Anant Ambani Wedding: ಪತಿ, ಫ್ಯಾಮಿಲಿ ಜೊತೆಗಲ್ಲ, ಸಲ್ಮಾನ್ ಖಾನ್ ಜೊತೆ ನಿಂತ ಐಶ್ವರ್ಯ ರೈ; ವೈರಲ್ ಫೋಟೋ ಹಿಂದಿನ ಸತ್ಯವೇನು?

Written by Soma Shekar

Published on:

---Join Our Channel---

Anant Ambani Wedding: ಅನಂತ್‌ ಅಂಬಾನಿ ರಾಧಿಕಾ ಮರ್ಚೆಂಟ್ (Anant Ambani wedding) ಮದುವೆ ಸಂಭ್ರಮದ ಸುದ್ದಿಗಳು ಬಹುತೇಕ ಎಲ್ಲಾ ಮಾದ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದೆ. ಈ ವಿವಾಹ ಮಹೋತ್ಸವದಲ್ಲಿ ವಿಶ್ವದ ಸಿರಿವಂತರು, ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾ ಸ್ಟಾರ್ ಗಳ, ಉದ್ಯಮಿಗಳು, ಗಣ್ಯರು ಹಾಜರಾಗಿ ಖುಷಿಯಿಂದ ಸಂಭ್ರಮಿಸಿದ್ದಾರೆ. ವಿಶ್ವದ ದುಬಾರಿ ಮದುವೆಗಳ ಸಾಲಿಗೆ ಅನಂತ್ ರಾಧಿಕಾ ಮದುವೆ ಸೇರ್ಪಡೆಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಫೋಟೋಗಳು ಮತ್ತು ವೀಡಿಯೋಗಳು ವೈರಲ್ ಆಗಿದೆ. ಇದೇ ವೇಳೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದು ಅಮಿತಾಬ್ ಬಚ್ಚನ್ (Amitab Bachchan) ಕುಟುಂಬದ ವೀಡಿಯೋ. ಏಕೆಂದರೆ ಅಮಿತಾಬ್ ಕುಟುಂಬ ಕ್ಯಾಮರಾ ಕಣ್ಣಿಗೆ ಪೋಸ್ ನೀಡಲು ಬಂದಾಗ ಸೊಸೆ ಐಶ್ವರ್ಯ ರೈ ಮತ್ತು ಮೊಮ್ಮಗಳು ಆರಾಧ್ಯ ಅಲ್ಲಿ ಇರಲಿಲ್ಲ.

ಅನಂತರ ಐಶ್ವರ್ಯ (Aishwarya Rai) ಮತ್ತು ಆರಾಧ್ಯ ಪ್ರತ್ಯೇಕವಾಗಿ ಇಬ್ಬರೇ ಆಗಮಿಸಿ ಕ್ಯಾಮರಾ ಮುಂದೆ ಕಾಣಿಸಿಕೊಂಡರು. ಪತಿ ಹಾಗೂ ಕುಟುಂಬದ ಜೊತೆಗೆ ಐಶ್ವರ್ಯ ಕಾಣಿಸಿಕೊಳ್ಳದೇ ಇದ್ದುದ್ದನ್ನು ನೋಡಿದ ನೆಟ್ಟಿಗರು ಅಭಿಷೇಕ್ ಐಶ್ವರ್ಯ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಮಾತನಾಡಲು ಆರಂಭಿಸಿದ್ದಾರೆ.

ಆದರೆ ಇವೆಲ್ಲವುಗಳ ಬೆನ್ನಲ್ಲೇ ಐಶ್ವರ್ಯ ರೈ ಸಲ್ಮಾನ್ ಖಾನ್ (Salman Khan) ಮತ್ತು ಅವರ ಸಹೋದರಿ ಜೊತೆಗೆ ನಿಂತು ಕ್ಯಾಮರಾಗೆ ಪೋಸ್ ನೀಡಿದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಫೋಟೋ ನಿಜವಲ್ಲ ಇದು ಎಐ ನಿಂದ ಮೂಡಿ ಬಂದ ಫೋಟೋ ಎಂದು ಅನೇಕರು ಹೇಳುತ್ತಿದ್ದಾರೆ. ಇದೇ ವೇಳೆ ಇನ್ನೂ ಕೆಲವರು ಇಲ್ಲ ಇದು ನಿಜವಾದ ಫೋಟೋ ಎಂದೂ ವಾದಿಸುತ್ತಿದ್ದಾರೆ.

ಫೋಟೋ ನೋಡಿದ ಮೇಲೆ ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಅಭಿಮಾನಿಗಳು ಹಿಂದಿನ ದಿನಗಳು ನೆನಪಾದವು ಎಂದರೆ ಇನ್ನೂ ಕೆಲವರು ಎಐ ತಂತ್ರಜ್ಞಾನ ಬಂದ ಮೇಲೆ ಇದು ಸಮಾಜದ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

Leave a Comment