Sangeetha Sringeri: ಸಿರಿ ಬರ್ತಡೇಗೆ ಬಹಳ ದುಬಾರಿ ಗಿಫ್ಟ್ ಕೊಟ್ಟ ಸಂಗೀತಾ; ಏನದು ಉಡುಗೊರೆ ?

Written by Soma Shekar

Published on:

---Join Our Channel---

Sangeetha Sringeri: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ (Bigg Boss Kannada 10) ಜನಪ್ರಿಯ ನಟಿಯರಾದ ಸಿರಿ ಅವರು ಮತ್ತು ಸಂಗೀತಾ ಶೃಂಗೇರಿ ಅವರು ಸ್ಪರ್ಧಿಗಳಾಗಿದ್ದವರು. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಈ ಇಬ್ಬರ ನಡುವೆ ಒಂದು ಉತ್ತಮವಾದ ಸ್ನೇಹ ಮತ್ತು ಆತ್ಮೀಯತೆ ಇದ್ದ ವಿಚಾರವು ಎಲ್ಲರಿಗೂ ತಿಳಿದೇ ಇದೆ. ಬಿಗ್ ಬಾಸ್ ನಂತರವೂ ಸಹಾ ಸಂಗೀತಾ ಮತ್ತು ಸಿರಿ ಅವರ ಆತ್ಮೀಯತೆ ಹಾಗೆ ಮುಂದುವರೆದಿದೆ.

ಸಿರಿ (Siri) ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಾಗ ಸಂಗೀತಾಗೆ ಒಂದು ಅಡ್ವಾಂಟೇಜ್ ಕೊಟ್ಟಿದ್ದರು. ಆ ಅಡ್ವಾಂಟೇಜ್ ನಿಂದಾಗಿ ಸಂಗೀತಾ ಕ್ಯಾಪ್ಟನ್ಸಿ ರೇಸ್ ಅನ್ನು ಪ್ರವೇಶ ಮಾಡುವುದಕ್ಕೆ ಸಾಧ್ಯವಾಗಿತ್ತು.

ಹೀಗೆ ಬಿಗ್ ಬಾಸ್ ಮನೆಯಲ್ಲಿ ಸಿರಿ ಮತ್ತು ಸಂಗೀತಾ ನಡುವೆ ಇದ್ದ ಬಾಂಧವ್ಯವು ಅವರು ನಡುವಿನ ಆತ್ಮೀಯತೆಗೆ ಸಾಕ್ಷಿಯಾಗಿತ್ತು. ಬಿಗ್ ಬಾಸ್ ನಂತರವೂ ಸಂಗೀತಾ ಅದೇ ಆತ್ಮೀಯತೆಯನ್ನು ಮುಂದುವರೆಸಿದ್ದಾರೆ.

ಇತ್ತೀಚಿಗೆ ಸಿರಿ ಅವರ ಜನ್ಮದಿನ ಇತ್ತು. ಈ ವೇಳೆ ಸಂಗೀತಾ ಶೃಂಗೇರಿ ಅವರು ಸಿರಿ ಅವರ ಮನೆಗೆ ಭೇಟಿ ನೀಡಿ, ಸಿರಿ ಅವರಿಗೆ ಬಹಳ ವಿಶೇಷವಾಗಿ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದು, ಸಿರಿ ಅವರು ಈ ಖುಷಿಯ ಕ್ಷಣವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಸಿರಿ ಅವರ ಮನೆಗೆ ಭೇಟಿ ನೀಡಿ ಅವರಿಗೆ ದುಬಾರಿ ಉಡುಗೊರೆಯನ್ನ ಸಂಗೀತಾ ಅವರು ನೀಡಿದ್ದು ಸಂಗೀತಾ ಕೊಟ್ಟ ಉಡುಗೊರೆಯನ್ನು ನೋಡಿ ಸಿರಿ ಅವರು ಬಹಳ ಖುಷಿಯಾಗಿದ್ದಾರೆ. ಹಾಗಾದ್ರೆ ಸಂಗೀತಾ ಕೊಟ್ಟ ಉಡುಗೊರೆ ಏನು?

ಸಿರಿ ಅವರಿಗೆ ಸೀರೆಗಳು ಅಂದ್ರೆ ಬಹಳ ಇಷ್ಟ ಎನ್ನುವ ಕಾರಣದಿಂದ ಸಂಗೀತಾ ಅವರು ಒಂದು ಟಾಪ್ ಬ್ರ್ಯಾಂಡ್ ನ ದುಬಾರಿ ಸೀರೆಯನ್ನೇ ಸಿರಿ ಅವರಿಗೆ ಅವರ ಜನ್ಮದಿನದ ಉಡುಗೊರೆಯನ್ನಾಗಿ ನೀಡಿದ್ದಾರೆ.

ಇದೇ ವೇಳೆ ಸಂಗೀತಾ ಅವರು ಸಿರಿ ಅವರ ಅಕ್ಕನ ಮಗಳಿಗೂ ಒಂದು ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಸಂಗೀತಾ ಅವರು ಬಿಗ್ ಬಾಸ್ ನಂತರ ಅನ್ಯ ಸ್ಪರ್ಧಿಗಳ ಜೊತೆಗೆ ಕಾಣಿಸಿಕೊಂಡಿದ್ದು ತೀರಾ ಅಪರೂಪ ಎಂದೇ ಹೇಳಬಹುದಾಗಿದೆ.

ಅವರ ಮಾರಿ ಗೋಲ್ಟ್ ಸಿನಿಮಾದ ಸೆಲೆಬ್ರಿಟಿ ಶೋ ಗೆ ಸಿರಿ ಅವರು ಆಗಮಿಸಿದ್ದರು. ಉಳಿದಂತೆ ಪ್ರತಾಪ್, ಇಶಾನಿ ಮತ್ತು ನೀತು ವನಜಾಕ್ಷಿ ಅವರು ಸಹಾ ಸಂಗೀತಾ ಜೊತೆಗೆ ಕಾಣಿಸಿಕೊಂಡಿದ್ದರು.

Leave a Comment