Bigg Boss Show: ಬದಲಾದ್ರು ಬಿಗ್ ಬಾಸ್ ನ ನಿರೂಪಕ; ಹೊಸ ನಿರೂಪಕನ ನೋಡಿ ಖುಷಿಯಲ್ಲಿ ತೇಲಾಡಿದ ಫ್ಯಾನ್ಸ್

Written by Soma Shekar

Published on:

---Join Our Channel---

Bigg Boss Show: ಬಿಗ್ ಬಾಸ್ ಶೋ (Bigg Boss Show) ಈಗಾಗಲೇ ವಿವಿಧ ಭಾಷೆಗಳಲ್ಲಿ ದೊಡ್ಡ ಜನಪ್ರಿಯತೆಯನ್ನ ಪಡೆದಿರೋ ರಿಯಾಲಿಟಿ ಶೋ ಆಗಿದ್ದು, ತನ್ನದೇ ಆದ ಅಪಾರ ಪ್ರೇಕ್ಷಕ ವರ್ಗವನ್ನು ಈ ಶೋ ಪಡೆದುಕೊಂಡಿದೆ. ಯಾವುದೇ ಭಾಷೆಯಲ್ಲಿ ಹೊಸ ಸೀಸನ್ ಆರಂಭವಾದರೂ ಸಹಾ ಟಿ ಆರ್ ಪಿ ವಿಚಾರದಲ್ಲೂ ಬೇರೆಲ್ಲಾ ಶೋ ಗಳನ್ನು ಹಿಂದೆ ಹಾಕಿ ಮುನ್ನುಗ್ಗುತ್ತದೆ ಬಿಗ್ ಬಾಸ್ ಶೋ. ಬಿಗ್ ಬಾಸ್ ಕಾರ್ಯಕ್ರಮ ಎಷ್ಟು ಜನಪ್ರಿಯತೆ ಪಡೆದಿದೆಯೋ ಅಷ್ಟೇ ಜನಪ್ರಿಯತೆ ಈ ಶೋ ನ ನಿರೂಪಕರಿಗೂ ಇದೆ.

ಈಗ ಬಿಗ್ ಬಾಸ್ ಮರಾಠಿ ಸೀಸನ್ ಐದರ (Bigg Boss Marathi 5) ದಿನಗಣನೆ ಆರಂಭವಾಗಿದೆ. ಆದರೆ ಈ ಬಾರಿ ಮರಾಠಿ ಬಿಗ್ ಬಾಸ್ ನಲ್ಲಿ ಒಂದು ಮಹತ್ವದ ಬದಲಾವಣೆ ಆಗಿದೆ. ಅದೇನೆಂದರೆ ಈ ಬಾರಿ ಬಿಗ್ ಬಾಸ್ ಮರಾಠಿಯ ನಿರೂಪಕರು ಬದಲಾಗಿದ್ದಾರೆ. ಈ ಬಾರಿ ಹೊಸ ನಿರೂಪಕನಾಗಿ ಬಾಲಿವುಡ್ ನ ಜನಪ್ರಿಯ ನಟ ರಿತೇಶ್ ದೇಶ್ ಮುಖ್ (Ritesh Deshmukh) ಅವರ ಎಂಟ್ರಿ ಆಗಿದೆ.

ಕಳೆದ ನಾಲ್ಕು ಸೀಸನ್ ಗಳನ್ನು ಹಿರಿಯ ನಟ ಮತ್ತು ನಿರ್ದೇಶಕ ಆಗಿರುವ ಮಹೇಶ್ ಮಾಂಜ್ರೇಕರ್ (Mahesh Manjrekar) ನಿರೂಪಣೆಯನ್ನು ಮಾಡಿದ್ದರು. ಆದರೆ ಈಗ ಐದನೇ ಸೀಸನ್ ಗೆ ರಿತೇಶ್ ನಿರೂಪಣೆ ಮಾಡಲಿದ್ದಾರೆ. ವಾಹಿನಿಯು ಮರಾಠಿ ಬಿಗ್ ಬಾಸ್ ಸೀಸನ್ ಐದರ ಪ್ರೊಮೊವನ್ನು ಬಿಡುಗಡೆ ಮಾಡಿದ್ದು, ಪ್ರೊಮೊ ನೋಡಿದ ಬಿಗ್ ಬಾಸ್ ಶೋ ನ ಅಭಿಮಾನಿಗಳು ಅಚ್ಚರಿಯನ್ನು ಪಟ್ಟಿದ್ದಾರೆ ಮತ್ತು ಖುಷಿ ಪಟ್ಟಿದ್ದಾರೆ.

ಹೊಸ ಪ್ರೊಮೊ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡಿದ ನೆಟ್ಟಿಗರು ಮರಾಠಿ ಬಿಗ್ ಬಾಸ್ ಗೆ ಈಗ ಒಂದು ಹೊಸ ಕಳೆ ಬಂತು ಎಂದು ಮೆಚ್ಚುಗೆಗಳನ್ನು ನೀಡಿದ್ದಾರೆ. ಕೆಲವರು ನಾವು ಮಹೇಶ್ ಮಾಂಜ್ರೇಕರ್ ನ ಮಿಸ್ ಮಾಡಿಕೊಳ್ತೀವಿ ಅಂತ ಕಾಮೆಂಟ್ ಗಳನ್ನು ಮಾಡಿದ್ದಾರೆ. ಇದೇ ವೇಳೆ ನಿಜವಾದ ನಿರೂಪಕನ ಎಂಟ್ರಿ ಈಗ ಆಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Leave a Comment