Prajwal Revanna: ಪ್ರಜ್ವಲ್ ರೇವಣ್ಣ ವೀಡಿಯೋ, ಲೈಂಗಿಕ ಮಾನಸಿಕ ತಜ್ಞರೇ ಶಾಕ್ ಆಗಿ ಹೇಳಿದ್ದೇನು?

Written by Soma Shekar

Published on:

---Join Our Channel---

Prajwal Revanna: ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಅಂತಾನೇ ಹೇಳಲಾಗಿರೋ ಅಶ್ಲೀಲ ಪೆನ್​ ಡ್ರೈವ್ ವೈರಲ್ ಆದ ಮೇಲೆ ಎಲ್ಲೆಲ್ಲೂ ಇದೇ ವಿಚಾರ ದೊಡ್ಡ ಚರ್ಚೆಗಳಿಗೆ ಕಾರಣವಾಗಿದೆ. ವೈರಲ್ ಆದಂತಹ ವೀಡಿಯೋಗಳನ್ನು ನೋಡಿದವರು ಶಾಕ್ ಆಗಿದ್ದಾರೆ. ಈ ವೀಡಿಯೋಗಳನ್ನು ನೋಡಿದ ನಂತರ ಪ್ರಜ್ವಲ್ ರೇವಣ್ಣ ಸೈಕೋಪಾತ್ ನಂತಹ ಮನಸ್ಥಿತಿಯನ್ನು ಹೊಂದಿದ್ರಾ? ಎನ್ನುವ ಪ್ರಶ್ನೆಯೊಂದು ಈಗ ಮೂಡಿದೆ. ಇದೇ ವಿಚಾರವಾಗಿ ಈಗ ಮಾದ್ಯಮವೊಂದರಲ್ಲಿ ಮಾನಸಿಕ ತಜ್ಞರು ಒಂದಷ್ಟು ವಿಷಯಗಳನ್ನು ತಿಳಿಸಿದ್ದಾರೆ.

ವೈರಲ್ ಆಗಿರೋ ವೀಡಿಯೋಗಳಲ್ಲಿ ಸರ್ಕಾರಿ ಅಧಿಕಾರಿಗಳು, ಮಾಡೆಲ್ ಗಳು ಇದ್ದಾರೆ ಎನ್ನಲಾಗಿದೆ. ಅಲ್ಲದೇ ವಯಸ್ಸಾದ ಕೆಲಸದವರನ್ನ ಸಹಾ ಬಿಟ್ಟಿಲ್ಲ ಎನ್ನುವುದು ತಿಳಿದು ಬಂದಿದೆ. ಆದ್ದರಿಂದಲೇ ಪ್ರಜ್ವಲ್ ಒಬ್ಬ ವಿಕೃತ ಕಾಮಿ ಎಂದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಬರೋಬ್ಬರಿ ಎರಡು ಸಾವಿರ ವೀಡಿಯೋಗಳಿವೆ ಎನ್ನುವ ವಿಚಾರವನ್ನು ಕೇಳಿ ಎಲ್ಲರೂ ದಂಗಾಗಿದ್ದಾರೆ. ಈ ವಿಚಾರಕ್ಕೆ ಲೈಂಗಿಕ ತಜ್ಞರೇ ಶಾಕ್ ಪಡುವಂತಾಗಿದೆ.

ಇಂತಹುದೊಂದು ವಿಚಾರವಾಗಿ ಮಾದ್ಯಮವೊಂದರ ಮುಂದೆ ಮಾತನಾಡಿರುವ ಲೈಂಗಿಕ ಹಾಗೂ ಮಾನಸಿಕ ತಜ್ಞ ವಿನೋಧ ಭೆಬ್ಬಿ ಅವರು ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಅವರು ಇಂತಹ ವರ್ತನೆಯು ಮನೋ ವಿಕಾರ ಇದ್ದಾಗ ಮಾತ್ರ ಸಾಧ್ಯ ಎಂದಿದ್ದಾರೆ. ಅಲ್ಲದೇ ಟಾಕ್ಸಿಕ್ ಪೆಟ್ರಿಯಾರ್ಕ್ ಕೂಡಾ ಇದಕ್ಕೆ ಕಾರಣ ಎಂದಿದ್ದಾರೆ. ಅಂದರೆ ಪರಂಪರೆಯಾಗಿ ಹೆಣ್ಣು ಕೀಳು ಎಂಬ ಗೀಳನ್ನು ಬೆಳೆಸಿಕೊಂಡು, ಹೆಣ್ಣನ್ನು ಕೀಳಾಗಿ, ಕಾಮ ದೃಷ್ಟಿಯಿಂದ ನೋಡುವ ಮನಸ್ಥಿತಿ ಇದಕ್ಕೆ ಕಾರಣವಾಗಬಹುದು ಎಂದಿದ್ದಾರೆ. 

ಹಾಗಿದ್ದಲ್ಲಿ ಪ್ರಜ್ವಲ್ ರೇವಣ್ಣನಿಗೆ ಇಂತಹ ಲೈಂಗಿಕ ವಿಕಾರ ಮನಸ್ಥಿತಿ ಇತ್ತಾ? ಎನ್ನುವ ಪ್ರಶ್ನೆ ಮೂಡುತ್ತದೆ. ಟಾಕ್ಸಿಕ್ ಗುಣವೇ ಇದಕ್ಕೆಲ್ಲಾ ಕಾರಣವಾಗಿ ಬಿಡ್ತಾ? ಸೈಕೋಪಾತಿಕ್ ಮನೋಸ್ಥಿತಿ ಹಾಗೂ ಹಿಂಸಾತ್ಮಕ ಮನೋಪ್ರವೃತ್ತಿ ಇಂತಹುದಕ್ಕೆ ಕಾರಣವಾಯ್ತಾ? ಅಧಿಕಾರ ಮತ್ತು ಹಣವನ್ನು ಬಳಸಿಕೊಂಡು ಹೆಣ್ಣನ್ನು ಹೀನಾಯವಾಗಿ ಬಳಸಿಕೊಳ್ಳೋ ವಾಂಚೆ ಇತ್ತಾ? ಇದರಿಂದಲೇ ಆ ದೃಶ್ಯಗಳ ವೀಡಿಯೋ ಮಾಡಲು ಕಾರಣವಾಯ್ತಾ? ಎನ್ನುವ ಪ್ರಶ್ನೆಗಳು ಮೂಡಿದೆ. 

Leave a Comment