Anant Ambani Wedding: ಅನಂತ್ ಅಂಬಾನಿ ಮದ್ವೇಲೀ ಆ ಹೀರೋಗಳಿಗೆ ಸಿಕ್ಕ ಗಿಫ್ಟ್ ವಾಚ್ ಗಳ ಬೆಲೆ ಎಷ್ಟು?

Written by Soma Shekar

Published on:

---Join Our Channel---

Anant Ambani Wedding: ಅಪರ ಕುಬೇರ ಎನಿಸಿಕೊಂಡಿರುವ ಉದ್ಯಮಿ ಮುಖೇಶ್ ಅಂಬಾನಿ (Mukhesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ (Anant Ambani Wedding) ವೈಭವದಿಂದ ನಡೆದಿದೆ. ಶುಕ್ರವಾರ (ಜುಲೈ 12) ಅನಂತ್ ಅಂಬಾನಿ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.‌ ಶನಿವಾರದಂದು (ಜುಲೈ 13) ಆರತಕ್ಷತೆಯೂ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಹಾಲಿವುಡ್, ಬಾಲಿವುಡ್, ಟಾಲಿವುಡ್, ಟೀಂ ಇಂಡಿಯಾ ಕ್ರಿಕೆಟಿಗರು, ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಅನಂತ್ ಅಂಬಾನಿ ಅವರ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

ಅಂಬಾನಿ ಪುತ್ರನ ಮದುವೆ ಸಮಾರಂಭಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆಯಂತೆ. ಈ ಹಿನ್ನಲೆಯಲ್ಲಿ ಮದುವೆಗೆ ಹಾಜರಾದ ಅತಿಥಿಗಳಿಗೂ ಸಹಾ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆಂದು ವರದಿಯಾಗಿದೆ ಅನಂತ್ ಅಂಬಾನಿಗೆ ಬಾಲಿವುಡ್ ನಲ್ಲಿ ಸಾಕಷ್ಟು ಮಂದಿ ಸ್ನೇಹಿತರಿದ್ದಾರೆ. ಸಲ್ಮಾನ್ (Salman Khan), ಶಾರೂಖ್ (Shahrukh Khan), ರಣ್ವೀರ್, ಹೀಗೆ ಬಾಲಿವುಡ್ ಮಂದಿ ಅನಂತ್ ಗೆ ಆತ್ಮೀಯರಾಗಿದ್ದಾರೆ.‌

ಆದ ಕಾರಣ ಅಂಬಾನಿ ಮನೆಯಲ್ಲಿ ನಡೆಯುವ ಸಂಭ್ರಮಾಚರಣೆಗಳಲ್ಲಿ ಬಾಲಿವುಡ್ ನ ಹೀರೋಗಳು ಖಂಡಿತ ಹಾಜರಾಗುತ್ತಾರೆ. ಈಗ ಅನಂತ್ ಅಂಬಾನಿ ತಮ್ಮ ವಿವಾಹದ ಸಂದರ್ಭದಲ್ಲಿ ಹಾಜರಾಗಿದ್ದ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ತಮ್ಮ ಆತ್ಮೀಯರಿಗೆ ದುಬಾರಿ ಐಷಾರಾಮಿ ವಾಚ್‌ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಈಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅನಂತ್ ಅವರು ‘ಅಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್ ಪರ್ಪೆಚುವಲ್ ಕ್ಯಾಲೆಂಡರ್’ ನ ಬ್ರಾಂಡ್ ಮತ್ತು ಐಶಾರಾಮೀ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ, ಈ ವಾಚ್ ಗಳ ಮಾರುಕಟ್ಟೆ ಬೆಲೆಯ ಕಡೆಗೆ ಗಮನ ನೀಡಿದರೆ, ಒಂದೊಂದು ವಾಚ್ ಬೆಲೆ ರೂ.2 ಕೋಟಿಗೂ ಅಧಿಕವಾಗಿದೆ. ಈ ವಿಚಾರವಾಗಿ ಶಾರುಖ್ ಖಾನ್ ಮತ್ತು ರಣವೀರ್ ಸಿಂಗ್ ಅವರ ಫೋಟೋಗಳು ಮತ್ತು ವೀಡಿಯೋಗಳು ಈಗ ವೈರಲ್ ಆಗುತ್ತಿವೆ.

Leave a Comment