Bigg Boss: ಬಿಗ್ ಬಾಸ್ ಶೋ ಮುಗಿದ 5 ತಿಂಗಳ ನಂತರ ವಿನ್ನರ್ ಕೈ ಸೇರಿದ ಬಹುಮಾನ

Written by Soma Shekar

Published on:

---Join Our Channel---

Bigg Boss : ಬಿಗ್ ಬಾಸ್ (Bigg Boss) ಕಿರುತೆರೆ ಲೋಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವಂತಹ ಕಾರ್ಯಕ್ರಮವಾಗಿದೆ. ಈ ರಿಯಾಲಿಟಿ ಶೋನಲ್ಲಿ (Reality Show) ಸ್ಪರ್ಧಿಗಳಾಗಿ ಭಾಗವಹಿಸುವವರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಗುವ ಜೊತೆಗೆ, ಶೋನಲ್ಲಿ ವಿನ್ನರ್ ಆಗುವವರಿಗೆ ಲಕ್ಷಗಳ ಮೊತ್ತದಲ್ಲಿ ಬಹುಮಾನದ ಜೊತೆಗೆ ಐಷಾರಾಮಿ ಕಾರು, ಸೈಟು ಇನ್ನಿತರ ಉಡುಗೊರೆಗಳು ದೊರೆಯುತ್ತವೆ.

ಆದರೆ ಈ ಬಹುಮಾನದ ಮೊತ್ತ ಮತ್ತು ಬಹುಮಾನವಾಗಿ ದೊರೆಯುವ ವಸ್ತುಗಳು ಶೋ ವಿನ್ ಆದ ಕೂಡಲೇ ಖಂಡಿತ ವಿನ್ನರ್ ಗೆ ಸಿಗೋದಿಲ್ಲ. ಅವರು ತಾವು ಗೆದ್ದಂತಹ ಬಹುಮಾನವನ್ನು ಪಡೆಯೋದಕ್ಕೆ ಒಂದಷ್ಟು ಸಮಯ ನಿರೀಕ್ಷೆ ಮಾಡಬೇಕಾಗುತ್ತದೆ. ಈಗ ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಐದು ತಿಂಗಳ ನಂತರ ಸ್ಪರ್ಧಿಯವರಿಗೆ ಬಹುಮಾನದ ಮೊತ್ತ ಕಾರು ಹಾಗೂ ಇತರೆ ಉಡುಗೊರೆಗಳು ಅವರನ್ನು ತಲುಪಿದೆ..

ಹಾಗಾದ್ರೆ ಆ ವಿನ್ನರ್ ಯಾರು ? ಬಿಗ್ ಬಾಸ್ ಕನ್ನಡ ಸೀಸನ್ ಹತ್ತನ್ನ ಗೆದ್ದಂತಹ ಕಾರ್ತಿಕ್ ಮಹೇಶ್ (Karthik Mahesh) ಅಂತ ಅನ್ಕೊಂಡ್ರೆ ಖಂಡಿತ ಅವರಲ್ಲ. ಬದಲಿಗೆ ತೆಲುಗಿನ ಬಿಗ್ ಬಾಸ್ ಸೀಸನ್ ಏಳರ ವಿನ್ನರ್ ಪಲ್ಲವಿ ಪ್ರಶಾಂತ್ (Pallavi Prashanth) ಅವರಾಗಿದ್ದಾರೆ.‌ ಬಿಗ್ ಬಾಸ್ ತೆಲುಗು (Bigg Boss Telugu) ಈ ಬಾರಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಈ ಶೋಗೆ ಒಬ್ಬ ಸಾಮಾನ್ಯ ವ್ಯಕ್ತಿ ಯುವ ರೈತನಾಗಿ ಪಲ್ಲವಿ ಪ್ರಶಾಂತ್ ಎಂಟ್ರಿಯನ್ನ ಕೊಟ್ಟಿದ್ದರು.

ಅವರ ಅದ್ಭುತ ಆಟವನ್ನು ನೋಡಿ ಹೊರಗೆ ಅವರನ್ನು ಅಭಿಮಾನಿಸುವವರ ಸಂಖ್ಯೆ ಕೂಡಾ ಹೆಚ್ಚಾಗಿತ್ತು. ಪಲ್ಲವಿ ಪ್ರಶಾಂತ್ ಗೆಲ್ಲಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿತ್ತು. ಎಲ್ಲರ ನಿರೀಕ್ಷೆಗಳಂತೆ ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ತೆಲುಗು ಸೀಸನ್ ಏಳರ ವಿನ್ನರ್ ಆದರು. ಆಗ ಅವರಿಗೆ ದೊರೆಯಲಿರುವ ಬಹುಮಾನಗಳ ಘೋಷಣೆಯನ್ನು ಮಾಡಲಾಗಿತ್ತು.‌

ಪಲ್ಲವಿ ಪ್ರಶಾಂತ್ ಗೆ 35 ಲಕ್ಷ ರೂಪಾಯಿಗಳ ನಗದು ಬಹುಮಾನ, ಒಂದು ಮಾರುತಿ ಬ್ರೆಜಾ ಹಾಗೂ ಚಿನ್ನದ ನೆಕ್ಲೆಸ್ ಉಡುಗೊರೆಯಾಗಿ ದೊರೆಯುವುದು ಎಂದು ತಿಳಿಸಲಾಗಿತ್ತು. ವೇದಿಕೆ ಮೇಲೆ ಅವುಗಳನ್ನು ನೀಡುವಂತೆ ತೋರಿಸಲಾಗಿತ್ತು, ಆದರೆ ವಾಸ್ತವದಲ್ಲಿ ಅದು ವಿನ್ನರ್ ಕೈ ಸೇರಿರಲಿಲ್ಲ. ಈಗ ಬಿಗ್ ಬಾಸ್ ಶೋ ಮುಗಿದು ಐದು ತಿಂಗಳಿಗೂ ಹೆಚ್ಚಿನ ಸಮಯದ ನಂತರ ಪಲ್ಲವಿ ಪ್ರಕಾಶ್ ಕೈಗೆ 35 ಲಕ್ಷದ ಚೆಕ್ ಮತ್ತು ನೆಕ್ಲೆಸ್ ಬಂದು ಸೇರಿದೆ.‌

ಪಲ್ಲವಿ ಪ್ರಶಾಂತ್ ತಮಗೆ ದೊರೆತ ಬಹುಮಾನವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ತಂದೆ ಮತ್ತು ತಾಯಿಯ ಜೊತೆಗೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮಗೆ ಆಪ್ತರಾಗಿದ್ದ ಹಿರಿಯ ನಟ ಶಿವಾಜಿ ಅವರನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಬಹುಮಾನವಾಗಿ ದೊರೆತ ಕಾರನ್ನು ಪಡೆದುಕೊಂಡಿದ್ದಾರೆ. ಪಲ್ಲವಿ ಪ್ರಶಾಂತ್ ಅವರ ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

Leave a Comment