Pooja Hegde: ಇದ್ದಕ್ಕಿದ್ದ ಹಾಗೆ ಟಾಲಿವುಡ್ ನಿಂದ ಪೂಜಾ ಹೆಗ್ಡೆ ದೂರಾಗಿದ್ದು ಏಕೆ? ಯಾರಿಗೂ ಬೇಡವಾದ್ರ ನಟಿ

Written by Soma Shekar

Published on:

---Join Our Channel---

Pooja Hegde: ಪೂಜಾ ಹೆಗ್ಡೆ (Pooja Hegde) ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ, ಬಹುಬೇಡಿಕೆಯ ನಟಿಯಾಗಿ ಮುಂಚಿದ್ದ ನಟಿ, ಸಾಕಷ್ಟು ಸಿನಿ ಪ್ರೇಮಿಗಳ ಮೆಚ್ಚಿನ ನಟಿಯೂ ಕೂಡಾ ಹೌದು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಟಾಲಿವುಡ್ ನಲ್ಲಿ ಟಾಪ್ ನಟಿಯರ ಸಾಲಿನಲ್ಲಿದ್ದ ಪೂಜಾ ಇದ್ದಕ್ಕಿದ್ದ ಹಾಗೆ ಬೇಡಿಕೆ ಕಳೆದುಕೊಂಡು ಟಾಲಿವುಡ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ.

ಒಂದೆರಡು ವರ್ಷಗಳ ಹಿಂದೆಯಷ್ಟೇ ಟಾಲಿವುಡ್ ನ ಬಹುಬೇಡಿಕೆಯ ನಟಿಯಾಗಿದ್ದ ಪೂಜಾ ಬಹು ದುಬಾರಿ ನಟಿ ಸಹಾ ಆಗಿದ್ದರು. ಈ ಬಗ್ಗೆ ಕೆಲವು ನಿರ್ದೇಶಕರು ಸಹಾ ಮಾತನಾಡಿದ್ದುಂಟು, ನಟಿಯ ಸಹಾಯಕರಿಂದ ಖರ್ಚು ಹೆಚ್ಚು ಎಂದು ಟೀಕೆ ಮಾಡಿದ್ದುಂಟು.

ಎಲ್ಲವುಗಳ ಬೆನ್ನಲ್ಲೇ ತೆಲುಗಿನಲ್ಲಿ ಪೂಜಾ ಹೆಗ್ಡೆ ಸ್ಟಾರ್ ನಟರ ಜೊತೆಗೆ ನಟಿಸಿದ ಸಿನಿಮಾಗಳು ಕೆಲವು ಸಾಲು ಸಾಲಾಗಿ ಸೋಲಿನ ಹಾದಿಯನ್ನು ಹಿಡಿದಿದ್ದು ನಟಿಯ ಬೇಡಿಕೆ ಕುಗ್ಗುವುದಕ್ಕೆ ಒಂದು ಕಾರಣ ಎನ್ನಲಾಗಿದೆ.

ಇದೇ ವೇಳೆ ಟಾಲಿವುಡ್ ಗೆ ಹೊಸ ನಟಿಯರ ಎಂಟ್ರಿಯಿಂದಾಗಿ ಸಹಾ ಕೆಲವು ನಟಿಯರು ಬೇಡಿಕೆ ಕಳೆದುಕೊಳ್ಳುತ್ತಿದ್ದಾರೆ. ರಶ್ಮಿಕಾ, ಶ್ರೀಲೀಲಾರಂತಹ ನಟಿಯರ ಕೈಯಲ್ಲಿ ಈಗ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರವೇ ಇದೆ.

ಪೂಜಾ ತೆಲುಗಿನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು ಆಚಾರ್ಯ ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಅವರದ್ದು ನಾಯಕಿಯ ಪಾತ್ರ ಎನ್ನುವುದಕ್ಕಿಂತ ಪ್ರಮುಖ ಪಾತ್ರವಾಗಿತ್ತು ಎಂದು ಹೇಳಬಹುದಷ್ಟೇ.

ಆಚಾರ್ಯ ನಂತರ ನಟಿ ತೆಲುಗಿನಲ್ಲಿ ಯಾವುದೇ ಸಿನಿಮಾ ಮಾಡಿಲ್ಲ. ಆದರೆ ಬಾಲಿವುಡ್ ನಲ್ಲಿ ಮೂರು ಸಿನಿಮಾಗಳನ್ನು ನಟಿ ಮಾಡಿದ್ದಾರೆ. ಆದರೆ ಆ ಸಿನಿಮಾಗಳು ಕೂಡಾ ನಿರೀಕ್ಷಿತ ಮಟ್ಟದ ಗೆಲುವನ್ನೇನು ಪಡೆಯಲಿಲ್ಲ ಅನ್ನೋದು ಸತ್ಯ.

ಮತ್ತೊಂದು ಕಡೆ ಬಾಲಿವುಡ್ ಕಡಗೆ ನಟಿ ಹೆಚ್ಚಿನ ಗಮನ ನೀಡಲು ನಿರ್ಧಾರ ಮಾಡಿರುವ ಕಾರಣದಿಂದ ಸೌತ್ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ ಎನ್ನುವ ಮಾತುಗಳು ಸಹಾ ಕೇಳಿ ಬರುತ್ತಿದೆ.

Leave a Comment