USA Senator: ಕಾಸ್ಟಿಂಗ್ ಕೌಚ್ ಅನ್ನೋದು ಮಹಿಳೆಯರಿಗೆ ಮಾತ್ರವೇ ಅಲ್ಲ ಅದು ಹಲವು ಪುರುಷರಿಗೂ ಶಾಪವಾಗಿ ಪರಿಣಮಿಸಿದೆ ಎಂದು ಹೇಳುವಂತಹ ಘಟನೆಗಳಲ್ಲಿ ಇದೂ ಒಂದು. ಮೇಲಿನ ಫೋಟೋದಲ್ಲಿ ಇರೋ ಮಹಿಳೆಯನ್ನ ಒಂದು ಸಲ ನೋಡಿ. ಅವಳ ಹೆಸರು ಮೇರಿ ಅಲ್ವಾರಾಡೊ ಗಿಲ್ (Marie Alvarado-Gil). ಕ್ಯಾಲಿಫೋರ್ನಿಯಾದ ಸೆನೆಟರ್ (USA Senator).
ಈಕೆಯ ಮಾಜಿ ಚೀಫ್ ಆಫ್ ಸ್ಟಾಫ್, ಚಾಡ್ ಕ್ಯಾಂಡಿಟ್ (Chad Condit), ಆಕೆ ತನ್ನ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆಂದು ಮೊಕದ್ದಮೆ ಹೂಡಿದ್ದಾರೆ. ಮೇರಿ ತನ್ನ ಲೈಂಗಿಕ ಆಸೆಗಳನ್ನು ಯಾವಾಗ ಮತ್ತು ಎಲ್ಲಿ ಕೇಳಿದರೂ ಪೂರೈಸಬೇಕೆಂದು ನನಗೆ ಒತ್ತಾಯಿಸಿದ್ದಳು. ನನ್ನೊಂದಿಗೆ ಆಕೆ ಹಲವು ಬಾರಿ ಓರಲ್ ಸೆ ಕ್ಸ್ ನಡೆಸಿದ್ದಾಳೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಗಳನ್ನೂ ಸಹಾ ಲಗತ್ತಿಸಿದ್ದಾರೆ. ಒಂದು ಸಲ ಕೆಲಸದ ಸಲುವಾಗಿ ಹೋಗುವಾಗ ನಡುರಸ್ತೆಯಲ್ಲಿ ಬಾತ್ ರೂಮಿಗೆ ಅಂತ ನಿಲ್ಲಿಸಿದಾಗ, ಬಾತ್ ರೂಮ್ ಗೆ ಹೋಗಿ ವಾಪಸ್ ಕಾರನ್ನು ಹತ್ತಿದಾಗ ಮೇರಿ ಆಗಲೇ ಪ್ಯಾಂಟ್ ಕಳಚಿ, ನನ್ನ ಪ್ರಾಮಾಣಿಕತೆ ಸಾಬೀತು ಮಾಡೆಂದ, ಕಾರಿನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಬಲವಂತವಾಗಿ ನನ್ನ ಕೈಯಿಂದ ಲೈಂಗಿಕ ಕ್ರಿಯೆಗಳನ್ನು ಮಾಡಿಸಿದಳು ಎಂದಿದ್ದಾರೆ.
ಕಳೆದ ವರ್ಷ ಅವರಿಗೆ ಬೆನ್ನುಮೂಳೆ ನೋವಿನಿಂದ ನಾನು ಆಕೆ ಹೇಳಿದಂತೆ ಮಾಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ನನ್ನ ಮೇಲೆ ಅಸಭ್ಯಕರ ವರ್ತನೆಯ ಆರೋಪ ಮಾಡಿ ನೋಟೀಸ್ ನೀಡಿದರು ಎನ್ನುವ ಆರೋಪ ಇದೆ. ಆದರೆ ಮೇರಿ ಪರ ವಕೀಲರು, ಮೇರಿ ಮೇಲೆ ಕೇವಲ ಹಣಕ್ಕಾಗಿ ಈ ರೀತಿಯ ನೀಚ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.