Tollywood Actress: ಬಟ್ಟೆ ಬಿಚ್ಚೋಕು ಸೈ, ಐಟಂ ಹಾಡಿಗೂ ಸೈ; ನಿರ್ದೇಶಕರಿಗೆ ಬೋಲ್ಡ್ ಆಫರ್ ಕೊಟ್ಟ ನಟಿ

Written by Soma Shekar

Published on:

---Join Our Channel---

Tollywood Actress: ಸಾಯಿ ಕಾಮಾಕ್ಷಿ ಭಾಸ್ಕರಾಲಾ (Sai Kamakshi Bhaskarala) ಈಗ ಟಾಲಿವುಡ್ ನಲ್ಲಿ (Tollywood Actress) ಗಮನ ಸೆಳೆಯುತ್ತಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಎಂಬಿಬಿಎಸ್ ಮಾಡಿರುವ ಇವರಿಗೆ ದೊಡ್ಡ ವೈದ್ಯೆಯಾಗುವ ಅವಕಾಶಗಳು ಹೇರಳವಾಗಿದ್ದವು. ಆದರೆ ಇವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ನಟನೆ ಮತ್ತು ಮಾಡೆಲಿಂಗ್ ಕ್ಷೇತ್ರಗಳನ್ನು. ನಟಿಯಾಗಿ, ಮಾಡೆಲ್ ಆಗಿ ಹೆಸರನ್ನು ಗಳಿಸಬೇಕೆನ್ನುವುದು ಇವರ ನಿರ್ಧಾರವಾಗಿದೆ.

ಪೊಲಿಮೆರಾ 2 (Polimera 2) ಸಿನಿಮಾದಲ್ಲಿ ಎಲ್ಲರ ಗಮನವನ್ನು ಸೆಳೆದ ನಟಿ ಸಾಯಿ ಕಾಮಾಕ್ಷಿ ನೀಡಿರುವ ಬೋಲ್ಡ್ ಹೇಳಿಕೆಯಿಂದಾಗಿ ಈಗ ನಟಿ ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತಿದ್ದಾರೆ. ನಟಿಯ ಹೇಳಿಕೆಯನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ಸಾಯಿ ಕಾಮಾಕ್ಷಿ ಇಲ್ಲಿಯವರೆಗೆ ಡಿ ಗ್ಲಾಮ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇವರು ಪೊಲಿಮೆರಾ ಪಾರ್ಟ್‌-1 ಹಾಗೂ ಪಾರ್ಟ್‌ 2 ಸಿ‌ನಿಮಾಗಳಲ್ಲಿ ಪರಿಣಾಮಕಾರಿ ಪಾತ್ರದಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಆ ಪಾತ್ರಗಳು ಪ್ರೇಕ್ಷಕರ ಮನಸ್ಸನ್ನ ಗೆದ್ದಿದೆ. 

ಸಾಯಿ ಕಾಮಾಕ್ಷಿ ಅವರು ಸೈತಾನ್ ಎನ್ನುವ ಹೆಸರಿನ ವೆಬ್ ಸಿರೀಸ್ ನಲ್ಲಿ ಸಹಾ ನಟಿಸಿದ್ದಾರೆ. ಅದರಲ್ಲಿ ನಟಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾಗಳಲ್ಲಿ ಮಾತ್ರ ಅವರು ಡಿ ಗ್ಲಾಮ್ ಪಾತ್ರಗಳಲ್ಲಿ ಸಿನಿ ಪ್ರೇಮಿಗಳನ್ನ ರಂಜಿಸಿದ್ದಾರೆ.

ವಿಭಿನ್ನ ಪಾತ್ರಗಳನ್ನು ನಿಭಾಯಿಸುತ್ತಾ ತನ್ನೊಳಗೆ ಇರುವ ವಿಶಿಷ್ಟ ನಟಿಯನ್ನು ಸಿನಿಮಾ ರಂಗಕ್ಕೆ ಮತ್ತು ಪ್ರೇಕ್ಷಕರಿಗೆ ಪರಿಚಯಿಸುವುದು ನನ್ನ ಗುರಿಯಾಗಿದೆ ಎನ್ನುವ ಮಾತನ್ನ ಹೇಳಿ ಅಭಿಮಾನಿಗಳ ಮನಸ್ಸನ್ನು ಗೆದ್ದವರು ನಟಿ  ಕಾಮಾಕ್ಷಿ ಭಾಸ್ಕರಾಲ.

ಈಗ ನಟಿ ಮತ್ತೊಂದು ಬೋಲ್ಡ್ ಸ್ಟೇಟ್ಮೆಂಟ್ ನೀಡಿದ್ದಾರೆ. ತಾನು ಎಲ್ಲಾ ರೀತಿಯ ಬೋಲ್ಡ್ ಪಾತ್ರಗಳನ್ನು ಮಾಡಲು ಸಿದ್ಧವಾಗಿದ್ದೇನೆ, ಅದು ನ್ಯೂಡ್ ಪಾತ್ರವೇ ಆಗಿರಲಿ, ಐಟಂ ಹಾಡೇ ಆಗಿರಲಿ ಯಾವುದೇ ಆದರೂ ಮಾಡೋದಕ್ಕೆ ಸೈ ಎಂಬುದಾಗಿ ಹೇಳಿದ್ದಾರೆ.

ನಟಿ ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟಿ ತಮ್ಮ ಸಂಭಾಷಣೆಯಲ್ಲಿ ಈ ವಿಷಯಗಳನ್ನು ಶೇರ್ ಮಾಡಿಕೊಂಡು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಹೊಸ ಆಫರ್ ಅನ್ನು ನೀಡಿದ್ದಾರೆ.

Leave a Comment