Raja Rani Show: ಸಮಾಜಕ್ಕೆ ಏನ್ ಸಂದೇಶ ಕೊಡ್ತಿದ್ದೀರಾ, ರಾಜಾ ರಾಣಿ ಶೋ ಮೇಲೆ ನೆಟ್ಟಿಗರ ಸಿಟ್ಟಿಗೆ ಕಾರಣವೇನು?

Written by Soma Shekar

Published on:

---Join Our Channel---

Raja Rani Show: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ ರಾಜಾ ರಾಣಿ ಶೋ (Raja Rani Show) ಒಂದಾಗಿದೆ. ಈಗ ಈ ಕಾರ್ಯಕ್ರಮದ ಮತ್ತೊಂದು ಹೊಸ ಸೀಸನ್ ರಾಜಾ ರಾಣಿ ರೀಲೋಡೆಡ್ ಎನ್ನುವ ಹೆಸರಿನಲ್ಲಿ ಪ್ರಸಾರಕ್ಕೆ ಸಜ್ಜಾಗಿದ್ದು, ಈಗಾಗಲೇ ವಾಹಿನಿ ಶೇರ್ ಮಾಡಿರುವ ಪ್ರೊಮೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಜನಪ್ರಿಯ ಜೋಡಿಗಳು ಸ್ಪರ್ಧಿಗಳಾಗಿ ಈ ಬಾರಿ ರಾಜಾ ರಾಣಿ ಶೋ ಗೆ ಎಂಟ್ರಿ ಕೊಡುವಾಗಲೇ ಒಂದು ಜೋಡಿಯ ಆಗಮನ ನೋಡಿ ಪ್ರೇಕ್ಷಕರು ಶಾಕ್ ಆಗಿದ್ದಾರೆ ಮತ್ತು ಈ ವಿಚಾರವಾಗಿ ಪರ, ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವಾಹಿನಿ ಶೇರ್ ಮಾಡಿದ ಪ್ರೊಮೋಗಳಲ್ಲಿ ಒಂದರಲ್ಲಿ ಮಾರಿಮುತ್ತು ಅವರ ಮೊಮ್ಮಗಳು, ಬಿಗ್ ಬಾಸ್ ನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದ ಜಯಶ್ರೀ (Jayashree) ಅವರು ತಮ್ಮ ಸಂಗಾತಿ ಸ್ಟೀವನ್ (Steven) ಜೊತೆ ರಾಜಾ ರಾಣಿ ಶೋಗೆ ಎಂಟ್ರಿ ನೀಡಿದ್ದಾರೆ. ವಿಶೇಷ ಏನೆಂದರೆ ಈ ಜೋಡಿ ಇನ್ನೂ ಮದುವೆಯಾಗಿಲ್ಲ. ಆದರೆ ಒಟ್ಟಾಗಿ ಸಂತೋಷದಿಂದ ಜೀವನ ನಡೆಸುತ್ತಿರುವ ಜೋಡಿಯಾಗಿದ್ದಾರೆ. ಜಯಶ್ರೀ ಅವರು ಪ್ರೊಮೊದಲ್ಲಿ ಅಧಿಕೃತವಾಗಿ ತಾಳಿ ಅದೆಲ್ಲಾ ಇಲ್ಲಾ ಅನ್ನೋದು ಬಿಟ್ರೆ ನಾವು ಗಂಡ ಮತ್ತು ಹೆಂಡತಿ ಎಂದಿದ್ದಾರೆ.

ಅಲ್ಲದೇ ಈ ಕ್ಷಣಕ್ಕೂ ನಾವು ಮದುವೆ ಆಗಿಲ್ಲ ಅನ್ನೋ ಫೀಲ್ ಇಲ್ಲ, ಮೆಂಟಲೀ ನಾವು ಮದುವೆ ಆಗಿದ್ದೀವಿ ಎಂದಿದ್ದಾರೆ. ಈ ಪ್ರೊಮೋ ನೋಡಿದ ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ. ತರಹೇವಾರಿ ಕಾಮೆಂಟ್ ಗಳನ್ನು ಮಾಡಿ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ವಾಹಿನಿ ಈ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೊಡೋದಕ್ಕೆ ಮುಂದಾಗಿದೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

ಕಾಮೆಂಟ್ ಮಾಡಿದ ಒಬ್ಬರು, ಮಕ್ಕಳಿಗೆ ಇಂಥಾ ಶೋ ಗಳನ್ನ ನೋಡೋಕೆ ಬಿಡಬಾರದು, ಮಕ್ಕಳು ಕಲಿಬಾರದ್ದೆಲ್ಲ ಕಲ್ತು ಬಿಡ್ತಾರೆ ಎಂದಿದ್ದಾರೆ. ಶೋಗೆ ಬಂದಿದ್ದ ಇಬ್ಬರಿಗೆ ಡಿವೋರ್ಸ್ ಆಗೋಯ್ತು ನೆಕ್ಸ್ಟ್ ಯಾರೋ ಎಂದಿದ್ದಾರೆ. ನಿವೇದಿತಾ ಚಂದನ್ ನ ನೋಡಿ ಇಂತಹ ನಿರ್ಧಾರ ಮಾಡಿ ಈ ಜೋಡಿಯನ್ನ ಕಳ್ಕೊಂಡು ಬಂದ್ರಾ ಎಂದು, ಇಂತಹವರು ನಮ್ಮ ಸಮಾಜಕ್ಕೆ ಮಾದರಿ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Comment