SeethaRama Serial: ಸೀತಾ ಈ ಮನೆಗೆ ತಕ್ಕ ಸೊಸೆ, ಉಲ್ಟಾ ಹೊಡೆದ ಭಾರ್ಗವಿ, ತಬ್ಬಿಬ್ಬಾದ ಗಂಡ; ಶಾಕಿಂಗ್ ಟ್ವಿಸ್ಟ್

Written by Soma Shekar

Published on:

---Join Our Channel---

SeethaRama Serial: ಸೀತಾ ರಾಮ ಸೀರಿಯಲ್ (SeethaRama Serial) ಕನ್ನಡ ಕಿರುತೆರೆಯ ಬಹು ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದೆ. ಸೀತಾ ರಾಮನ ಮದುವೆ ಯಾವಾಗ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಅವರ ಮದುವೆ ಹತ್ತಿರವಾಗ್ತಿದೆ ಅಂತ ಕುತೂಹಲದಲ್ಲಿ ಇರೋವಾಗಲೇ ಭಾರ್ಗವಿ (Bhargavi) ಮದುವೆ ನಿಲ್ಲಿಸೋದಕ್ಕೆ ಹೂಡಿದ್ದ ಕುತಂತ್ರಗಳು ಬೇಸರವನ್ನು ಉಂಟು ಮಾಡಿತ್ತು. ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತಮ್ಮ ಅಸಮಾಧಾನವನ್ನು ಸಹಾ ಹೊರ ಹಾಕಿದ್ದರು.

ಆದರೆ ಈಗ ಭಾರ್ಗವಿ ಮತ್ತೊಮ್ಮೆ ಎಲ್ಲರಿಗೂ ದೊಡ್ಡ ಶಾಕ್ ಅನ್ನೇ ನೀಡಿದ್ದಾಳೆ. ಒಂದು ಕಡೆ ಸೂರ್ಯಪ್ರಕಾಶ್ ಮತ್ತು ರಾಮ್ ಮಾತನಾಡ್ತಾ ಇದ್ದು, ಈ ವೇಳೆ ಸೂರ್ಯ ಪ್ರಕಾಶ್ ಯಾಕೆ ನಿನ್ನನ್ನ ದಿಢೀರ್ ಅಂತ ಇಲ್ಲಿಂದ ಕಳಿಸೋಕೆ ಪ್ಲಾನ್ ಮಾಡಿದ್ರು, ಅಷ್ಟಕ್ಕೂ ಅದನ್ನ ಮಾಡಿದ್ಯಾರು, ಅದನ್ನ ತಿಳಿಯೋಕೆ ಅಶೋಕನಿಗೆ ಇನ್ವಿಸ್ಟಿಗೇಷನ್ ಮಾಡೋಕೆ ಹೇಳಿದ್ದೀನಿ. ಅವನು ಹಿಡಿದ ಕೆಲಸ ಪೂರ್ತಿ ಆಗೊವರೆಗೂ ಬಿಡಲ್ಲ ಎಂದಿದ್ದಾರೆ.

ರಾಮ್ (Ram) ಕೂಡಾ ಆ ವಿಷಯವನ್ನು ನಾನು ನೋಡ್ಕೋಳ್ತೀನಿ ಬಿಡಿ ಅಂತ ತಾತನಿಗೆ ಹೇಳಿದ್ದಾನೆ. ಆದರೆ ಈ ಎಲ್ಲಾ ಬೆಳವಣಿಗೆಗಳಿಂದ ಸಮಸ್ಯೆ ಆಗೋದು ಮಾತ್ರ ತನಗೆ ಅನ್ನೋದು ಭಾರ್ಗವಿಗೆ ಗೊತ್ತಿದೆ. ಭಾರ್ಗವಿಯ ಗಂಡ ಹೆಂಡತಿಯನ್ನ ರೇಗಿಸ್ತಾ ಪಾಪ ಸೀತಾ ಮೇಲೆ ಯಾಕಿಷ್ಟು ಕೋಪ ನಿನಗೆ, ಸೀತಾ ಅಲ್ಲ ಬೇರೆ ಯಾರು ಈ ಮನೆಗೆ ಸೊಸೆ ಆಗಿ ಬಂದ್ರು ರಾಮನ ಆಸ್ತಿಯಲ್ಲಿ ಬಿಡಿಗಾಸು ನಿನಗೆ ಸಿಗಲ್ಲ ಅಂದಿದ್ದಾನೆ.

ಆದರೆ ಭಾರ್ಗವಿ ತನ್ನ ಗಂಡನಿಗೆ ಶಾಕ್ ನೀಡ್ತಾ, ಈ ಮನೆಗೆ ಸೀತಾನೇ (Seetha) ತಕ್ಕ ಸೊಸೆ ಅಂತ ಹೇಳಿದ್ದಾಳೆ. ಅಲ್ಲದೇ ರಾಮನಿಂದ ಅಲ್ದೇ ಹೋದ್ರು ಸೀತಾ ಇಂದ ಮತ್ತು ಅವಳ ಮಗಳಿಂದ ಈ ಆಸ್ತಿ ನನಗೆ ಬರುತ್ತೆ ಅಂತ ಹೇಳಿದ್ದಾಳೆ. ಭಾರ್ಗವಿ ಮತ್ತೆ ಹೊಸ ತಂತ್ರ ಹೆಣೆದಿರೋ ಹಾಗೆ ಕಾಣ್ತಿದೆ. ಇಷ್ಟು ದಿನ ಮದುವೆ ನಿಲ್ಲಿಸೋ ಪ್ರಯತ್ನ ಮಾಡ್ತಿದ್ದ ಭಾರ್ಗವಿ ಈಗ ಮದುವೆ ಬೇಗ ಆಗೋ ಹಾಗೆ ಮಾಡ್ತಾಳೆ ಅನ್ನೋದು ಸ್ಪಷ್ಟವಾಗಿದೆ.

Leave a Comment