Astrology: ಈ ರಾಶಿಯವರಿಗೆ 18 ವರ್ಷ ರಾಜ ವೈಭೋಗ, ಬಯಸಿದ ಸುಖ, ಸಂಪತ್ತು ಸಿಗುವ ಕಾಲ ಬಂದಾಯ್ತು

Written by Soma Shekar

Published on:

---Join Our Channel---

Astrology: ಜಾತಕದಲ್ಲಿ (Astrology) ರಾಹುವು ಮಂಗಳಕರ ಸ್ಥಾನದಲ್ಲಿ ಇದ್ದಲ್ಲಿ ಅಂತಹ ವ್ಯಕ್ತಿಯು ರಾಹುವಿನ ಮಹಾದಶದ 18 ವರ್ಷಗಳ ಸಮಯದಲ್ಲಿ ತನ್ನ ಜೀವನದಲ್ಲಿ ತಾನು ಬಯಸಿದಂತಹ ಸುಖ, ಸಂಪತ್ತು, ಉನ್ನತ ಸ್ಥಾನ ಮತ್ತು ಕೀರ್ತಿಯನ್ನು ತನ್ನದಾಗಿಸಿಕೊಂಡು ಅರ್ಥಾತ್ ಆತ ರಾಜ ವೈಭೋಗದ ಸುಖವನ್ನೇ ಪಡೆದುಕೊಳ್ಳುತ್ತಾನೆ ಎನ್ನಲಾಗಿದೆ.

ಮೇಷ ರಾಶಿ: ಈ ರಾಶಿಯವರನ್ನು ರಾಹು ಅಷ್ಟಾಗಿ ಕಾಡುವುದಿಲ್ಲ ಹಾಗೂ ಬಾಧಿಸುವುದಿಲ್ಲ. ಕೆಲವೊಮ್ಮೆ ಇವರಿಗೆ ಜೀವನದಲ್ಲಿ ಅಡೆ ತಡೆಗಳು ಉಂಟಾದರೂ ಸಹಾ ಅವುಗಳ ಪರಿಹಾರವೂ ಬಹಳ ಬೇಗ ಆಗಿ ಬಿಡುತ್ತದೆ. ಅವರ ಜೀವನ ಬಹಳ ಸುಖಕರವಾಗಿ ಸಾಗುತ್ತದೆ.

ವೃಷಭ ರಾಶಿ: ಈ ರಾಶಿಯವರು ಆರಂಭದಲ್ಲಿ ಸ್ವಲ್ಪ ಕಠಿಣ ಪರಿಸ್ಥಿತಿಯನ್ನು ಎದುರಿಸಿದರೂ ಬಳಿಕ ಮುಂದಿನ ಚರಣದಲ್ಲಿ ರಾಜನಂತಹ ಜೀವನವನ್ನ ಪಡೆಯುತ್ತಾರೆ. ಸಮಸ್ಯೆಗಳೆಲ್ಲಾ ಕಳೆದು ಸುಖ ಜೀವನವು ಪ್ರಾಪ್ತಿಸುವುದು.

ಕರ್ಕ ರಾಶಿ: ಈ ರಾಶಿಯವರ ಜೀವನದಲ್ಲಿ ಸಹಾ ಈ ಸಮಯದಲ್ಲಿ ಎಂತಹುದೇ ಸಮಸ್ಯೆಗಳು ಅವರನ್ನು ಬಾಧಿಸುವುದಿಲ್ಲ. ಇವರು ತಾವು ಅಂದುಕೊಂಡಿದ್ದನ್ನ ಸಾಧಿಸುವವರಾಗಿದ್ದು, ಜೀವನದಲ್ಲಿ ಹಣಕಾಸಿನ ಕೊರತೆ ಎಂದೂ ಕಾಡುವುದಿಲ್ಲ.

ತುಲಾ ರಾಶಿ : ಈ ಅವಧಿ ತುಲಾ ರಾಶಿಯವರಿಗೆ ವಿಶಿಷ್ಟವಾಗಿರುತ್ತದೆ. ಇವರಿಗೆ ಪ್ರಾರಂಭದಿಂದ ಕೊನೆಯವರೆಗೂ ಸಹಾ ಯಾವುದೇ ರೀತಿಯಲ್ಲಿ ಕೂಡಾ ಸಮಸ್ಯೆಗಳು, ತೊಂದರೆಗಳು ಎದುರಾಗುವುದಿಲ್ಲ. ಹಲವು ವಿಚಾರಗಳಲ್ಲಿ ಇವರು ಮೇಲುಗೈ ಪಡೆದುಕೊಳ್ಳುವರು.

ಮಕರ ರಾಶಿ : ಈ ರಾಶಿಯವರು ಯಾವುದರ ಬಗ್ಗೆಯೂ ಅತಿಯಾದ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ಇವರ ಜೀವನವು ಬಹಳ ಆರಾಮವಾಗಿ ಸಾಗುತ್ತದೆ. ಮನದ ಇಚ್ಛೆಗಳು ಸಕಾಲದಲ್ಲಿ ನೆರವೇರುವುದು.

ವಿಶೇಷ ಸೂಚನೆ ; ಇಲ್ಲಿ ನೀಡಲಾಗಿರುವ ಮಾಹಿತಿಗಳು ಜ್ಯೋತಿಷ್ಯ, ಸಾಮಾನ್ಯ ನಂಬಿಕೆಗಳು ಹಾಗೂ ಮಾಹಿತಿಯನ್ನು ಆಧರಿಸಿದ್ದು, ಇದು ಮಾಹಿತಿಗಾಗಿಯೇ ಹೊರತು ನಾವಿದನ್ನು ಖಚಿತ ಪಡಿಸುವುದಿಲ್ಲ. 

Radhika Sarathkumar: ನಟಿಯರಿಗೆ ಬಲವಂತವಾಗಿ ಕಿಸ್ ಮಾಡ್ತಿದ್ರಾ ಕಮಲ ಹಾಸನ್ ? ಸಂಚಲನ ಸೃಷ್ಟಿಸಿದ ನಟಿಯ ಮಾತುಗಳು

Leave a Comment