Sreeleela: ಟಾಲಿವುಡ್ ನಿಂದ ಬಾಲಿವುಡ್ ಗೆ ಹಾರಿದ ಶ್ರೀಲೀಲಾ; ಸ್ಟಾರ್ ನಟನ ಪುತ್ರನ ಜೊತೆಗೆ ಸಿನಿಮಾ

Written by Soma Shekar

Published on:

---Join Our Channel---

Sreeleela: ಕಿಸ್ ಬೆಡಗಿ ಶ್ರೀಲೀಲಾ (Sreeleela) ಟಾಲಿವುಡ್ ನಂತರ ಈಗ ಬಾಲಿವುಡ್ (Bollywood) ಕಡೆಗೆ ಮುಖ ಮಾಡಲು ಸಜ್ಜಾಗಿದ್ದಾರೆ. ಕನ್ನಡದ ಮೂಲಕ ಸಿನಿಮಾ ರಂಗಕ್ಕೆ ಅಡಿಯಿಟ್ಟ ಶ್ರೀಲೀಲಾ ಕನ್ನಡದಲ್ಲಿ ಅಪಾರವಾದ ಜನಪ್ರಿಯತೆಯನ್ನು ಪಡೆದುಕೊಂಡ ನಂತರ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿಯನ್ನು ಕೊಟ್ಟರು. ತೆಲುಗಿನಲ್ಲಿ ಸ್ಟಾರ್ ಗಳ ಜೊತೆಗೆ ನಾಯಕಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು ಶ್ರೀಲೀಲಾ. ಆದರೆ ಕಳೆದ ವರ್ಷ ಟಾಲಿವುಡ್ ನಲ್ಲಿ ಶ್ರೀಲೀಲಾಗೆ ನಿರೀಕ್ಷಿತ ಗೆಲುವು ಸಿಕ್ಕಿಲ್ಲ.

ಶ್ರೀಲೀಲಾ ಕಡಿಮೆ ಸಮಯದಲ್ಲೆ ಟಾಲಿವುಡ್ ನಲ್ಲಿ ಸ್ಟಾರ್ ನಟಿಯ ಮಟ್ಟಕ್ಕೆ ಬೆಳೆದರು. ನಟಿಯ ಸಿನಿಮಾಗಳು ಸೋಲನ್ನು ಕಂಡರೂ ಸಹಾ ನಟಿಯ ಸ್ಟಾರ್ ಡಂ ಮಾತ್ರ ಕಡಿಮೆಯಾಗಿಲ್ಲ.‌ ಪ್ರಸ್ತುತ ನಟಿ ಮತ್ತೊಮ್ಮೆ ಮಾಸ್ ಮಹಾರಾಜ್ ಖ್ಯಾತಿಯ ರವಿತೇಜ (Raviteja) ಜೊತೆಗೆ ಹೊಸ ಸಿನಿಮಾಕ್ಕೆ ನಾಯಕಿಯಾಗಲಿದ್ದು ಅದರ ಬೆನ್ನಲ್ಲೇ ಈಗ ಮತ್ತೊಂದು ಹೊಸ ಸುದ್ದಿ ಹೊರ ಬಂದಿದೆ.

ಹೊಸ ಬಂದಿರುವ ಸುದ್ದಿಗಳ ಪ್ರಕಾರ ಈಗ ಶ್ರೀಲೀಲಾ ಬಾಲಿವುಡ್ ನ ಸ್ಟಾರ್ ನಟನ ಮಗನ ಜೊತೆಗೆ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ. ಹೌದು, ಸೈಫ್ ಅಲಿ ಖಾನ್ (Saif Ali khan) ಅವರ ಪುತ್ರ ಇಬ್ರಾಹಿಂ ಅಲಿ ಖಾನ್ (Ibrahim Ali Khan) ಅವರ ಚೊಚ್ಚಲ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಬಾಲಿವುಡ್ ಗೆ ಎಂಟ್ರಿಯನ್ನು ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಇನ್ನೂ ಸಿನಿಮಾ ಮಾಡದೇ ಹೋದರೂ ಒಬ್ಬ ನಟನಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅವರ ಲುಕ್ ಮತ್ತು ಸ್ಟೈಲ್ ಗೆ ಈಗಾಗಲೇ ಯುವತಿಯರ ಫಿದಾ ಆಗಿದ್ದಾರೆ. ಇಬ್ರಾಹಿಂ ಬಾಲಿವುಡ್ ಗೆ ಎಂಟ್ರಿಯನ್ನು ನೀಡಲು ಅಗತ್ಯ ಇರುವ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ದೊಡ್ಡ ಬ್ಯಾನರ್ ಮೂಲಕವೇ ಸಿನಿಮಾ ರಂಗಕ್ಕೆ ಎಂಟ್ರಿ ನೀಡಲಿದ್ದಾರೆನ್ನಲಾಗಿದೆ.

Leave a Comment