Samantha: ನನಗೆ ಸಂಭಾವನೆ ಬೇಡ ಬದಲಾಗಿ ಅದನ್ನು ಕೊಡಿ, ಸಮಂತಾ ಹೊಸ ನಿರ್ಧಾರಕ್ಕೆ ನಡುಗಿದ ಟಾಲಿವುಡ್

Written by Soma Shekar

Published on:

---Join Our Channel---

Samantha : ದಕ್ಷಿಣ ಸಿನಿಮಾ (South Cinema) ರಂಗದಲ್ಲಿ ಸ್ಟಾರ್ ನಟಿಯಾಗಿರುವ ಸಮಂತಾ ಇದೀಗ ತಮ್ಮ ಸಂಭಾವನೆ ಬದಲಾಗಿ ಲಾಭದಲ್ಲಿ (Profit) ಪಾಲನ್ನು ಕೇಳುತ್ತಿದ್ದಾರೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿ ಸಮಂತಾ ಗುರುತಿಸಿಕೊಂಡಿದ್ದಾರೆ. ಇದೀಗ ನಟಿಯು ಹೊಸ ಸಿನಿಮಾವೊಂದರ ವಿಚಾರವಾಗಿ ಪ್ರಮುಖ ನಿರ್ಮಾಪಕರೊಬ್ಬರಿಂದ ಸಿಕ್ಕಂತಹ ದೊಡ್ಡ ಕೊಡುಗೆಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಮಂತಾ ಈಗ ತಮ್ಮದೇ ಆದ ಒಂದು ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕುವ ಕಡೆಗೆ ಗಮನವನ್ನು ಹರಿಸಿದ್ದಾರೆ.

ಹೊಸ ಪ್ರಾಜೆಕ್ಟ್ ವಿಚಾರವಾಗಿ ನಿರ್ಮಾಪಕರೊಬ್ಬರು ಲಾಭದಲ್ಲಿ 25% ಅಂದರೆ ಸುಮಾರು ಹತ್ತು ಕೋಟಿಗೂ ಹೆಚ್ಚು ಮೊತ್ತದ ಆಫರ್ ಅನ್ನು ನೀಡಿದರೂ ಸಹಾ ನಟಿ ಅದಕ್ಕೆ ಒಪ್ಪಲಿಲ್ಲ ಹಾಗೂ ನಿರ್ಮಾಣ ಸಂಸ್ಥೆಯ (Production House) ಕಡೆಗೆ ಗಮನ ನೀಡುವ ವಿಚಾರವಾಗಿ ದೃಢ ನಿಶ್ಚಯವನ್ನು ಮಾಡಿಕೊಂಡಿದ್ದಾರೆನ್ನಲಾಗಿದೆ.
ಮೂಲಗಳ ಪ್ರಕಾರ ಸಮಂತಾ ಕಳೆದೊಂದು ಆರು ತಿಂಗಳಿಗೂ ಹೆಚ್ಚು ಸಮಯದಿಂದ ತಮ್ಮ ನಿರ್ಮಾಣ ಸಂಸ್ಥೆಯ ಕುರಿತಾಗಿ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇಂತಹುದೊಂದು ಹೊಸ ಸಾಹಸಕ್ಕೆ ಮುಂದಾಗುವ ಮೊದಲು ಸ್ನೇಹಿತರು ಮತ್ತು ಸಹವರ್ತಿಗಳೊಂದಿಗೆ ಸಮಾಲೋಚಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಟಿ ಗಳಿಸುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ತನ್ನ ಸ್ವಂತ ಯೋಜನೆಗಳನ್ನು ಮುನ್ನಡೆಸುವ ಮೂಲಕ ತನ್ನ ಜನಪ್ರಿಯತೆಯನ್ನು ಲಾಭ ಮಾಡಿಕೊಳ್ಳುವ ಗುರಿಯನ್ನು ನಟಿ ಹೊಂದಿದ್ದಾರೆ. ಸಮಂತಾ ಅವರ ಮುಂದಿನ ಸಿನಿಮಾ ಅವರ ಮುಂಬರುವ ಆಕ್ಷನ್ ಚಿತ್ರ, ‘ಮಾ ಇಂಟಿ ಬಂಗಾರಮ್,’ ಅವರ ಬ್ಯಾನರ್‌ ನ ಆರಂಭದ ಸೂಚನೆಯಾಗಿದೆ.

ನಟಿಯ ಇಂತಹುದೊಂದು ಕಾರ್ಯತಂತ್ರದ ಕ್ರಮವು, ಆಕೆಯ ಸೃಜನಶೀಲ ದೃಷ್ಟಿ ಮತ್ತು ತನ್ನ ವೃತ್ತಿಯ ಹಾದಿಯಲ್ಲಿ ತನಗೊಂದು ಸ್ಥಾನವನ್ನು ಕಲ್ಪಿಸಿಕೊಡುವ ವೇದಿಕೆಗಾಗಿ ತನ್ನ ಸಮರ್ಪಣೆಯನ್ನು ಪ್ರದರ್ಶಿಸುತ್ತಿದೆ. ಸಮಂತಾ ಅವರ ಮಹತ್ವಾಕಾಂಕ್ಷೆ ಅವರನ್ನು ಟಾಪ್ ತೆಲುಗು ನಟಿಯರಲ್ಲಿ ಒಬ್ಬರನ್ನಾಗಿಸಿದೆ. ಅನುಷ್ಕಾ ಶೆಟ್ಟಿ, ಕಾಜಲ್ ಅಗರ್ವಾಲ್ ಮತ್ತು ತಮನ್ನಾ ಭಾಟಿಯಾ ಅವರಂತಹ ಸಮಕಾಲೀನರಿಗಿಂತ ಭಿನ್ನವಾಗಿ ಈಗ ನಿರ್ಮಾಣ ಸಂಸ್ಥೆ ಹುಟ್ಟು ಹಾಕುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Leave a Comment