Shravani Subramanya: ಕೊನೆಗೂ ಅಜ್ಜಿಯನ್ನ ಕಂಡ ಶ್ರಾವಣಿ; ಆದ್ರೆ ನಿರಾಸೆ ಆಯ್ತು ಅಂತ ನೆಟ್ಟಿಗರಿಂದ ಅಸಮಾಧಾನ

Written by Soma Shekar

Published on:

---Join Our Channel---

Shravani Subramanya : ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ (Shravani Subramanya) ಪ್ರಸಾರ ಕಂಡ ಕೆಲವೇ ವಾರಗಳಲ್ಲಿ ಟಾಪ್ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಒಂದು ಹೊಸ ಕಥೆಯೊಂದಿಗೆ ಪ್ರೇಕ್ಷಕರನ್ನ ಸೆಳೆದಿದ್ದ ಸೀರಿಯಲ್ ನಲ್ಲಿ ಅಪ್ಪನ ಪ್ರೀತಿಗಾಗಿ ಹಂಬಲಿಸುವ ಮಗಳಾಗಿ ಶ್ರಾವಣಿ ಕಾಣಿಸಿಕೊಂಡರೆ, ಅವಳಿಗೆ ಸದಾ ಕಾವಲಾಗಿ ಇದ್ದಾನೆ ಸುಬ್ಬು. ಇವೆಲ್ಲವುಗಳ ನಡುವೆ ಶ್ರಾವಣಿ ತನ್ನ ಅಮ್ಮನ ಊರು ಸಾಲಿಗ್ರಾಮಕ್ಕೆ ಬಂದಿದ್ದಾಳೆ.

ಸಾಲಿಗ್ರಾಮದಲ್ಲಿ ಪುಷ್ಕರಣಿ ಉತ್ಸವಕ್ಕೆ ಬಂದಿರೋ ಶ್ರಾವಣಿಗೆ ಅವರ ಅಜ್ಜಿಯನ್ನ ನೋಡೋ ತವಕ ಹೆಚ್ಚಾಗಿದೆ. ಶ್ರಾವಣಿ ಅಜ್ಜಿ ಲಲಿತಾ ದೇವಿ (Lalita Devi) ಪಾತ್ರ ಬಹಳ ಪವರ್ ಫುಲ್ ಪಾತ್ರ ಅನ್ನೋ ತರ ತೋರಿಸಲಾಗಿತ್ತು. ಅದಕ್ಕೆ ಪ್ರೇಕ್ಷಕರು ಸಹಾ ಆ ಪಾತ್ರದಲ್ಲಿ ಯಾವ ಪವರ್ ಫುಲ್ ನಟಿ ಬರ್ತಾರೆ ಅನ್ನೋ ತವಕದಲ್ಲಿ ಕಾಯ್ತಾ ಇದ್ದರು.

ಈಗ ಹೊಸ ಪ್ರೊಮೊ ಬಂದಿದೆ. ಲಲಿತಾ ದೇವಿ ಪಾತ್ರದಲ್ಲಿರೋ ನಟಿ ಯಾರಂತ ಗೊತ್ತಾಗಿದೆ. ನಟಿ ವಿದ್ಯಾ ಮೂರ್ತಿ ಅವರು ಲಲಿತಾ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನ ನೋಡಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದು ಬಂದಿದೆ. ಕೆಲವರು ಖುಷಿಯಾದರೆ ಅನೇಕರು ಕಾಮೆಂಟ್ ಗಳಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಅಖಿಲಾಂಡೇಶ್ವರಿ, ಬಂಗಾರಮ್ಮನ ರೇಂಜ್ ಗೆ ನಾವು ಎಕ್ಸ್ಪೆಟ್ ಮಾಡಿದ್ವಿ, ನಾವು ತುಂಬಾ ನಿರೀಕ್ಷೆಗಳನ್ನು ಇಟ್ಕೊಂಡಿದ್ವಿ ಎಲ್ಲಾ ಠುಸ್ ಆಯ್ತು. ಸ್ಟ್ರಾಂಗ್ ಅಜ್ಜಿ ಇರಬೇಕಿತ್ತು, ಅಜ್ಜಿ ಪಾತ್ರಕ್ಕೆ ಬೇರೆ ಅವರು ಇರಬೇಕಿತ್ತು ಹೀಗೆ ತುಂಬಾ ಜನ ಕಾಮೆಂಟ್ ನಲ್ಲಿ ತಮ್ಮ ನಿರೀಕ್ಷೆ ಸುಳ್ಳಾಯ್ತು ಅಂತ ಕಾಮೆಂಟ್ ಗಳನ್ನು ಮಾಡಿದ್ದಾರೆ.

USA Senator: ಆಕೆ ಬಲವಂತವಾಗಿ ನನ್ನ ಕೈಯಲ್ಲಿ ಅದನ್ನೆಲ್ಲಾ ಮಾಡಿಸಿಕೊಂಡಳು, ನನಗೆ ಗಾಯಗಳಾಗಿದೆ

Leave a Comment