South Actors: ವಯನಾಡಿನಲ್ಲಿ (Waynadu) ಉಂಟಾಗಿರುವ ಭೀಕರ ಭೂಕುಸಿತ ದುರಂತದಿಂದಾಗಿ ಇಡೀ ಕೇರಳ ರಾಜ್ಯವೇ ನಲುಗಿದೆ. ಭೂಕುಸಿತದ ವೀಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿದ ಜನರ ಕೂಡಾ ಕಂಬನಿ ಮಿಡಿದಿದ್ದಾರೆ. ಇಂತಹ ಕಷ್ಟದ ಸಂದರ್ಭದಲ್ಲಿ ದೇಶದ ಎಲ್ಲಾ ಚಿತ್ರರಂಗಗಳ ಸಿನಿ ತಾರೆಯರು (South Actors) ಕಂಬನಿ ಮಿಡಿದಿದ್ದಾರೆ ಹಾಗೂ ಈಗಾಗಲೇ ಕೆಲವು ತಾರೆಯರು ಆರ್ಥಿಕ ನೆರವನ್ನು ಸಹಾ ಘೋಷಣೆ ಮಾಡಿದ್ದಾರೆ.
ಭೂಕುಸಿತದಿಂದಾಗಿ (Landslide) ಮನೆಯನ್ನು, ತಮ್ಮವರನ್ನು ಕಳೆದಕೊಂಡು ಬಹಳಷ್ಟು ಜನರು ನೋವಿನಲ್ಲಿದ್ದಾರೆ. ಕೇರಳದ ಮುಖ್ಯಮಂತ್ರಿಗಳ ಫಂಡ್ ಗೆ ಈಗಾಗಲೇ ಕನ್ನಡದ ರಶ್ಮಿಕಾ ಮಂದಣ್ಣ (Rashmika Mandanna), ತಮಿಳು ನಟ ಸೂರ್ಯ, ಚಿಯಾನ್ ವಿಕ್ರಮ್, ಮಳಿಯಾಳಂ ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್ ಸೇರಿದಂತೆ ಅನೇಕ ನಟರು ತಮ್ಮ ದೇಣಿಗೆಯನ್ನು ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಕೇರಳ ಮುಖ್ಯಮಂತ್ರಿಗಳ ಫಂಡ್ ಗೆ 10 ಲಕ್ಷ ರೂ. ದೇಣಿಗೆಯನ್ನು ನೀಡಿದ್ದು, ಅನೇಕರು ಇದಕ್ಕೆ ಮೆಚ್ಚುಗೆ ನೀಡಿದ್ದಾರೆ. ಇದೇ ವೇಳೆ ತಮಿಳಿನ ನಟ ಚಿಯಾನ್ ವಿಕ್ರಮ್ 20 ಲಕ್ಷ ರೂಪಾಯಿ, ನಟ ಸೂರ್ಯ ಮತ್ತು ಜ್ಯೋತಿಕಾ ದಂಪತಿ ಹಾಗೂ ನಟ ಕಾರ್ತಿ ಜಂಟಿಯಾಗಿ 50ಲಕ್ಷ ರೂಪಾಯಿ ನೀಡಿದ್ದಾರೆ.
ಇದೇ ವೇಳೆ ಇನ್ನು ಮಳಯಾಳಂ ಸಿನಿಮಾ ರಂಗದ ಹಿರಿಯ ನಟ ಮಮ್ಮುಟ್ಟಿ ಮತ್ತು ಅವರ ಪುತ್ರ ದುಲ್ಕರ್ ಸಲ್ಮಾನ್ ಜಂಟಿಯಾಗಿ 35ಲಕ್ಷ ರೂಪಾಯಿ ನೀಡಿದ್ದರೆ, ಮತ್ತೊಬ್ಬ ಸ್ಟಾರ್ ನಟ, ಫಹಾದ್ ಫಾಸಿಲ್, ನಜ್ರಿಯಾ ಜೋಡಿಯು 25 ಲಕ್ಷ ರೂ.ಗಳನ್ನು ದೇಣಿಗೆ ನೀಡಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದಾರೆ.
Kannada Serial TRP: ಸೀರಿಯಲ್ ಗಳ ನಡುವೆ ಕಾಳಗ, ಹೆಚ್ಚಿದ ಪೈಪೋಟಿ; ಈ ವಾರ ಗೆದ್ದವರು ಯಾರು? ಬಿದ್ದವರು ಯಾರು?