SeethaRama Serial: ರಾಮನಿಗೆ ಆ್ಯಕ್ಸಿಡೆಂಟ್, ಹೊಸ ಪ್ಲಾನ್ ನಲ್ಲಿ ಸಕ್ಸಸ್ ಆಗೇ ಬಿಟ್ಲಾ ಭಾರ್ಗವಿ; ಟೆನ್ಷನ್ ನಲ್ಲಿ ಸೀತಾ

Written by Soma Shekar

Published on:

---Join Our Channel---

SeethaRama Serial: ಸೀತಾ ರಾಮ ಸೀರಿಯಲ್ ನಲ್ಲಿ (SeethaRama Serial) ರಾಮ್ ಮತ್ತು ಸೀತಾ ಮದುವೆಗೆ ಸಿದ್ಧತೆಗಳು ನಡೀತಾ ಇದೆ. ಮತ್ತೊಂದು ಕಡೆ ಹೇಗಾದ್ರೂ ಮಾಡಿ ಈ ಮದುವೆಯನ್ನ ನಿಲ್ಲಿಸಬೇಕು ಅನ್ನೋದು ಭಾರ್ಗವಿಯ (Bhargavi) ಕುತಂತ್ರವಾಗಿದೆ. ಅದಕ್ಕೆ ಏನೆಲ್ಲಾ ಅವಕಾಶ ಇದೆ ಅನ್ನೋದನ್ನ ಹುಡುಕ್ತಾ ಇದ್ದಾಳೆ. ಮತ್ತೊಂದು ಕಡೆ ರಾಮನ ತಾಯಿಯ ಪಾಲಿನ ಆಸ್ತಿಯಲ್ಲಿ ರಾಮ್ ತನ್ನ ಹೆಂಡತಿ ಮತ್ತು ಮಕ್ಕಳಿಗೆ ಮಾತ್ರವೇ ಆಸ್ತಿ ಕೊಡಬಹುದೇ ಹೊರತು ಬೇರೆ ಯಾರಿಗೂ ಕೊಡೋಕೆ ಸಾಧ್ಯ ಇಲ್ಲ ಅನ್ನೋದನ್ನ ಲಾಯರ್ ಹೇಳ್ತಿರೋದು ಕೇಳಿ ಭಾರ್ಗವಿ ಕೆಂಡವಾಗಿದ್ದಾಳೆ.

ದೇಸಾಯಿ ಕುಟುಂಬದ (Desai Family) ಹಿರಿಯರು ಕೂಡಾ ಸಿಹಿಯನ್ನ ತಮ್ಮ ಮನೆ ಮಗುವಾಗಿ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಈಗ ಇವೆಲ್ಲವುಗಳ ನಡುವೆ ಕಥೆಯಲ್ಲಿ ಮತ್ತೊಂದು ಹೊಸ ಟ್ವಿಸ್ಟ್ ಎದುರಾಗಿದೆ. ಮನೆಯಲ್ಲಿ ಎಲ್ಲರೂ ಕುಳಿತು ಮಾತನಾಡುವಾಗಲೇ ಭಾರ್ಗವಿಗೆ ಫೋನ್ ಕರೆಯೊಂದು ಬಂದಿದ್ದು, ಅವಳು ಕರೆ ಸ್ವೀಕರಿಸಿ ಮಾತನಾಡೋವಾಗ ಅವಳ ಮುಖದಲ್ಲಿ ಭಯ, ಆತಂಕ ಎರಡೂ ಕಂಡಿದೆ.

ಸೂರ್ಯಪ್ರಕಾಶ್ ಆಗ ಏನಾಯ್ತು ಅಂತ ಕೇಳಿದಾಗ ಭಾರ್ಗವಿ ಆತಂಕದಿಂದಲೇ ಏರ್ ಪೋರ್ಟ್ ಹತ್ರ ಒಂದು ಕಾರು ಆ್ಯಕ್ಸಿಡೆಂಟ್ ಆಗಿದೆ ಮತ್ತು ಅದು ರಾಮ್ ಇರಬಹುದು ಅಂತ ಫೋನ್ ಬಂದಿತ್ತು ಮಾವಯ್ಯ ಅಂತ ಹೇಳಿದ್ದು, ಭಾರ್ಗವಿ ಹೇಳಿದ ಮಾತನ್ನು ಕೇಳಿ ಸೂರ್ಯ ಪ್ರಕಾಶ್ ಸಮೇತ ಅಲ್ಲಿ ಇದ್ದವರೆಲ್ಲಾ ಗಾಬರಿಯಾಗಿದ್ದು ಆತಂಕಗೊಂಡಿದ್ದಾರೆ.

ತನ್ನ ಮನೇಲಿದ್ದ ಸೀತಾಗೆ ಕೂಡಾ ಫೋನ್ ನಲ್ಲಿ ಸೀತಾಗೆ ವಿಷಯ ಗೊತ್ತಾಗಿದೆ. ಕಾರಲ್ಲಿ ಯಾರೋ ಲೇಡಿ ಇದ್ದಾರೆ ಅಂತ ಮಾತಾಡಿಕೊಳ್ತಾ ಇದ್ದಾರೆ, ಅಂದ್ರೆ ಚಾಂದಿನಿನ ಇದು ಮಾಡ್ಸಿರೋದು ಅಂತ ಭಯದಿಂದ ಸೀತಾ ಸಿಹಿಗೆ ಮನೇಲಿ ಇರು ನಾನು ಬರ್ತೀನಿ ಅಂತ ಹೇಳಿ ವಿಷಯ ಏನು ಅಂತ ತಿಳಿಯೋಕೆ ತನ್ನ ಮನೆಯಿಂದ ಹೊರಗೆ ಹೊರಟಿದ್ದಾಳೆ.

ಇವತ್ತಿನ ಪ್ರೊಮೊ ನೋಡಿದ ನೆಟ್ಟಿಗರು ಕಾಮೆಂಟ್ ಗಳಲ್ಲಿ ರಾಮ್ ಗೆ ಎಷ್ಟು ಸಲ ಆ್ಯಕ್ಸಿಡೆಂಟ್ ಮಾಡಿಸ್ತೀರಾ? ಕಥೆ ಗೊತ್ತಿಲ್ಲ ಅಂದ್ರೆ ಸೀರಿಯಲ್ ನ ಮುಗಿಸಿ ಬಿಡಿ, ಈ ಸೀರಿಯಲ್ ಬೇರೆ ಸೀರಿಯಲ್ ಗಳ ತರ ಅಲ್ಲ ಅನ್ಕೊಂಡಿದ್ವಿ ಬಟ್ ಈಗ ಇದು ಅದೇ ಹಾದಿ ಹಿಡಿದಿದೆ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಕಥೆಯಲ್ಲಿ ನಿಜವಾಗಲೂ ರಾಮ್ ಗೆ ಆ್ಯಕ್ಸಿಡೆಂಟ್ ಆಯ್ತಾ ಅನ್ನೋದನ್ನ ಎಪಿಸೋಡ್ ನಲ್ಲಿ ನೋಡಬೇಕಾಗಿದೆ.

Leave a Comment