Puttakkana Makkalu: ಅತಿ ಆದ್ರೆ ಓವರ್ ಆ್ಯಕ್ಟಿಂಗ್ ಅನ್ಸುತ್ತೆ, ಪುಟ್ಟಕ್ಕನ್ನ ಮೊನ್ನೆ ಮೆಚ್ಚಿ ಇಂದು ಚುಚ್ಚಿದ ಜನ

Written by Soma Shekar

Published on:

---Join Our Channel---

Puttakkana Makkalu: ಕಿರುತೆರೆಯ ಜನಪ್ರಿಯ ಸೀರಿಯಲ್ ಮತ್ತು ಟಿ ಆರ್ ಪಿ ವಿಚಾರದಲ್ಲಿ ನಂಬರ್ ಒನ್ ಸ್ಥಾನವನ್ನ ಪಡೆದುಕೊಂಡಿರೋ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಕಿರುತೆರೆಯ ಪ್ರೇಕ್ಷಕರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿರುವಂತಹ ಸೀರಿಯಲ್ ಆಗಿದೆ. ಹಿರಿಯ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಕಥೆಯ ವೇಗ, ತಿರುವುಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸು ಪಡೆದಿದೆ.

ಪುಟ್ಟಕ್ಕನ ಹಿರಿಯ ಮಗಳು ಸಹನಾ (Sahana)h ಅತ್ತೆ ಮನೆಯಿಂದ ಬಂದ ಮೇಲೆ, ಮುರುಳಿ ಇಂದ ದೂರಾದ ಮೇಲೆ ಜನರ ಮಾತಿಗೆ ಬೇಸರಗೊಂಡು ಸ್ವತಂತ್ರವಾಗಿ ಜೀವನ ನಡೆಸಬೇಕು ಅಂತ ಮನೆ ಬಿಟ್ಟು ಬಂದ್ಮೇಲೆ, ಅಪರಿಚಿತ ಶವವನ್ನು ನೋಡಿ ಪುಟ್ಟಕ್ಕ ಮತ್ತು ಉಳಿದವರು ಅದು ಸಹನಾನೇ ಅಂತ ನಿರ್ಧಾರ ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಅಂತಿಮ ಸಂಸ್ಕಾರದ ಎಪಿಸೋಡ್ ಗಳಲ್ಲಿ ಪುಟ್ಟಕ್ಕನ ಪಾತ್ರಧಾರಿ ಉಮಾಶ್ರೀ ಅವರ ನಟನೆಗೆ ವ್ಯಾಪಕ ಮೆಚ್ಚುಗೆ ಹರಿದು ಬಂದಿತ್ತು.

ಈಗ ವಾಹಿನಿ ಹೊಸ ಪ್ರೊಮೋ ಶೇರ್ ಮಾಡಿದೆ. ಆದರೆ ಪ್ರೊಮೋ ನೋಡಿದ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಮಗಳ ಸಾವಿನ ನಂತರ ಪುಟ್ಟಕ್ಕ ಇನ್ನೂ ನೋವಿನಲ್ಲಿ ಗೋಳಾಡ್ತಾ ಇದ್ದಾಳೆ. ಆ ದುಃಖದಲ್ಲಿ ಮಗಳು ಸ್ನೇಹ ಮತ್ತು ಗಂಡನೇ ಇದಕ್ಕೆಲ್ಲಾ ಕಾರಣ ಅಂತ ಅವರ ಮೇಲೂ ಅಸಹನೆ ಅಸಮಾಧಾನವನ್ನು ಹೊರ ಹಾಕಿದ್ದಾಳೆ. ಆದರೆ ಇನ್ನೂ ಪುಟ್ಟಕ್ಕನ ನೋವು ಕಡಿಮೆಯಾಗಿಲ್ಲ.

ಈಗ ಏನೋ ನೋಡಿಕೊಂಡು ಬರಬೇಕು ಅಂತ ಎದ್ದಿರುವ ಪುಟ್ಟಕ್ಕನಿಗೆ ಕೊನೆ ಮಗಳು ಸುಮ ಮತ್ತು ಗಂಡ ನೀನು ಬೇಡ ನಾವು ಹೋಗಿ ನೋಡ್ಕೊಂಡು ಬರ್ತೀವಿ ಅಂದಾಗ ಮತ್ತೆ ನೋವಿನಿಂದ ಅರಚಾಡಿದ ಪುಟ್ಟಕ್ಕ ನೀವು ಯಾರಾದ್ರು ಬಂದ್ರೆ ನಾನು ಮತ್ತೆ ಮನೆಗೆ ವಾಪಸ್ಸು ಬರೋದೇ ಇಲ್ಲ ಅಂತ ಹೇಳಿ ಎಚ್ಚರಿಕೆ ನೀಡಿದ್ದಾಳೆ.

ಪ್ರೊಮೋ ನೋಡಿದ ನಂತರ ನೆಟ್ಟಿಗರು, ಪುಟ್ಟಕ್ಕನ ಸ್ವಲ್ಪ ದಿನ ತೀರ್ಥಯಾತ್ರೆಗೆ ಕಳಿಸಿ, ನಾವು ಆರಾಮಾಗಿ ಸೀರಿಯಲ್ ನೋಡ್ತೀವಿ ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಒಂದು ಸಲ, ಎರಡು ಸಲ ಸರಿ ಮತ್ತೆ ಮತ್ತೆ ರಿಪೀಟ್ ಆದ್ರೆ ಓವರ್ ಆ್ಯಕ್ಟಿಂಗ್ ಎನಿಸುತ್ತೆ ಎಂದಿದ್ದಾರೆ. ನಾಲ್ಕು ದಿನಗಳಿಂದ ಪುಟ್ಟಕ್ಕನ ಓವರ್ ಆ್ಯಕ್ಟಿಂಗ್, ಸೀರಿಯಲ್ ನೋಡೋ ಆಸಕ್ತಿ ಇಲ್ಲ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ.

Leave a Comment