TTD Updates : ದ್ವಿಚಕ್ರ ವಾಹನಗಳಿಗೆ ತಿರುಮಲದಲ್ಲಿ ಹೊಸ ನಿಯಮ ಜಾರಿ; ಈಗಲೇ ತಿಳಿದುಕೊಂಡು ನಂತರ ಪ್ರಯಾಣ ಮಾಡಿ

Written by Soma Shekar

Published on:

---Join Our Channel---

TTD Updates: ತಿರುಮಲ ತಿರುಪತಿಯಲ್ಲಿ ನೆಲೆಸಿರುವ ಕಲಿಯುಗ ಪ್ರತ್ಯಕ್ಷ ದೈವ ಶ್ರೀವೆಂಕಟೇಶ್ವರನ ದರ್ಶನಕ್ಕೆ ಪ್ರತಿದಿನ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಅವರ ಸುರಕ್ಷತೆಗೆ ಟಿಟಿಡಿ ಸಹಾ ಸಾಕಷ್ಟು ಕ್ರಮಗಳನ್ನು ಕಾಲಕಾಲಕ್ಕೆ ತಕ್ಕಂತೆ ಕೈಗೊಳ್ಳುತ್ತಲೇ ಇದೆ. ಈಗ ಭಕ್ತರ ಸುರಕ್ಷತೆಗಾಗಿ ತಿರುಮಲ (TTD Updates) ತಿರುಪತಿ ದೇವಸ್ಥಾನಂ (ಟಿಟಿಡಿ) ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧವನ್ನು ಹೇರಿದೆ.

ಈ ನಿರ್ಬಂಧಗಳು ಆಗಸ್ಟ್ 12 ರಿಂದ ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರುತ್ತವೆ ಎಂದು ತಿಳಿಸಲಾಗಿದೆ.‌ ಈ ಸಮಯದಲ್ಲಿ, ಘಾಟ್ ರಸ್ತೆಗಳಲ್ಲಿ ಸಂಚಾರ ಮಾಡುವ ದ್ವಿಚಕ್ರ ವಾಹನಗಳಿಗೆ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಮಾತ್ರವೇ ಅನುಮತಿ ನೀಡಲಾಗುತ್ತದೆ. ಇಂತಹ ಒಂದು ನಿರ್ಧಾರಕ್ಕೆ ಕಾರಣವನ್ನು ಸಹಾ ನೀಡಲಾಗಿದೆ.

ಯಾತ್ರಾರ್ಥಿಗಳ ಸುರಕ್ಷತೆ ಹಾಗೂ ಆಗಸ್ಟ್ ಮತ್ತು ಸೆಪ್ಟೆಂಬರ್‌ ನಲ್ಲಿ ಹೆಚ್ಚು ಸಕ್ರಿಯವಾಗಿ ಸಂತಾನೋತ್ಪತ್ತಿ ಮಾಡುವ ಕಾಡು ಪ್ರಾಣಿಗಳಿಗೂ ರಕ್ಷಣೆ ನೀಡುವ ಉದ್ದೇಶದಿಂದ ಇಂತಹ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಟಿಟಿಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ಯಾತ್ರಾರ್ಥಿಗಳು ಸಹಕರಿಸುವಂತೆ ಟಿಟಿಡಿ (TTD) ಮನವಿ ಮಾಡಿದೆ.

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಆಗಸ್ಟ್ 18 ರಂದು ಟಿಟಿಡಿ ಶ್ರೀವಾರಿ ಕಲ್ಯಾಣೋತ್ಸವವನ್ನು ರದ್ದು ಮಾಡಿದೆ. ಆಗಸ್ಟ್ 15 ರಿಂದ 17 ರವರೆಗೆ ಶ್ರೀವಾರಿ ದೇವಸ್ಥಾನದಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಆಗಸ್ಟ್ 17ರ ರಾತ್ರಿಯವರೆಗೆ ದೇವಸ್ಥಾನದ ಸಂಪಂಗಿ ಪ್ರಾಕಾರದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯುತ್ತವೆ. ಇದೇ ಕಾರಣದಿಂದ 18 ರಂದು ಕಲ್ಯಾಣೋತ್ಸವವನ್ನು ಟಿಟಿಡಿ ರದ್ದು ಮಾಡಿದ್ದು, ಈ ವಿಷಯವನ್ನು ಭಕ್ತರು ಗಮನಿಸುವಂತೆ ಟಿಟಿಡಿ ಮನವಿ ಮಾಡಿದೆ.‌

Bigg Boss Kannada : ಬಿಗ್ ಬಾಸ್ ಆರಂಭಕ್ಕೆ ದಿನಗಣನೆ, ಮುಗಿಯಲಿದೆ ಈ ಮೂರು ಜನಪ್ರಿಯ ಸೀರಿಯಲ್ ಗಳು

Leave a Comment