ಭಾರತದ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಣೆ ಮಾಡುವಾಗಲೇ ಇಲ್ಲಿನ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳ ಕೈಯಲ್ಲಿ ಪಾಕ್ ಧ್ವಜ ಕಾಣಿಸಿಕೊಂಡಿದ್ದು, ವೀಡಿಯೋ ಹೊರ ಬಂದ ಮೇಲೆ ಈ ವಿಚಾರವೀಗ ದೊಡ್ಡ ಸುದ್ದಿಯಾಗಿದೆ.
ರತ್ಲಾಮ್ ನ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಟಕದಲ್ಲಿ ಮಕ್ಕಳು ಪಾಕ್ ನ ಧ್ವಜ ಹಿಡಿದಿರುವ ದೃಶ್ಯ ನೋಡಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿ ಶಾಲೆಯ ಮೇಲೆ ದೂರನ್ನು ದಾಖಲು ಮಾಡಲಾಗಿತ್ತು. ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ, ಶಾಲೆ ಮಾನ್ಯತೆಯನ್ನು ರದ್ದು ಮಾಡಲು ಸೂಚನೆಯನ್ನು ನೀಡಲಾಗಿದೆ.
ಈ ವೇಳೆ ಶಾಲೆಯ ಸಂಚಾಲಕರಾದ ದೀಪಕ್ ಪಂಥ್ ಅವರು, ಸ್ವಾತಂತ್ರ್ಯ ಹೋರಾಟ ಮತ್ತು ಭಾರತ ವಿಭಜನೆಯ ಕುರಿತಾದ ನಾಟಕ ಆಗಿದ್ದರಿಂದ ಅದನ್ನು ತೋರಿಸಲಷ್ಟೇ ಪಾಕ್ ನ ಧ್ವಜವನ್ನು ಬಳಸಲಾಗಿತ್ತು. ನಮ್ಮ ಉದ್ದೇಶ ಆ ಧ್ವಜವನ್ನು ಪ್ರಚಾರ ಮಾಡುವುದಾಗಿರಲಿಲ್ಲ ಎಂದು ಹೇಳಿದ್ದಾರೆ.
ಯಾರೋ ನಾಟಕದ ಒಂದು ದೃಶ್ಯದ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟು ಅದು ವೈರಲ್ ಆಗಿದೆ. ನಮ್ಮಲ್ಲಿ ನಾಟಕದ ಸ್ಕ್ರಿಪ್ಟ್ ಸಹಾ ಇದೆ. ಈಗಾಗಲೇ ನಾವು ಕ್ಷಮಾಪಣೆ ಸಹಾ ಕೇಳಿದ್ದೇವೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.
SeethaRama Serial: ರಾಮ್ ಶ್ಯಾಮ್ ಇಬ್ಬರೂ ಫ್ರೆಂಡ್ಸ್, ಮೇಘ ಶ್ಯಾಮ್ ನ ನೋಡಿ ಬೆಚ್ಚಿ ಬಿದ್ದ ಸೀತಾ, ಹೊಸ ಟ್ವಿಸ್ಟ್