Puttakkana Makkalu Serial: ಕನ್ನಡ ಕಿರುತೆರೆಯಲ್ಲಿ ಟಿ ಆರ್ ಪಿ ವಿಚಾರದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ ಪುಟ್ಟಕ್ಕನ ಮಗಳು (Puttakkana Makkalu Serial) ಸೀರಿಯಲ್. ಹೊಸ ಹೊಸ ತಿರುವುಗಳೊಂದಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿರುವ ಸೀರಿಯಲ್ ನಲ್ಲಿ ಈಗ ಮತ್ತೊಂದು ಮಹತ್ವದ ತಿರುವು ಮೂಡಿ ಬರುತ್ತಿದೆ ಎನ್ನುವುದನ್ನು ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಹೌದು, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಈಗ ಸಿಂಗಾರಮ್ಮನ ಎಂಟ್ರಿ ಆಗೋ ಸುಳಿವು ನೀಡಿದೆ ವಾಹಿನಿ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸ್ನೇಹ ತನ್ನ ಐಎಎಸ್ ಕನಸನ್ನ ನನಸು ಮಾಡಿಕೊಳ್ಳಲು ಪರೀಕ್ಷೆ ಬರೆದಿದ್ದಾಳೆ. ಸಹನಾ ನಗರದಲ್ಲಿ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾಳೆ. ಬಂಗಾರಮ್ಮನ (Bangaramma) ಮನೆಯಲ್ಲಿ ರಾಧಾ ತನ್ನ ಕುತಂತ್ರಗಳನ್ನು ಹೆಣೆಯುತ್ತಿದ್ದಾಳೆ. ಅದರ ಭಾಗವಾಗಿಯೇ ಕಾರು ಬ್ರೇಕ್ ತೆಗೆದ ಕಾರಣ ಬಂಗಾರಮ್ಮನಿಗೆ ಗಾಯವಾಗಿ ವಿಶ್ರಾಂತಿ ಪಡೀತಿದ್ದಾರೆ.
ಈ ವೇಳೆ ಅವರ ಅಮ್ಮ ಚೌಡವ್ವ ಮಾತನಾಡ್ತಾ ಬಂಗಾರಮ್ಮನ ಸಹೋದರಿ ಬಗ್ಗೆ, ರೂಪ ಒಂದೇ ಆದ್ರು ಗುಣ ಬೇರೆ ಅನ್ನೋ ಹಾಗೆ, ಅವಳು ಎಲ್ಲಿದ್ದಾಳೋ ಗೊತ್ತಿಲ್ಲ. ಆದ್ರೆ ವಾಪಸ್ ಬಂದ್ರೆ ಯಾರನ್ನೂ ಸುಮ್ಮನೆ ಬಿಡಲ್ಲ ಅಂತ ಹೇಳಿದ್ಲು ಅಂತ ಹೇಳೋದನ್ನ ನೋಡಬಹುದಾಗಿದೆ. ಬಂಗಾರಮ್ಮನ ಸಹೋದರಿ ಸಿಂಗಾರಿ ಜೈಲಿನಲ್ಲಿ ಇದ್ದಾಳೆ. ಅಲ್ಲಿ ಖೈದಿಗಳ ಮೇಲೆ ದರ್ಪವನ್ನ ತೋರೋದನ್ನ ನೋಡಬಹುದಾಗಿದೆ.
ಮಂಜು ಭಾಷಿಣಿ (Manju Bhashini) ಅವರು ಇಷ್ಟು ದಿನ ಬಂಗಾರಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಿಂಗಾರಮ್ಮನಾಗಿ ಖಡಕ್ ಮತ್ತು ರೌಡಿ ಟೈಪ್ ಮ್ಯಾನರಿಸಂ ನಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದು, ಸಿಂಗಾರಿ ಪಾತ್ರವು ಪ್ರೇಕ್ಷಕರ ಮೇಲೆ ಮೋಡಿಯನ್ನ ಮಾಡಲಿದೆಯಾ? ಅನ್ನೋದನ್ನ ಕಾದು ನೋಡಬೇಕಾಗಿದೆ.