Radhika Apte: ಹುಡುಗಿಯರೇ ಈ ಕಾಂಡೋಮ್ ಬಳಸಿ, ಸ್ಟಾರ್ ನಟಿಯ ವೀಡಿಯೋ ಆಯ್ತು ಟ್ರೆಂಡ್, ನೆಟ್ಟಿಗರು ಶಾಕ್

Written by Soma Shekar

Published on:

---Join Our Channel---

Radhika Apte : ಇತ್ತೀಚಿನ ದಿನಗಳಲ್ಲಿ ನಟಿಯರು ವಿಚಾರಗಳು ಯಾವುದೇ ಆದರೂ ಅದರ ಬಗ್ಗೆ ಬಹಳ ಮುಕ್ತವಾಗಿ ಮಾತನಾಡುವ ಮೂಲಕ ಅಚ್ಚರಿಯನ್ನು ಮೂಡಿಸುತ್ತಿದ್ದಾರೆ. ಲೈಂಗಿಕ ವಿಚಾರಗಳು ಬಂದರೂ ಸಹಾ ನಟಿಯರು ಯಾವುದೇ ಹಿಂಜರಿಕೆ ಇಲ್ಲದೇ ಮಾತನಾಡುವುದು ಖಂಡಿತ ಶಾಕಿಂಗ್ ಎನಿಸುತ್ತದೆ. ಅದರಲ್ಲೂ ಬಾಲಿವುಡ್ ನಟಿಯರು ರಿಲೇಶಿನ್ ಶಿಪ್, ಲವ್, ಬ್ರೇಕಪ್, ಹೀಗೆ ನಾನಾ ವಿಚಾರಗಳಿಗೆ ಯಾವುದೇ ಮುಜುಗರ ಇಲ್ಲದೇ ಮಾತನಾಡುವುದು ಸಾಮಾನ್ಯವಾಗಿದೆ.

ಈಗ ಅದೇ ರೀತಿಯಲ್ಲೇ ಬಾಲಿವುಡ್ ಮತ್ತು ದಕ್ಷಿಣ ಸಿನಿಮಾಗಳಲ್ಲೂ ನಟಿಸಿ ಹೆಸರನ್ನ ಪಡೆದುಕೊಂಡಿರುವ ನಟಿಯು ಕಾಂಡೋಮ್ (Condom) ಕುರಿತಾಗಿ ಮಾತನಾಡುವ ಒಂದು ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೀಗ ಟ್ರೆಂಡ್ ಆಗ್ತಿರೋ ಈ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ರಾಧಿಕಾ ಆಪ್ಟೆ.

ಸಿನಿಮಾಗಳಲ್ಲಿ ಮತ್ತು ವೆಬ್ ಸಿರೀಸ್ ಗಳಲ್ಲಿ ಬೋಲ್ಡ್ ಆಗಿ ನಟಿಸಿರುವ ನಟಿ ರಾಧಿಕಾ ಆಪ್ಟೆ (Radhika Apte) ನ್ಯೂಡ್ ಆಗಿಯೂ ನಟಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ನಟಿಯಾಗಿದ್ದಾರೆ. ಈಗ ಇದೇ ನಟಿ ಹುಡುಗಿಯರಿಗೆ ಯಾವ ಕಾಂಡೋಮ್ ಬಳಸಬೇಕು ಎನ್ನುವುದನ್ನು ಹೇಳಿದ್ದು, ನಟಿಯ ಈ ವೀಡಿಯೋ ಈಗ ವೈರಲ್ ಆಗಿದೆ. ಹಾಗಾದರೆ ಏನಿದು ವೀಡಿಯೋ??

ಕಾಂಡೋಮ್ ಬಗ್ಗೆ ನಾವೇಕೆ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ಪ್ರಶ್ನೆ ಮಾಡಿರುವ ರಾಧಿಕಾ ಅವರು, ಯಾರು ಏನು ಅನ್ನೊಳ್ತಾರೆ ಅನ್ನೋ ಚಿಂತೆ ಬೇಡ, ಹುಡುಗಿಯರೇ ನಿಮ್ಮ ಕಾಂಡೋಮ್ ಅನ್ನ ಖರೀದಿ ಮಾಡಿ ಎಂದು ಕಂಪನಿಯೊಂದರ ಕಾಂಡೋಮ್ ಅನ್ನು ನಟಿ ತೋರಿಸಿದ್ದಾರೆ. ಇದು ಕಾಂಡೋಮ್ ಜಾಹೀರಾತು ಅನ್ನೋದು ನೋಡಿದವರಿಗೆ ಗೊತ್ತಾಗಿದೆ.‌

ಹೀಗೆ ಕಂಪನಿಯೊಂದರ ಕಾಂಡೋಮ್ ಬಗ್ಗೆ ಬೋಲ್ಡ್ ಆಗಿ ಸ್ಟಾರ್ ನಟಿಯೊಬ್ಬರು ಮಾತನಾಡಿರುವುದು ಈಗ ಹಾಟ್ ಟಾಪಿಕ್ ಆಗಿ ಬದಲಾಗಿದೆ. ನಟಿಯ ಜಾಹೀರಾತಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ರಾಧಿಕಾ ಆಪ್ಟೆ ಬಾಲಿವುಡ್ ನಲ್ಲಿ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಾ ಗಮನ ಸೆಳೆದ ನಟಿಯಾಗಿದ್ದು ತಮ್ಮ ಬೋಲ್ಡ್ ನೆಸ್ ನಿಂದಾಗಿಯೇ ಗಮನ ಸೆಳೆದಿದ್ದಾರೆ.

Leave a Comment