ಮನೆ ಬಿಟ್ಟ ಸಹನಾನ ಹುಡುಕೋಕೆ ಬಂದ ಕಾಳಿ, ಸಹನಾ ಮತ್ತು ಕಾಳಿನ ಜೋಡಿ ಮಾಡಿ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಗಂಡನಿಂದ ವಿಚ್ಚೇದನ ಪಡೆಯೋದಕ್ಕೆ ತೀರ್ಮಾನ ಮಾಡಿರೋ ಸಹನಾಗೆ ತಾನು ತನ್ನ ಅಮ್ಮನಿಗೆ ಭಾರ ಆಗ್ತೀನಿ, ಜನರಾಡೋ ಮಾತಿಗೆ ಗುರಿಯಾಗ್ತೀನಿ ಅನ್ನೋ ಭಾವನೆ ಮೂಡಿ ಅಮ್ಮನಿಗೆ ಭಾರವಾಗಿ ಅವಳ ಮನೆಯಲ್ಲಿ ಬದುಕೋದು ಬೇಡ ಅಂತ ರಾತ್ರಿ ಎಲ್ಲರೂ ಮಲಗಿರೋ ಟೈಮ್ ನಲ್ಲಿ ಮನೆ ಬಿಟ್ಟು ಹೋಗೋಕೆ ಮನೆಯಿಂದ ಹೊರಗೆ ಬಂದಿದ್ದಾಳೆ. ಪುಟ್ಟಕ್ಕ ಹೇಗಾದ್ರು ಮಾಡಿ ಮಗಳು ಮತ್ತು ಅಳಿಯನ್ನ ಒಂದು ಮಾಡಬೇಕು, ಅವ್ರ ಜೀವನವನ್ನ ಸರಿ ದಾರಿಗೆ ತರಬೇಕು ಅನ್ನೋ ಆಲೋಚನೆಯಲ್ಲಿ ಇದ್ದಾಳೆ.

ಮನೆಯಿಂದ ಹೊರಗೆ ಬಂದ ಸಹನಾ (Sahana) ತಡರಾತ್ರಿಯಲ್ಲಿ ಬಸ್ ಸ್ಟ್ಯಾಂಡ್ ನಲ್ಲಿ  ನಿಂತಿರೋವಾಗ ಕಂಠಿ ಅಲ್ಲಿಂದ ಪಾಸ್ ಆಗೋದು ನೋಡಿ ಸಹನಾ ಅವಿತುಕೊಂಡಿದ್ದಾಳೆ. ಸಹನಾ ಕಣ್ಣೀರನ್ನ ಹಾಕ್ತಾ ನನ್ನನ್ನ ಕ್ಷಮಿಸಿಬಿಡಿ ಅಂತ ಹೇಳ್ತಾಳೆ. ಕಂಠಿ ಹೋದ ನಂತರ ಅಲ್ಲಿಗೆ ಕುಡಿದ ಮತ್ತಿನಲ್ಲಿದ್ದ ಕಾಳಿ ಬರ್ತಾನೆ. ಅವನಿಗೆ ಸಹನಾ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರೋದು ನೋಡಿ ಶಾಕ್ ಆಗುತ್ತೆ. ಅವನು ಸಹನಾ ಹತ್ರ ಬರೋ ಟೈಮ್ ಗೆ ಅವಳು ಬಸ್ ಹತ್ತಿ ಹೊರಟು ಹೋಗ್ತಾಳೆ.

ಇನ್ನೊಂದು ಕಡೆ ಮನೇಲಿ ಮಗಳಿಲ್ಲ ಅಂತ ಪುಟ್ಟಕ್ಕ ಕಂಗಾಲಾಗಿದ್ದಾಳೆ. ಎಲ್ಲರೂ ಸಹನಾನ ಹುಡುಕೋದಕ್ಕೆ ಹೋಗಿದ್ದಾರೆ. ಬಂಗಾರಮ್ಮ ಪುಟ್ಟಕ್ಕನಿಗೆ ಮಗಳು ಸಿಕ್ತಾಳೆ ಅಂತ ಸಮಾಧಾನ ಹೇಳಿದ್ದಾರೆ. ಎಲ್ರೂ ಟೆನ್ಷನ್ ನಲ್ಲಿ ಇರೋವಾಗ್ಲೇ ಕಾಳಿ (Kali) ಅಲ್ಲಿಗೆ ಬಂದು ಸಹನಾ ಎಲ್ಲೋಗಿದ್ದಾಳೆ ಅಂತ ಗೊತ್ತು ಅನ್ನೋ ಮಾತನ್ನ ಹೇಳಿದ್ದಾನೆ. ಸಹನಾ ಕೋರ್ಟ್ ಕೇಸ್ ನಿಂದ ಹೊರಗೆ ಬರೋಕೆ ಕಾಳಿ ಸಹಾಯವನ್ನು ಮಾಡಿದ್ದಾನೆ.

ಅದಕ್ಕೂ ಮೊದಲು ಪಂಚಾಯ್ತಿಯಲ್ಲಿ ಕೂಡಾ ಕೌಸಲ್ಯ ಮತ್ತು ತನ್ನ ಅಕ್ಕನ ಮಾತನ್ನ ಕೇಳದೇ ನಿಜ ಮಾತ್ರ ಹೇಳಿ ಆಗಲೂ ಸಹನಾ ಪರವಾಗಿ ಕಾಳಿ ನಿಂತಿದ್ದ. ಈಗ ಅವಳನ್ನ ಹುಡುಕೋಕು ಕಾಳಿ ಸಹಾಯ ಮಾಡ್ತಿದ್ದಾನೆ. ಇದನ್ನೆಲ್ಲಾ ನೋಡಿದ ಪ್ರೇಕ್ಷಕರು ಕಾಳಿಗೆ ಸ್ನೇಹ ಮೇಲೆ ಇರೋರು ನಿಜವಾದ ಪ್ರೀತಿ. ಮೇಷ್ಟ್ರನ್ನ ಸಹನಾನ ಒಂದು ಮಾಡಬೇಕು ಅನ್ನೋ ಕಾಳಿ ಆಲೋಚನೆ ತುಂಬಾ ಒಳ್ಳೇದು. ಸಹನಾಗೆ ಕಾಳಿನ ಜೋಡಿ ಮಾಡಿ, ಚೆನ್ನಾಗಿ ನೋಡ್ಕೊಳ್ತಾನೆ ಅಂತ ಕಾಮೆಂಟ್ ಗಳನ್ನು ಮಾಡ್ತಾ ಇದ್ದಾರೆ.

Leave a Comment