Malaika Arora: 50 ರ ಸುಂದರಿಗೆ ನೆಟ್ಟಿಗರ ಕ್ಲಾಸ್, ಎದೆ ತೋರಿಸೋದು ಕಡ್ಡಾಯ ಏನು? ಸಿಟ್ಟಾದ ನೆಟ್ಟಿಗರು

Written by Soma Shekar

Published on:

---Join Our Channel---

Malaika Arora : ಬಾಲಿವುಡ್ ನಲ್ಲಿ (Bollywood) ಕೆಲವು ನಟಿಯರು ವಯಸ್ಸು 50 ದಾಟಿದರೂ ಸಹಾ ತಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಂಡಿದ್ದಾರೆ. ಸ್ಟೈಲಿಶ್ ಲುಕ್ ನೊಂದಿಗೆ ಇಂದಿಗೂ ತಮ್ಮ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಾರೆ. ಅಂತಹ ನಟಿಯರಲ್ಲಿ ಮಲೈಕಾ ಅರೋರಾ (Malaika Arora) ಕೂಡಾ ಒಬ್ಬರು. ನಟಿಯಾಗಿ ದೊಡ್ಡ ಹೆಸರನ್ನು ಮಾಡದೇ ಹೋದರೂ ಡ್ಯಾನ್ಸರ್ ಆಗಿ, ಕಿರುತೆರೆಯ ಶೋ ಗಳಲ್ಲಿ ಜಡ್ಜ್ ಆಗಿ ಮಲೈಕಾ ಜನಪ್ರಿಯತೆ ಪಡೆದಿದ್ದಾರೆ. ಮಲೈಕಾ ದಶಕಗಳ ಹಿಂದೆ ಶಾರೂಖ್ ಖಾನ್ (Shahrukh Khan) ಜೊತೆ ಹೆಜ್ಜೆ ಹಾಕಿದ್ದ ಚೈಯ್ಯಾ ಚೈಯ್ಯಾ ಹಾಡಿನಿಂದಲೇ ಇಂದಿಗೂ ಗುರ್ತಿಸಲ್ಪಡುತ್ತಾರೆ.

ವಯಸ್ಸು 50 ತಲುಪಿದ್ದರೂ ಇನ್ನೂ ಫಿಟ್ ಆಗಿರುವ ನಟಿಯ ಫಿಟ್ನೆಸ್ ಗೆ ಅವರ ಅಭಿಮಾನಿಗಳು ಫಿದಾ ಆಗ್ತಾರೆ. ಮಲೈಕಾ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೇ ಹೋದರೂ ತಮ್ಮ ಖಾಸಗಿ ವಿಚಾರಗಳಿಂದಾಗಿ ಸುದ್ದಿಯಾಗುತ್ತಾರೆ. ತಮಗಿಂತ ವಯಸ್ಸಿನಲ್ಲಿ ಕಿರಿಯನಾದ ನಟ ಅರ್ಜುನ್ ಕಪೂರ್ ಜೊತೆಗಿನ ಪ್ರೇಮದ ವಿಚಾರವಾಗಿ, ಆಗಾಗ ಇವರ ಮದುವೆ ವಿಚಾರವಾಗಿ ಸುದ್ದಿಯಾಗುತ್ತಾರೆ.

ಇದಲ್ಲದೇ ನಟಿಯು ಧರಿಸುವ ದುಬಾರಿ ಡ್ರೆಸ್ ಗಳಿಂದಾಗಿಯೂ ಚರ್ಚೆಯ ವಿಷಯವಾಗುತ್ತಾರೆ. ಯಾವುದೇ ಕಾರ್ಯಕ್ರಮವೇ ಆಗಲಿ ಬಹಳ ದುಬಾರಿ ವಸ್ತ್ರಗಳನ್ನು ಧರಿಸಿ ಹಾಜರಾಗುವ ಮಲೈಕಾ ಎಲ್ಲರ ಗಮನವನ್ನ ಸೆಳೆಯುವಂತೆ ಕಾಣಿಸಿಕೊಳ್ಳುವುದು ಸಹಜ. ವಯಸ್ಸು ಏರುತ್ತಿದ್ದರು ಯುವನಟಿಯರನ್ನು ನಾಚಿಸುವಂತಹ ದೇಹ ಸೌಂದರ್ಯವನ್ನು ಹೊಂದಿರುವುದು ಮಲೈಕಾ ವಿಶೇಷತೆಯಾಗಿದೆ.

ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಮಲೈಕಾ ಬಹಳ ಅದ್ದೂರಿಯಾಗಿ ತಯಾರಾಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಕಾರ್ಯಕ್ರಮದ ಫೋಟೋಗಳು ಮತ್ತು ವೀಡಿಯೋ ತುಣುಕುಗಳು ವೈರಲ್ ಆದ ಮೇಲೆ ನೆಟ್ಟಿಗರು ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದ ನಾಥದ್ವಾರದಲ್ಲಿ (Nathadwara) ನಡೆದ ಒಂದು ಫ್ಯಾಷನ್ ಉತ್ಸವದಲ್ಲಿ ನಟಿ ಭಾಗಿಯಾಗಿದ್ದರು. ಈ ವೇಳೆ ಅಲ್ಲಿದ್ದ ಪ್ರೇಕ್ಷಕರ ಜೊತೆ ಒಂದಷ್ಟು ಸಂವಾದವನ್ನು ನಡೆಸಿದ್ದಾರೆ.

ಈ ವೇಳೆ ನಟಿ ಧರಿಸಿದ್ದ ಔಟ್ ಫಿಟ್ ನೋಡಿ ಫ್ಯಾನ್ ಗಳು ಎಂದಿನಂತೆ ಮೆಚ್ಚುಗೆಯ ಮಳೆಯನ್ನೇ ಹರಿಸಿದ್ದಾರೆ. ಇದೇ ವೇಳೆ ಇನ್ನೂ ಅನೇಕರು ಇಂತದೊಂದು ಧಾರ್ಮಿಕ ಸ್ಥಳಕ್ಕೆ ಬರುತ್ತಿರುವ ವಿಚಾರ ಮೊದಲೇ ಗೊತ್ತಿದ್ದರೂ ಸಹಾ ಎದೆ ಕಾಣುವಂತೆ ಏಕೆ ವಸ್ತ್ರ ಧರಿಸುತ್ತೀರಿ. ಕಾರ್ಯಕ್ರಮಗಳಲ್ಲಿ ಮೈ ತೋರಿಸಲೇಬೇಕು ಎನ್ನುವ ನಿಯಮವೇನಾದರೂ ಇದೆಯಾ? ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Leave a Comment