ಬೇಸಿಗೆಯ ಬಿಸಿ ಏರಿಸಿದ ಚೈತ್ರ ಜೆ ಆಚಾರ್; ಸಮ್ಮರ್ ಫ್ಯಾಷನ್ ಹಾಟ್ ಲುಕ್ ನಲ್ಲಿ ಕಿಚ್ಚು ಹೊತ್ತಿಸಿ ಪಡ್ಡೆಗಳ ಕಾಡಿದ ನಟಿ

Written by Soma Shekar

Published on:

---Join Our Channel---

Chaitra J Achar :ಸ್ಯಾಂಡಲ್ವುಡ್ ನ ನಟಿ ಚೈತ್ರ ಕೆ ಆಚಾರ್ (Chaithra J Achar) ಅವರು ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿ ಎಲ್ಲರ ಗಮನವನ್ನು ಸೆಳೆದವರು. ಈ ಸಿನಿಮಾದಲ್ಲಿನ ಅವರ ನಟನೆಗೆ ಸಾಕಷ್ಟು ಮೆಚ್ಚುಗೆಗಳು ಸಹಾ ಹರಿದು ಬಂದವು.  ನಟಿಯ ಅಭಿನಯವು ಸಿನಿ ಪ್ರೇಮಿಗಳಿಂದ ಚಪ್ಪಾಳೆಯನ್ನು ಸಹಾ ಗಿಟ್ಟಿಸಿಕೊಂಡಿತು. ನಟಿ ಚೈತ್ರ ಜೆ ಆಚಾರ್ ಸಿನಿಮಾದಲ್ಲಿ ಮಾತ್ರವೇ ಅಲ್ಲ, ಅವರು ರಿಯಲ್ ಲೈಫ್ ನಲ್ಲೂ ಕೂಡಾ ಬೋಲ್ಡ್ ಆಗಿದ್ದಾರೆ.

ತಮ್ಮ ಮನಸ್ಸಿಗೆ ಹಿಡಿಸಿದಂತಹ ಬೋಲ್ಡ್ ಮತ್ತು ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಹೊಸ ಫೋಟೋ ಶೂಟ್ ಮಾಡಿಸಿದ್ದು, ಅವರ ಹೊಸ ಹಾಟ್ ಮತ್ತು ಬೋಲ್ಡ್ ಲುಕ್ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟಿ ಈ ಬೋಲ್ಡ್ ಫೋಟೋ ಶೂಟ್ ನಲ್ಲಿ ಹಳದಿ ಬಣ್ಣದ ನೆಟ್ಟೆಡ್  ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.  ಬ್ಲಾಕ್ ಕಲರ್ ನ ಬಿಕಿನಿಯನ್ನು ಅವರು ಧರಿಸಿದ್ದು, ಈ ಹಾಟ್ ಲುಕ್ ಪಡ್ಡೆಗಳ ನಿದ್ದೆಗೆ ಕೊಳ್ಳಿಯಿಟ್ಟಿದೆ. ನಟಿಯ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆಗಳನ್ನ ನೀಡಿದ್ದಾರೆ.‌

ನಟಿಯು ತಮ್ಮ ಫೋಟೋಗಳನ್ನು ಹಂಚಿಕೊಂಡು ಕಾಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿದ್ದಾರೆ. ಆದರೆ ಫ್ಯಾನ್ ಪೇಜ್ ಗಳಲ್ಲಿ ನಟಿಯ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಅಲ್ಲಿ ಕಾಮೆಂಟ್ ಗಳನ್ನು ಮಾಡಿದವರು ಬೇಸಿಗೆಯ ಬಿಸಿಯೇ ಏರಿರೋವಾಗ ನಟಿ ಇನ್ನಷ್ಟು ಬಿಸಿ ಏರಿಸಿದ್ದಾರೆ ಅಂತ ಹೇಳಿದ್ದಾರೆ.

ಈ ಹೊಸ ಫೋಟೋಗಳಲ್ಲಿ ನಟಿ ಯಾವುದೇ ಆಭರಣ ವನ್ನು ಧರಿಸಿಲ್ಲ ಹಾಗೂ ತುಟಿಗಳಿಗೂ ಸಹಾ ಗಾಢವಾದ ಲಿಪ್ ಸ್ಟಿಕ್ ಹಾಕದೇ ಸರಳವಾದ ಲುಕ್ ನಲ್ಲೇ ಕಾಣಿಸಿಕೊಂಡಿದ್ದಾರೆ.  ಆದರೆ ಅವರ ಹಾಟ್ ಅವತಾರ ಮಾತ್ರ ನೋಡುಗರ ಮೇಲೆ ಮೋಡಿಯನ್ನು ಮಾಡುತ್ತಿದೆ.

ಬೋಲ್ಡ್ ಲುಕ್ ನಲ್ಲಿ ಮಿಂಚಿರುವ ನಟಿ ತಮ್ಮ ಫೋಟೋಗಳಿಗೆ ಕ್ಯಾಪ್ಷನ್ ನೀಡುತ್ತಾ, So many amazing things about her … Her body is just one of them ಎಂದು ಬರೆದುಕೊಂಡಿದ್ದಾರೆ. ಅಂದರೆ ಅವಳಲ್ಲಿ ಬಹಳಷ್ಟು ಅದ್ಭುತ ವಿಷಯಗಳಿವೆ. ಅದರಲ್ಲಿ ಅವಳ ದೇಹವೂ ಒಂದು ಎನ್ನುವ ಅರ್ಥವನ್ನು ನೀಡುತ್ತದೆ.

ಚೈತ್ರಾ ಆಚಾರ್ ಅವರ ಫೋಟೋಗಳು ಬೋಲ್ಡ್ ಆಗಿರುತ್ತವೆ. ಆದರೆ ಈ ಬಾರಿ ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದು, ಇದು ಭರ್ಜರಿಯಾಗಿ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿಯರಿಗಿಂತ ಚೈತ್ರ ಜೆ ಆಚಾರ್ ಅವರು ಕಮ್ಮಿಯೇನಿಲ್ಲ ಎಂದೂ ಮೆಚ್ಚುಗೆಗಳನ್ನು ನೀಡಿದ್ದಾರೆ.

Leave a Comment