Shocking : ಬೆಂಗಳೂರಿನ (Bengaluru) ಬಿಟಿಎಂ ಲೇಔಟ್ ನಲ್ಲಿ ನಡೆದಿದೆ ಎನ್ನಲಾದ ಒಂದು ಘಟನೆ ಇದೀಗ ದೊಡ್ಡ ಸುದ್ದಿಯಾಗಿದ್ದು, ಈ ಆ ಆಘಾತಕಾರಿ ಸುದ್ದಿ ಕೇಳಿ ಎಲ್ಲರೂ ಶಾಕ್ (Shocking) ಆಗುತ್ತಿದ್ದಾರೆ. ಹೌದು, ಬಿಟಿಎಂ ಲೇಔಟ್ ನಲ್ಲಿ ವಾಸವಾಗಿರುವ ಹಿಂದಿ ಭಾಷಿಕ ಯುವತಿಯೊಬ್ಬಳು ರಸ್ತೆಯಲ್ಲಿ ನಡೆದು ಹೋಗುವ ಸಮಯದಲ್ಲಿ, ಆಕೆ ವ್ಲಾಗ್ ಮಾಡುತ್ತಿದ್ದಳು, ಆಗ ಅಲ್ಲಿಗೆ ಬಂದಂತಹ ಸೈಕಲ್ ಸವಾರ ಹುಡುಗನೊಬ್ಬ ಈ ಯುವತಿಯ ಎದೆಭಾಗವನ್ನು ಮುಟ್ಟಿ ಪರಾರಿ ಆಗಿದ್ದಾನೆ. ಈ ಘಟನೆ ಬಗ್ಗೆ ಹೇಳಿಕೊಂಡು ಆ ಯುವತಿ ಕಣ್ಣೀರು ಹಾಕಿದ್ದಾಳೆ.
ಕಿರುಕುಳಕ್ಕೆ ಒಳಗಾದ ಯುವತಿಯ ಹೆಸರು ನೇಹಾ ಬಿಸ್ವಾಲ್ (Neha Biswal) ಎನ್ನಲಾಗಿದೆ. ಈಕೆ ಉತ್ತರ ಭಾರತ ಮೂಲದವರು. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಾ ಇಲ್ಲೇ ನೆಲೆಸಿರುವ ಈಕೆ ಕೆಲಸ ಮುಗಿಸಿಕೊಂಡು ಬರುವಾಗ ಮತ್ತು ಬಿಡುವಿನ ಸಮಯದಲ್ಲಿ ಸುಂದರವಾದ ವೀಡಿಯೋಗಳನ್ನು ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.
ನೇಹಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಹಿಂಬಾಲಕರು ಇದ್ದಾರೆ. ನಡೆದ ಘಟನೆಯಿಂದ ಗಾಬರಿಗೊಂಡಿರುವ ಯುವತಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕವನ್ನು ಹೊರ ಹಾಕಿದ್ದಾರೆ. ಯುವತಿ ಕೆಲಸವನ್ನು ಮುಗಿಸಿ ಮನೆಗೆ ಬರುವಾಗ ವ್ಲಾಗ್ ವೀಡಿಯೋ ಮಾಡಿಕೊಂಡು ಬರುತ್ತಿದ್ದರು.
ಈ ವೇಳೆ ಹಾಯ್ ಹೇಳುತ್ತಾ ಬಂದ ಹುಡುಗ ಇದ್ದಕ್ಕಿದ್ದ ಹಾಗೆ ಯುವತಿಯ ಎದೆ ಭಾಗಕ್ಕೆ ಕೈ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ವೀಡಿಯೋದಲ್ಲಿ ತನ್ನ ಮುಖ ಕಾಣದಂತೆ ಎಚ್ಚರ ವಹಿಸಿದ್ದಾನೆ. ಯುವತಿಯ ಇನ್ಸ್ಟಾಗ್ರಾಂ ವೀಡಿಯೋ ಬಹಳ ಬೇಗ ವೈರಲ್ ಆಗಿ ಅನೇಕರು ಆಕ್ರೋಶವನ್ನು ಮತ್ತು ಆತಂಕವನ್ನು ಸಹಾ ಹೊರ ಹಾಕಿದ್ದಾರೆ.
BBK 11 : ಕಾಲಿಂದ ಒದ್ದ ಗೋಲ್ಡ್ ಸುರೇಶ್, ಶಾಪ ಹಾಕಿದ ಅನುಷಾ; ಬಿಗ್ ಬಾಸ್ ಮನೇಲಿ ಬರೀ ಜಗಳ ಜಗಳ