Sonu Sood: ವ್ಯಾಪಾರಿ ಉಗುಳಿನ ಘಟನೆಯನ್ನ ರಾಮ ಶಬರಿಗೆ ಹೋಲಿಸಿದ ಸೋನು ಸೂದ್; ನೀವೇ ತಿನ್ನಿ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

Sonu Sood: ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿನ ದೃಶ್ಯ ನೋಡಿ ಅನೇಕರು ಅಸಹ್ಯ ಪಟ್ಟುಕೊಂಡಿದ್ದಾರೆ. ಹೌದು, ಈ ದೃಶ್ಯದಲ್ಲಿ ವ್ಯಾಪಾರಿಯೊಬ್ಬನು ರೊಟ್ಟಿಗೆ ಉಗುಳುವ ದೃಶ್ಯವನ್ನು ನೋಡಬಹುದಾಗಿದೆ. ವೀಡಿಯೋ ವೈರಲ್ ಆದ ಮೇಲೆ ಜನ ಇದನ್ನ ನೋಡಿ ಅಸಮಾಧಾನ ಮತ್ತು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಆದರೆ ಈ ವಿಚಾರ ವೈರಲ್ ಆದ ಮೇಲೆ ನಟ ಸೋನು ಸೂದ್ (Sonu Sood) ಮಾಡಿರುವ ಟ್ವೀಟ್ ಈಗ ಚರ್ಚೆಯ ವಿಷಯವಾಗಿ ಬದಲಾಗಿದೆ.

ಹೌದು, ಬಾಲಿವುಡ್ ನಟ ಸೋನು ಸೂದ್ ರೊಟ್ಟಿಗೆ ಉಗುಳು ಹಾಕಿದ ವ್ಯಕ್ತಿಯನ್ನು ರಾಮ (Sri Rama) ಹಾಗೂ ಶಬರಿಗೆ (Shabari) ಹೋಲಿಕೆ ಮಾಡಿ ಜನರ ಸಿಟ್ಟಿಗೆ ಕಾರಣವಾಗಿದ್ದಾರೆ. ಇದೇ ವೇಳೆ ನಟಿ, ಸಂಸದೆ ಕಂಗನಾ ರಣಾವತ್ ಕೆಂಡಾಮಂಡಲರಾಗಿದ್ದಾರೆ. ಢಾಬಾವೊಂದರಲ್ಲಿ ಕೆಲಸ ಮಾಡುವ ಹುಡುಗ ಹಿಟ್ಟಿನಲ್ಲಿ ಉಗುಳಿ ಅನಂತರ ರೊಟ್ಟಿಗಳನ್ನು ಬೇಯಿಸುತ್ತಿರುವುದು ಕಂಡಿದೆ.

ವೀಡಿಯೋ ವೈರಲ್ ಆದ ನಂತರ ಈ ಢಾಬಾವನ್ನು ಮುಚ್ಚಬೇಕು ಹಾಗೂ ಅಸಹ್ಯ ಎನಿಸುವ ಕೆಲಸವನ್ನು ಮಾಡಿರುವ ಹುಡುಗನ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಡ ಹೇರಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳನ್ನು ಮಾಡುವ ಮೂಲಕ ಜನ ಇಂತಹ ಕೃತ್ಯವನ್ನು ಕಟುವಾಗಿ ಟೀಕಿಸುತ್ತಿದ್ದಾರೆ.

ಆದರೆ ಸೋನು ಸೂದ್ ಈ ವಿಚಾರವಾಗಿ ಟ್ವೀಟ್ ಮಾಡಿ, ರಾಮನು ಶಬರಿಯ ಎಂಜಲಿನ ಹಣ್ಣು ತಿಂದ ಘಟನೆಯನ್ನು ಈ ಅಸಹ್ಯಕರ ಘಟನೆಗೆ ಹೋಲಿಕೆ ಮಾಡಿ, ಶ್ರೀರಾಮ ಶಬರಿಯ ಎಂಜಲು ಹಣ್ಣುಗಳನ್ನು ತಿಂದಿದ್ದಾರೆ. ಹಾಗಾದರೆ ನಾನು ರೊಟ್ಟಿಗಳನ್ನೇಕೆ ತಿನ್ನಬಾರದು? ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು ನನ್ನ ಸಹೋದರ. ಮಾನವೀಯತೆ ಹಾಗೇ ಉಳಿಯಬೇಕು. ಜೈ ಶ್ರೀರಾಮ ಎಂದು ಟ್ವೀಟ್ ಮಾಡಿದ್ದಾರೆ.

ನೆಟ್ಟಿಗರು ಇದಕ್ಕೆ, ಶಬರಿ ಮೋಸದಿಂದ ಹಣ್ಣನ್ನ ಎಂಜಲು ಮಾಡಲಿಲ್ಲ ಮೊದಲು ರಾಮಾಯಣ ಸರಿಯಾಗಿ ಓದಿ ಎಂದು ಜನ ನಟನಿಗೆ ಬುದ್ಧಿ ಹೇಳಿದ್ದಾರೆ.‌ ಅಲ್ಲದೇ ಹೀಗೆ ಉಗುಳಿ ಮಾಡುವ ರೊಟ್ಟಿಯನ್ನು ಸೋನು ಸೂದ್ ಅವರಿಗೆ ಪಾರ್ಸೆಲ್ ಕಳುಹಿಸಬೇಕು ಎನ್ನುವ ಮಾತುಗಳನ್ನು ಸಹಾ ನೆಟ್ಟಿಗರು ಹೇಳಿದ್ದಾರೆ.

ಸೋನು ಸೂದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಕಂಗನಾ (Kangana Ranaut), ಸೋನು ಸೂದ್ ಅವರು ದೇವರು ಮತ್ತು ಧರ್ಮದ ಬಗ್ಗೆ ಅವರ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ತಮ್ಮದೇ ಆದ ರಾಮಾಯಣವನ್ನು ನಿರ್ದೇಶನ ಮಾಡುತ್ತಾರೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಸೋನು ಸೂದ್ ಹೇಳಿದ ಮಾತು ಈಗ ಎಲ್ಲೆಡೆ ವೈರಲ್ ಆಗ್ತಿದೆ.

Bigg Boss OTT 3: ಲೈಟ್ ಆಫ್, ಖುಲ್ಲಂ‌ ಖುಲ್ಲಾ ರೊಮ್ಯಾನ್ಸ್; ಬಿಗ್ ಬಾಸ್ ಮನೇಲಿ ಇದೆಂತ ಅಸಹ್ಯ ಎಂದ ನೆಟ್ಟಿಗರು

Leave a Comment