Arshad Warsi: ಕಲ್ಕಿ ಸಿನಿಮಾ ನೋಡಿ ಪ್ರಭಾಸ್ ನ ಜೋಕರ್ ಅಂತ ಕರೆದ ಬಾಲಿವುಡ್ ನಟ; ಹೊರ ಬಿತ್ತು ಫ್ಯಾನ್ಸ್ ಆಕ್ರೋಶ

Written by Soma Shekar

Published on:

---Join Our Channel---

Arshad Warsi : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್‌ (Prabhas) ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ʼಕಲ್ಕಿ 2898 ಎ.ಡಿʼ(Kalki 2898 AD) ಸಿನಿಮಾ ಈ ವರ್ಷ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದ್ದು, ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ಸಾವಿರ ಕೋಟಿಗಳ ಗಡಿಯನ್ನು ದಾಟಿ ಅಬ್ಬರಿಸಿದೆ. ಸಲಾರ್ ನಂತರ ಪ್ರಭಾಸ್ ಅವರಿಗೆ ಕಲ್ಕಿ ಸಿನಿಮಾ ಮತ್ತೊಂದು ಸಕ್ಸಸ್ ಅನ್ನು ತಂದು ಕೊಟ್ಟಿದೆ.‌

ಯಶಸ್ಸಿನ ಅಲೆ ಎಬ್ಬಿಸಿರುವ ಕಲ್ಕಿ ಸಿನಿಮಾ ಪ್ರಭಾಸ್ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ಆದರೆ ಈಗ ಈ ಸಿನಿಮಾ ನೋಡಿ ಬಾಲಿವುಡ್ ನಟ ಅರ್ಷದ್ ವಾರ್ಸಿ ಆಡಿರುವ ಮಾತುಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಅಸಮಾಧಾನ ಮತ್ತು ಆಕ್ರೋಶಗಳು ಹೊರ ಬಂದಿದೆ.

ಅನ್ ಫಿಲ್ಟರ್ಡ್ ಬೈ ಸಮದೀಶ್ ಅವರ ಪಾಡ್‌ ಕ್ಯಾಸ್ಟ್‌ ನಲ್ಲಿ ನಟ ಅರ್ಷದ್‌ ವಾರ್ಸಿ(Arshad Warsi) ಮಾತನಾಡುತ್ತಾ, ತಮಗೆ ಇಷ್ಟವಾಗದ ಇತ್ತೀಚಿನ ಸಿನಿಮಾ ಕಲ್ಕಿ ಎಂದಿದ್ದು, ನನಗೆ ಆ ಸಿನಿಮಾ ಇಷ್ಟವಾಗಲಿಲ್ಲ, ನಾನು ಬೇಸರದಲ್ಲಿದ್ದೇನೆ. ಪ್ರಭಾಸ್ ನೀವು ಆ ಸಿನಿಮಾದಲ್ಲಿ ಜೋಕರ್ ತರ ಕಂಡಿದ್ದೀರಾ, ನಾನು ನಿಮ್ಮನ್ನು ಮ್ಯಾಡ್ ಮ್ಯಾನ್ ಆಗಿ ನೋಡಲು ಬಯಸುತ್ತೇನೆ.

ಪ್ರಭಾಸ್ ಅವರನ್ನು ಹಾಗೆ ಯಾಕೆ ಮಾಡಿದರು ಎಂದು ಪ್ರಶ್ನೆ ಮಾಡಿರುವ ಅರ್ಷದ್ ಇದೇ ವೇಳೆ ಇದೇ ಸಿನಿಮಾದಲ್ಲಿನ ಅಮಿತಾಬ್ ಬಚ್ಚನ್ ಅವರ ಪಾತ್ರವನ್ನು ಹಾಡಿ ಹೊಗಳಿದ್ದು, ಅವರು ಅದ್ಭುತವಾಗಿ ನಟಿಸಿದ್ದಾರೆ.‌ ಅದನ್ನ ನಂಬಲು ಸಾಧ್ಯವಿಲ್ಲ ಎನ್ನುವಂತೆ ಇದ್ದು ಅವರ ಪವರ್ ನಮಗೆ ಸ್ವಲ್ಪ ಕೊಟ್ಟರೆ ನಾವು ಸೆಟಲ್ ಆಗ್ತೀವಿ ಅಂದಿದ್ದಾರೆ ಅರ್ಷದ್.

Amruthadhaare: ಕೈ ಮುಗಿತೀವಿ ಮುಗಿಸಿಬಿಡಿ, ಆಗ ಅಮೃತಧಾರೆಯನ್ನ ಮೆಚ್ಚಿದ ಪ್ರೇಕ್ಷಕರಿಂದಲೇ ಈಗ ಅಸಮಾಧಾನ

Leave a Comment