Bollywood Actors: ಕರೀನಾ ಜೊತೆ ಅಪ್ಪ ಅಮ್ಮ ಆಟ ಆಡ್ತಿದ್ದೆ, ಬಾಲಿವುಡ್ ನಟನ ಮಾತಿಗೆ ಬಿಚ್ಚಿ ಬಿದ್ದ ಜನರು

Written by Soma Shekar

Published on:

---Join Our Channel---

Bollywood Actors: ಬಾಲಿವುಡ್ ನಲ್ಲಿ ಒಂದೇ ಕುಟುಂಬದಿಂದ ಬಂದಂತಹವರು ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಅದರಲ್ಲಿ ಕಪೂರ್ ಪರಿವಾರದಿಂದ ಬಂದವರು ಬಾಲಿವುಡ್ ನಲ್ಲಿ (Bollywood Actors) ದೊಡ್ಡ ಹೆಸರನ್ನು ಮಾಡಿದ್ದಾರೆ. ಅವರಲ್ಲಿ ರಣಬೀರ್ ಕಪೂರ್ (Ranbir Kapoor) ಮತ್ತು ಕರೀನಾ ಕಪೂರ್ (Kareena Kapoor) ಸಹಾ ಸೇರಿದ್ದಾರೆ. ಬಾಲಿವುಡ್ ನ ದೊಡ್ಡ ಸ್ಟಾರ್ ಗಳ ಸಾಲಿನಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಇವರು ಸಾಕಷ್ಟು ಗಾಸಿಪ್ ಗಳು ಮತ್ತು ಟ್ರೋಲ್ ಗಳಿಗೂ ಸಹಾ ಆಹಾರವಾಗುತ್ತಾರೆ.

ರಣಬೀರ್ ಮತ್ತು ಕರೀನಾ ಕಾಫಿ ವಿತ್ ಕರಣ್ (Koffee With Karan) ಶೋ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಒಂದಷ್ಟು ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಮಾತಕತೆಯ ಸಂದರ್ಭದಲ್ಲಿ ರಣಬೀರ್ ಕಪೂರ್ ತಮ್ಮ ಜೀವನದ ಒಂದು ಬಹಳ ಮುಜುಗರದ ಸನ್ನಿವೇಶವನ್ನು ಕುರಿತಾಗಿ ಹೇಳಿಕೊಂಡಿದ್ದರು. ಅದು ಅವರ ಬಾಲ್ಯದಲ್ಲೆ ನಡೆದಂತಹ ಘಟನೆಯಾಗಿತ್ತು. ಬಾಲ್ಯದಲ್ಲಿ ರಣಬೀರ್ ತಮ್ಮ ಅಕ್ಕ ರಿಧಿಮಾ ಮನೆಯಲ್ಲಿ ಹೌಸ್ ಹೌಸ್ ಆಟವನ್ನು ಆಡುತ್ತಿದ್ದರಂತೆ.

ಆಗ ಆ ದಿನಗಳಲ್ಲಿ ನಾನು ನಾಲ್ಕು ವರ್ಷದ ಹುಡುಗನಾಗಿದ್ದೆ. ರಿಧಿಮಾ ಮತ್ತು ಕರೀನಾಗೆ ಆರು ವರ್ಷ ವಯಸ್ಸು. ಆಗ ನಾವು ಆಡ್ತಿದ್ದ ಆಟಗಳಲ್ಲಿ ಗಂಡ ಹೆಂಡ್ತಿ ಆಟ ನನಗೆ ಚೆನ್ನಾಗಿ ನೆನಪಿದೆ. ಆ ಆಟ ನನಗೆ ಇಂದಿಗೂ ಡಿಸ್ಟರ್ಬ್ ಮಾಡುತ್ತೆ ಎಂದು ಹೇಳಿದಾಗ ಅಲ್ಲೇ ಇದ್ದ ಕರೀನಾ ಕಪೂರ್ ಅವರು ಸದ್ಯಕ್ಕೆ ನನಗೆ ಅದ್ಯಾವುದೋ ನೆನಪಿಲ್ಲ ಎನ್ನುವ ಮಾತನ್ನು ಹೇಳುತ್ತಾ ನಕ್ಕಿದ್ದರು.

ರಣಬೀರ್ ಕಪೂರ್ ಮತ್ತು ಕರೀನಾ ಕಪೂರ್ ಸೋದರ ಸಂಬಂಧಿಗಳಾಗಿದ್ದಾರೆ. ಕಪೂರ್ ಕುಟುಂಬದ ಕುಡಿಗಳು ಎನ್ನುವುದು ಅವರ ಮೊದಲ ಪರಿಚಯವಾಗಿದೆ. ರಿಧಿಮಾ ಕಪೂರ್ ಸಾಹ್ನಿ ರಣಬೀರ್‌ ಅವರ ಸ್ವಂತ ಅಕ್ಕನಾಗಿದ್ದು, ರಿಷಿ ಕಪೂರ್ ಮತ್ತು ನಿತು ಕಪೂರ್ ಅವರ ಮಕ್ಕಳಾದರೆ, ಕರೀನಾ ಕಪೂರ್ ಅವರು ರಣಧೀರ್ ಕಪೂರ್ ಮತ್ತು ಬಬಿತಾ ಕಪೂರ್ ಅವರ ಎರಡನೇ ಮಗಳಾಗಿದ್ದಾರೆ.

Leave a Comment