Nikhil Siddharth : ಮುಚ್ಚಿದ್ದ ದೇಗುಲಕ್ಕೆ ಕಾಯಕಲ್ಪ ನೀಡಿ, ಬಾಗಿಲು ತೆರೆಸಿ ರಿಯಲ್ ಹೀರೋ ಆದ ನಟ ನಿಖಿಲ್

Written by Soma Shekar

Published on:

---Join Our Channel---

Nikhil Siddharth : ಕಾರ್ತಿಕೇಯ ಮತ್ತು ಕಾರ್ತಿಕೇಯ 2 (Karthikeya 2)) ಸಿನಿಮಾಗಳ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡ ತೆಲುಗಿನ ಯುವ ನಟ ನಿಖಿಲ್ (Nikhil Siddharth) ಅವರು ಕಾರ್ತಿಕೇಯ 2 ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರನ್ನು ಪಡೆದಿರುವ ನಟನಾಗಿದ್ದಾರೆ. ವಿಭಿನ್ನವಾದ ಕಥೆಗಳ ಸಿನಿಮಾ ಮಾಡುವ ಮೂಲಕವೇ ವಿಶೇಷ ಅಭಿಮಾನಿಗಳನ್ನು ಈ ನಟ ಹೊಂದಿದ್ದಾರೆ. ಈಗ ಈ ನಟ ತೆರೆ ಮೇಲೆ ಮಾತ್ರವೇ ಅಲ್ಲ ರಿಯಲ್ ಲೈಫ್ ನಲ್ಲೂ ಸಹಾ ಹೀರೋ ಆಗಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಕೆಲವು ವರ್ಷಗಳಿಂದಲೂ ಮುಚ್ಚಲಾಗಿದ್ದ ದೇವಾಲಯವೊದನ್ನು ಮತ್ತೆ ತೆರೆಯುವಂತೆ ಮಾಡಿದ್ದಾರೆ ನಟ ನಿಖಿಲ್. ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯ ಚಿರಾಲ (Chirala) ಎನ್ನುವ ಕಡೆಯಲ್ಲಿ ಇರುವ ಒಂದು ದೇವಸ್ಥಾನವು (Temple) ಸರಿಯಾದ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಯನ್ನು ತಲುಪಿತ್ತು. ಈಗ ಈ ದೇಗುಲದ ನಿರ್ವಹಣಾ ಜವಾಬ್ದಾರಿಯನ್ನು ನಟ ನಿಖಿಲ್ ವಹಿಸಿಕೊಂಡಿದ್ದು, ಭಕ್ತರಿಗಾಗಿ ಮತ್ತೆ ದೇಗುಲದ ದ್ವಾರವನ್ನು ತೆರೆಸಿದ್ದಾರೆ.

ಈ ವಿಚಾರವಾಗಿ ನಟ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಊರಿನ ಗ್ರಾಮಸ್ಥರಿಗೆ ಶಿಕ್ಷೆಯಾಗಿ ಈ ದೇಗುಲವನ್ನು ಮುಚ್ಚಲಾಗಿತ್ತು. ನಾವು ಕಳೆದ ತಿಂಗಳು ದೇವಾಲಯವನ್ನು ತೆರೆದು ಅದರ ಜೀರ್ಣೋದ್ಧಾರ ಮಾಡಿದ್ದೇವೆ. ಗ್ರಾಮಸ್ಥರು ಮತ್ತೆ ದೇಗುಲಕ್ಕೆ ಬರುತ್ತಿರುವುದನ್ನು ನೋಡಿ ಖುಷಿಯಾಗಿದೆ.

ನಿಖಿಲ್ ಅವರು ನಡೆದು ಬರುವಾಗ ಗ್ರಾಮದ ಮಹಿಳೆಯರು ಅವರಿಗೆ ಹೂವಿನ ಸ್ವಾಗತವನ್ನು ಕೋರಿದ್ದಾರೆ. ಪ್ರಸ್ತುತ ನಟ ತಮ್ಮ ಮುಂದಿನ ಸಿನಮಾ ಸ್ವಯಂಭುವಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೇ ಅವರು ಮತ್ತೊಂದು ಹೊಸ ಸಿನಿಮಾಕ್ಕೆ ಸಹಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸ್ವಯಂಭು ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

Leave a Comment