Prabhas: ಪ್ರಭಾಸ್ ಗೆ ನಾಯಕಿ ಈ ಪಾಕಿಸ್ತಾನಿ ನಟಿ, ನಮ್ಮಲ್ಲಿ ನಟಿಯರೇ ಇಲ್ವಾ ಅಂದ್ರು ನೆಟ್ಟಿಗರು, ಏನಿದು ಸುದ್ದಿ?

Written by Soma Shekar

Published on:

---Join Our Channel---

Prabhas: ಪ್ಯಾನ್ ಇಂಡಿಯಾ ಸ್ಟಾರ್ ಹೀರೋ, ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ (Prabhas) ಸದ್ಯಕ್ಕೆ ಕಲ್ಕಿ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಕಲ್ಕಿ ಸಿನಿಮಾ ಈಗಾಗಲೇ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ಸಲಾರ್ ಅದಾದ ನಂತರ ಕಲ್ಕಿ (Kalki 2898 AD) ಹೀಗೆ ಸತತ ಎರಡು ಬ್ಲಾಕ್‌ ಬಸ್ಟರ್ ಸಿನಿಮಾಗಳನ್ನು ನೀಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ ನಟ ಪ್ರಭಾಸ್.‌

ಬಾಹುಬಲಿ ನಂತರ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಪ್ರಭಾಸ್ ಹಿಟ್ ಪಡೆದರು. ನಂತರ ನಾಗ್ ಅಶ್ವಿನ್ (Nag Aswin) ನಿರ್ದೇಶಕನದ ಕಲ್ಕಿ ಚಿತ್ರದ ಮೂಲಕ ಮತ್ತೊಂದು ದೊಡ್ಡ ಸಕ್ಸಸ್ ತನ್ನದಾಗಿಸಿಕೊಂಡಿದ್ದಾರೆ. ಜೂನ್ 27 ರಂದು ಬಿಡುಗಡೆಯಾದ ಕಲ್ಕಿ ಈಗಾಗಲೇ ಕಲೆಕ್ಷನ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಈ ಸಿನಿಮಾದಲ್ಲಿ ಅವರು ಕರ್ಣನಾಗಿ ಕಾಣಿಸಿಕೊಂಡಿರುವುದು ವಿಶೇಷ.

ಸಲಾರ್ ಮತ್ತು ‘ಕಲ್ಕಿ 2898 AD ಬ್ಲಾಕ್‌ಬಸ್ಟರ್ ಹಿಟ್ ಆದ ಕಾರಣ ಈಗ ನಟ ಪ್ರಭಾಸ್ ಅವರ ಮುಂದಿನ ಸಿನಿಮಾಗಳ ಕಡೆಗೆ ನಿರೀಕ್ಷೆಗಳು ಹೆಚ್ಚಾಗಿವೆ. ಈಗ ಹೊಸ ಅಪ್ಡೇಟ್ ಏನಂದ್ರೆ ಪ್ರಭಾಸ್ ಅವರ ಹೊಸ ಚಿತ್ರದಲ್ಲಿ ಪಾಕಿಸ್ತಾನಿ ನಟಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿಗಳು ಭರ್ಜರಿ ಸುದ್ದಿಯಾಗಿದೆ. ಪ್ರಭಾಸ್ ಸದ್ಯ ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದೊಂದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಇದನ್ನ ಮಾರುತಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ತಿಯಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಎದುರು ಐವರು ನಾಯಕಿಯರು ಇರುತ್ತಾರೆ ಎನ್ನಲಾಗಿದೆ. ಈ ಸಿನಿಮಾದ ನಂತರ ಪ್ರಭಾಸ್ ನಿರ್ದೇಶಕ ಹನು ರಾಘವಪುಡಿ ಜೊತೆ ಕೈ ಜೋಡಿಸಲಿದ್ದಾರೆ. ಈ ಸಿನಿಮಾದ ಕುರಿತಾಗಿ ಅಚ್ಚರಿಯ ವಿಷಯವೊಂದು ಈಗ ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ.

ಹೌದು, ಪ್ರಭಾಸ್ ನಾಯಕನಾಗಲಿರುವ ಈ ಹೊಸ ಸಿನಿಮಾಕ್ಕೆ ಪಾಕಿಸ್ತಾನಿ ನಟಿಯೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ. ಪಾಕಿಸ್ತಾನದ ಜನಪ್ರಿಯ ನಟಿ ಸಜಲ್ ಅಲಿ (Sajal Ali) ಸೋಶಿಯಲ್ ಮೀಡಿಯಾದಲ್ಲಿ ಒಂದು ಕೋಟಿಗೂ ಹೆಚ್ಚು ಜನ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಸಜಲ್ ಅಲಿ ಹಲವು ಸಿನಿಮಾ, ಧಾರಾವಾಹಿ ಮತ್ತು ವೆಬ್ ಸೀರಿಸ್ ನಲ್ಲಿ ನಟಿಸಿದ ಅನುಭವವನ್ನು ಹೊಂದಿದ್ದಾರೆ.

ಈ ಹಿಂದೆ ಬಾಲಿವುಡ್‌ ನಲ್ಲಿ ‘ಮಾಮ್’ ಸಿನಿಮಾದಲ್ಲಿ ನಟಿಸಿದ್ದರು. ತನ್ನ ಅಂದದಿಂದ ಈ ನಟಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಪ್ರಭಾಸ್ ಅವರ ಹೊಸ ಚಿತ್ರದಲ್ಲಿ ಸಜಲ್ ಅಲಿಯೇ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಿತ್ರತಂಡವು ಈ ಪಾಕಿಸ್ತಾನಿ ನಟಿಯನ್ನು ಕರೆತರಬೇಕೆಂದು ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಈ ವಿಷಯ ಟಾಕ್ ಆಫ್ ದಿ ಟೌನ್ ಆಗಿದೆ.

Shravani Subramanya: ವಿಜಯಾಂಬಿಕೆ ಗಾಳಕ್ಕೆ ಸಿಕ್ಕ ಶ್ರೀವಲ್ಲಿ, ಸುಬ್ಬು ಮನೆಯವ್ರು ಬೀದಿ ಪಾಲು , ಮುಂದೆ ಏನು?

Leave a Comment