Bollywood Actress: ಬಾಲಿವುಡ್ ನ ಈ ಸ್ಟಾರ್ ನಟಿ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಲು ಬಯಸಿದ್ರಂತೆ

Written by Soma Shekar

Published on:

---Join Our Channel---

Bollywood Actress: ಸಿನಿಮಾ ರಂಗ (Cinema) ಮತ್ತು ರಾಜಕೀಯ (Politics) ರಂಗಕ್ಕೆ ತೀರಾ ನಿಕಟವಾದ ಸಂಬಂಧ ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ರಾಜಕೀಯ ವಲಯದ ಘಟಾನುಘಟಿಗಳು ಸಿನಿಮಾ ರಂಗದವರ ಜೊತೆಗೆ ಟಚ್ ನಲ್ಲೇ ಇರುತ್ತಾರೆ. ಚುನಾವಣೆ ವೇಳೆಯಲ್ಲಿ ಸ್ಟಾರ್ ನಟ, ನಟಿಯರು ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರಕ್ಕೆ ಇಳಿಯುವ ಮೂಲಕ ಚುನಾವಣಾ ಪ್ರಚಾರಕ್ಕೆ ತಾರಾ ಮೆರುಗನ್ನು ನೀಡುತ್ತಾರೆ ಎನ್ನುವುದು ಸಹಾ ತಿಳಿದಿರುವ ವಿಚಾರವೇ ಆಗಿದೆ.

ಆದರೆ ಬಾಲಿವುಡ್ ನಟಿಯೊಬ್ಬರು (Bollywood Actress) ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕನಾಗಿರುವ ರಾಹುಲ್ ಗಾಂಧಿ (Rahul Gandhi) ಅವರ ಜೊತೆಗೆ ಡೇಟಿಂಗ್ ಮಾಡಲು ಬಯಸಿದ್ದರು ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಈ ವಿಷಯ ಖಂಡಿತ ಸುಳ್ಳಲ್ಲ, ಏಕೆಂದರೆ ಆ ನಟಿಯೇ ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳುವ ಮೂಲಕ ಎಲ್ಲರಿಗೂ ದೊಡ್ಡ ಶಾಕ್ ಅನ್ನು ನೀಡಿದ್ದರು.

ಹಾಗಾದರೆ ಯಾರದು ಬಾಲಿವುಡ್ ನಟಿ ಎನ್ನುವುದನ್ನ ತಿಳಿಯುವ ಆಸಕ್ತಿ ನಿಮಗೆ ಇದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ನಟಿಯಾಗಿ ಹೆಸರನ್ನು ಪಡೆದಿರುವ ಈ ನಟಿಯು ಈಗಲೂ ಸಹಾ ಸಿನಿಮಾ ರಂಗದಲ್ಲಿ ದೊಡ್ಡ ಕ್ರೇಜ್ ಅನ್ನು ಹೊಂದಿರುವ ನಟಿಯಾಗಿದ್ದಾರೆ. ಬಾಲಿವುಡ್ ನ ದೊಡ್ಡ ಸಿನಿಮಾ ಫ್ಯಾಮಿಲಿಯಿಂದ ಬಂದಿರುವ ಈ ನಟಿಯು ಸಂದರ್ಶನವೊಂದರಲ್ಲಿ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದರು.

ಈ ನಟಿ ಬೇರೆ ಯಾರೂ ಅಲ್ಲ ಕಪೂರ್ ವಂಶದ ಕುಡಿ, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕರೀನಾ ಕಪೂರ್ (Kareena Kapoor) ಅವರಾಗಿದ್ದಾರೆ.‌ ಹೌದು, ಈ ಮಾತು ಕೇಳಿ ಈಗ ನಿಮಗೂ ಸಹಾ ಅಚ್ಚರಿ ಆಗುತ್ತಿರಬಹುದು. ಈ ಹಿಂದೆ ಸಂದರ್ಶನವೊಂದರಲ್ಲಿ ನಟಿಯು ನಾನು ಸಿನಿಮಾ ಉದ್ಯಮಕ್ಕೆ ಸೇರಿದ್ದು, ರಾಜಕೀಯ ರಂಗದಲ್ಲಿರುವ ರಾಹುಲ್ ಗಾಂಧಿ ಅವರ ಜೊತೆ ಡೇಟಿಂಗ್ ಮಾಡಲು ಬಯಸಿದ್ದೆ ಎಂದು ಹೇಳಿದ್ದರು.

Leave a Comment