Rashmika Mandanna: ಅಲ್ಲು ಅರ್ಜುನ್ VS ವಿಕ್ಕಿ ಕೌಶಲ್, ಸಂಧಿಗ್ಧದಲ್ಲಿ ರಶ್ಮಿಕಾ; ನಟಿಯ ಬೆಂಬಲ ಯಾರಿಗೆ ?

Written by Soma Shekar

Published on:

---Join Our Channel---

Rashmika Manadanna : ರಶ್ಮಿಕಾ ಮಂದಣ್ಣ (Rashmika Mandanna) ಸದ್ಯಕ್ಕೆ ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ 2 (Pushpa 2) ಸಿನಿಮಾ ನಟಿಯ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಇದೇ ವೇಳೆ ಬಾಲಿವುಡ್ ನಲ್ಲಿ ವಿಕ್ಕಿ ಕೌಶಲ್ (Vicky Kaushal) ಜೊತೆಗೆ ನಟಸಿರುವ ಸಿನಿಮಾ ಪೂರ್ಣವಾಗಿದ್ದರೆ, ಸಲ್ಮಾನ್ ಖಾನ್ ಜೊತೆಗಿನ ಸಿಕಂದರ್ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುವ ವಿಷಯಗಳು ಈಗಾಗಲೇ ಸುದ್ದಿಯಾಗಿದೆ.

ರಶ್ಮಿಕಾ ಮಂದಣ್ಣ‌ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಪುಷ್ಪ 2 ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರುತ್ತದೆ ಎನ್ನುವ ಘೋಷಣೆಯಾಗಿತ್ತು. ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿರುವಾಗಲೇ ಕೆಲವೇ ದಿನಗಳ ಹಿಂದೆಯಷ್ಟೇ ಈ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂಡೂಡಿರುವ ವಿಚಾರ ಹೊರ ಬಂದು ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ.

ಪುಷ್ಪ ಸಿನಿಮಾ ದಿನಾಂಕ ಮುಂದೆ ಹೋದ ಕೂಡಲೇ ಬಾಲಿವುಡ್ ನಲ್ಲಿ ಐದು ಸಿನಿಮಾಗಳನ್ನು ಆಗಸ್ಟ್ 15 ಕ್ಕೆ ಬಿಡುಗಡೆ ಮಾಡಲು ನಿರ್ಧಾರವನ್ನು ಮಾಡಲಾಗಿದೆ. ವಿಷಯ ಏನೇ ಆದರೂ ಈಗ ನಟಿ ರಶ್ಮಿಕಾಗೆ ಒಂದು ಹೊಸ ಸಮಸ್ಯೆ ಎದುರಾಗಲಿದೆ ಎನ್ನುವ ವಿಚಾರವೊಂದು ಈಗ ಎಲ್ಲರ ಗಮನವನ್ನು ಸೆಳೆದಿದೆ.

ಪುಷ್ಪ 2 ಸಿನಿನಾ ಬಿಡುಗಡೆ ಬಹುತೇಕ ಡಿಸೆಂಬರ್ 24 ಕ್ಕೆ ಎಂದು ಹೇಳಲಾಗಿದೆ. ಶಾಕಿಂಗ್ ವಿಚಾರ ಏನೆಂದರೆ ರಶ್ಮಿಕಾ ವಿಕ್ಕಿ ಕೌಶಲ್ ಜೋಡಿಯಾಗಿರುವ ಛಾವಾ (Chaava) ಸಿನಿಮಾ ಸಹಾ ಡಿಸೆಂಬರ್ 24 ಕ್ಕೆ ತೆರೆಗೆ ಬರಲಿದೆ. ಎರಡೂ ಸಿನಿಮಾ ಒಂದೇ ದಿನ ತೆರೆಗೆ ಬರುತ್ತಿರುವ ಕಾರಣ ರಶ್ಮಿಕಾ ಯಾವ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗ್ತಾರೆ ಅನ್ನೋದೇ ಈಗ ಪ್ರಶ್ನೆಯಾಗಿದೆ.

Rani Mukerji: ಅಮಿತಾಬ್ ಬಚ್ಚನ್ ಜೊತೆ ಲಿಪ್ ಲಾಕ್, ಗೊತ್ತಾದ ಕೂಡ್ಲೇ ರಾಣಿ ಮುಖರ್ಜಿ ಮಾಡಿದ್ದು ಶಾಕಿಂಗ್ ಕೆಲಸ

Leave a Comment