Cinema News: ಆ ಆಸೆ ಇದೆ ಆದ್ರೆ ನನ್ನ ಗಂಡ ಅದ್ರಲ್ಲಿ ವೇಸ್ಟ್: ಪ್ಯಾನ್ ಇಂಡಿಯಾ ಹೀರೋ ಪತ್ನಿ ಸಂಚಲನ ಮಾತು

Written by Soma Shekar

Published on:

---Join Our Channel---

Cinema News: ಇತ್ತೀಚೆಗಷ್ಟೇ ಪ್ಯಾನ್ ಇಂಡಿಯಾ ಮಟ್ಟದ ಸ್ಟಾರ್ ಹೀರೋನ ಪತ್ನಿಯೊಬ್ಬರು ಮಾಡಿರುವ ಸಂಚಲನ ಹುಟ್ಟಿಸುವ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹೆಂಡತಿ ಮತ್ತು ಗಂಡನ (Husband and Wife) ನಡುವೆ ಜಗಳ ಇರುತ್ತದೆ‌.‌ ಗಂಡ ಹೆಂಡತಿ ನಡುವೆ ಜಗಳ ನಡೆದಾಗ ಒಬ್ಬರು ಮತ್ತೊಬ್ಬರನ್ನು ಬೈಯ್ಯುವುದು ತೀರಾ ಸಾಮಾನ್ಯವಾದ ವಿಚಾರವೂ ಹೌದು. ಅನಂತರ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತ ಜಗಳ ಮರೆತು ಒಂದಾಗುವ ದಂಪತಿಗಳು ಬೇಕಾದಷ್ಟು ಜನರಿದ್ದಾರೆ.

ಹೀಗೆ ಗಂಡ ಹೆಂಡತಿ ನಡುವಿನ ಜಗಳ ಅನ್ನೋದು ಸಾಮಾನ್ಯ ಜನರಲ್ಲಿ ಮಾತ್ರವೇ ಅಲ್ಲದೇ ಸಿನಿಮಾ ರಂಗದ (Cinema News) ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳ ನಡುವೆ ಸಹಾ ಇದ್ದೇ ಇರುತ್ತದೆ. ಆದರೆ ಇಲ್ಲೊಬ್ಬ ಸ್ಟಾರ್ ನಟನ ಪತ್ನಿ ಮಾತ್ರ ತಮ್ಮ ಪತಿಯ ಕುರಿತಾಗಿ ಆಡಿರುವ ಮಾತುಗಳು ಈಗ ಭರ್ಜರಿಯಾಗಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಹೌದು, ಟಾಲಿವುಡ್ ನ ನಟ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದಂತಹ ಒಬ್ಬ ಸ್ಟಾರ್ ನಾಯಕ (Star Hero) ನಟ ಪತ್ನಿ ತಮ್ಮ ಫ್ರೆಂಡ್ಸ್ ಸರ್ಕಲ್ ನಲ್ಲಿ ತಮ್ಮ ಪತಿ ಬಗ್ಗೆ ಮಾತನಾಡಿಕೊಂಡಿದ್ದು, ತನ್ನ ಗಂಡನ ಜೊತೆಗಿನ ರೊಮ್ಯಾನ್ಸ್ ಕುರಿತಾಗಿ ಚರ್ಚೆಯನ್ನು ಮಾಡಿರೋದು ಒಂದು ಹಾಟ್ ಟಾಪಿಕ್ ಆಗಿಬಿಟ್ಟಿದೆ. ಈಕೆಗೆ ಪತಿಯ ಹಾಗೆ ತಾನೂ ಸಹಾ ಸಿನಿಮಾ ರಂಗದಲ್ಲಿ ಮಿಂಚುವ ಕನಸು ಇತ್ತಂತೆ.‌

ಆದರೆ ದೊಡ್ಡ ಮನೆತನದ ಸೊಸೆಯಾಗಿದ್ದರಿಂದ ಅವರನ್ನು ಚಿತ್ರರಂಗದಿಂದ ದೂರ ಇಟ್ಟರಂತೆ. ಇನ್ನು ಆಕೆಯ ಪತಿ ಇಂಡಸ್ಟ್ರಿಯಲ್ಲಿ ದೊಡ್ಡ ಸಕ್ಸಸ್ ಪಡೆದ ಹೀರೋ ಆಗಿದ್ರೂ ರೊಮ್ಯಾನ್ಸ್ ವಿಚಾರದಲ್ಲಿ ಅಷ್ಟೊಂದು ರೊಮ್ಯಾಂಟಿಕ್ ಅಲ್ಲ ಮತ್ತು ಆತ ಸಿಂಪಲ್ ಲೈಫ್ ಸ್ಟೈಲ್ ಗೆ ಆದ್ಯತೆ ನೀಡ್ತಾನಂತೆ. ಅದಕ್ಕೆ ರೋಮ್ಯಾನ್ಸ್ ವಿಚಾರದಲ್ಲಿ ಗಂಡನಿಗೆ ಜೀರೋ ಕೊಡ್ತೀನಿ ಎಂದು ಆಕೆ ಹೇಳಿರುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ.

Leave a Comment