Puttakkana Makkalu: ಕಥೆಯಲ್ಲಿ ಊಹಿಸಿರದ ಮೆಗಾ ಟ್ವಿಸ್ಟ್; ಬಂಗಾರಮ್ಮನ ಎದುರು ನಿಲ್ಲೋ ಖಡಕ್ ಪಾತ್ರದ ಎಂಟ್ರಿ?

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿನ ಹೊಸ ತಿರುವುಗಳು ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದೆ ಇದೆ. ಇತ್ತೀಚಿನ ಎಪಿಸೋಡ್ ಗಳಲ್ಲಿ ಸ್ನೇಹ ಮೇಲೆ ರಾಧಾ (Radha) ಮತ್ತು ರಾಜಿ (Raji) ಹೂಡಿದ್ದ ಕುತಂತ್ರವನ್ನು ಅಜ್ಜಿ ಚೌಡವ್ವ ಅವರಿಗೆ ತಿರುಗುಬಾಣ ಮಾಡಿದ್ದಾಗಿದೆ. ಅಲ್ಲದೇ ಬಂಗಾರಮ್ಮ (Bangaramma) ಕೂಡಾ ಸ್ನೇಹಾನ (Sneha) ತನ್ನ ಸೊಸೆ ಅಂತ ಎಲ್ಲರ ಮುಂದೆ ಹೇಳಿದ್ದು, ಸೊಸೆಗೆ ದುಡುಕಿ ಯಾವುದೇ ಕೆಲಸ ಮಾಡಬೇಡ ಮತ್ತು ನೀನು ಇಡೋ ಹೆಜ್ಜೆ ಬೇರೆ ಅವರಿಗೆ ನೋವನ್ನ ಉಂಟು ಮಾಡಬಾರದು ಅಂತ ಸಲಹೆ ಕೊಟ್ಟಿದ್ದಾರೆ.

ಬಂಗಾರಮ್ಮ ಸೊಸೆಗೆ ನೀನು ನನ್ನ ಮನೆಗೆ ಪುಟ್ಟಕ್ಕನ ಮಗಳಾಗಿ ಬಂದಿದ್ರೆ ಸಾಕಾಗಿತ್ತು ನನಗೆ ಬೇರೆ ಏನೂ ಬೇಕಾಗಿರಲಿಲ್ಲ ಅಂತ ಹೇಳಿದ್ದಾರೆ. ಅತ್ತೆಯ ಕಾಲು ಹಿಡಿದು ಕ್ಷಮೆ ಕೇಳಿದ ಸ್ನೇಹ ಇನ್ಮುಂದೆ ಅತ್ತೆಗೆ ನೋವಾಗೋ ಹಾಗೆ ನಡೆದುಕೊಳ್ಳೋದಿಲ್ಲ ಅನ್ನೋ ಭರವಸೆಯನ್ನು ಕೊಟ್ಟಿದ್ದಾಳೆ. ಎಲ್ಲಾ ಸುಖಾಂತ್ಯವಾದ ಮೇಲೆ ಅಜ್ಜಿ ಚೌಡವ್ವ ರಾಧಾಗೆ ಮಾತಿನ ಛಡಿಯೇಟನ್ನ ಕೊಟ್ಟಿದ್ದಾರೆ.

ರಾಧಾಗೆ ಇನ್ಮುಂದೆ ಬಾಲ ಬಿಚ್ಚಿದ್ದರೆ ಮನೆಯಿಂದ ಹೊರಗೆ ಹಾಕಬೇಕಾಗುತ್ತೆ ಹುಷಾರ್ ಅಂತ ಅಜ್ಜಿ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. ಈಗಲೇ ನಿನ್ನನ್ನ ಹೊರಗೆ ಹಾಕಬಹುದು ಆದರೆ ಆ ಪಾಪ ನಮಗೆ ಸುತ್ಕೋ ಬಾರದು ಅಂತ ಸುಮ್ಮನೆ ಇದ್ದೀನಿ ಅಂದಿದ್ದಾರೆ. ರಾಧಾ ಕೂಡಾ ಅಜ್ಜಿಯ ಕಾಲನ್ನ ಹಿಡ್ಕೊಂಡು ಕ್ಷಮೆ ಕೇಳಿದ್ದಾಳೆ. ಆದರೆ ಅವಳ ಕ್ಷಮೆ ಎಷ್ಟು ನಿಜ ಅನ್ನೋದು ಮುಂದೆ ಗೊತ್ತಾಗಲಿದೆ.

ಆದರೆ ರಾಧಾನ ಬೈಯ್ಯೋವಾಗ್ಲೇ ಅಜ್ಜಿ ಮತ್ತೊಂದು ಮಾತನ್ನ ಕೂಡಾ ಹೇಳಿದ್ದಾರೆ. ಈಗಾಗಲೇ ಮಾತನ್ನ ಕೇಳಿಲ್ಲ ಅಂತ ಒಬ್ಬ ಮಗಳನ್ನ ಮನೆಯಿಂದ ಆಚೆ ಹಾಕಿದ್ದೀನಿ ಅಂತ. ಅಂದ್ರೆ ಅಜ್ಜಿಗೆ ಬಂಗಾರಮ್ಮ ಮಾತ್ರ ಅಲ್ಲ ಇನ್ನೊಬ್ಬ ಮಗಳು ಇದ್ದಾಳೆ ಅನ್ನೋ ಸುಳಿವನ್ನು ನೀಡಲಾಗಿದೆ. ಹಾಗಾದ್ರೆ ಆ ಮಗಳು ಯಾರು? ಎಲ್ಲಿದ್ದಾಳೆ? ಬಂಗಾರಮ್ಮನ ವಿರುದ್ಧ ವಿಲನ್ ಆಗಿ ಎಂಟ್ರಿ ಕೊಡ್ತಾಳಾ? ಅನ್ನೋದು ಈಗ ಕುತೂಹಲ ಮೂಡಿಸಿದೆ.

Leave a Comment