Mrs Marley: ಗಂಡಸರನ್ನ ನಾಯಿಗಿಂತ ಕಡೆಯಾಗಿ ನೋಡುವ, ಅವರ ಕೊರಳಿಗೆ ಚೈನ್ ಹಾಕಿ ಬೀದಿ ಸುತ್ತಿಸುವ ಮಹಿಳೆ ಅದರಿಂದಲೇ ಕೋಟಿ ಕೋಟಿ ಹಣವನ್ನು ಗಳಿಸುತ್ತಿದ್ದಾರೆ ಅಂತ ಹೇಳಿದರೆ ಖಂಡಿತ ನಿಮಗೆ ಇದನ್ನು ನಂಬೋದಕ್ಕೆ ಕಷ್ಟ ಅನಿಸಿಬಹುದು. ಆದರೆ ಈ ಮಾತು ಅಕ್ಷರಶಃ ಸತ್ಯ. ಪುರಷರಿಗೆ ಕಿಂಚಿತ್ತೂ ಗೌರವ ನೀಡದ ಈ ಮಹಿಳೆ ಯಾರು? ಅನ್ನೋದಾದ್ರೆ ಅದಕ್ಕೆ ಇಲ್ಲಿದೆ ಉತ್ತರ.
ಮಿಸ್ಟ್ರೆಸ್ ಮಾರ್ಲೆ (Mrs Marley) ಅಂತಾನೇ ಜನಪ್ರಿಯತೆ ಪಡೆದಿರೋ ಮಹಿಳೆ ಮಾರ್ಲೆ. ಅಮೆರಿಕಾದ (America) ಈ ಮಹಿಳೆಗೆ ಈಗ 30 ವರ್ಷ ವಯಸ್ಸು. ವಿಚಿತ್ರ ಏನೆಂದರೆ ಗಂಡಸರೇ ಈಕೆಯ ಹತ್ತಿರ ಬಂದು ತಮ್ಮನ್ನು ಕ್ರೂ ರವಾಗಿ ನಡೆಸಿಕೊಳ್ಳುವಂತೆ, ಅವಮಾನಿಸುವಂತೆ ಕೇಳುತ್ತಾರೆ. ಅಲ್ಲದೇ ಆಕೆ ಅದೆಲ್ಲವನ್ನು ಮಾಡಿದ ಮೇಲೆ ಹಣವನ್ನು ಸಹಾ ನೀಡುತ್ತಾರೆ.
ದಿನದಿಂದ ದಿನಕ್ಕೆ ಆಕೆಯ ಬಳಿಗೆ ಬರುವ ಪುರುಷರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಆಕೆ ಆನ್ಲೈನ್ ಬುಕ್ಕಿಂಗ್ ಆರಂಭ ಮಾಡೋ ಆಲೋಚನೆ ಸಹಾ ಮಾಡಿದ್ದಾರೆ. ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮಾರ್ಲೆ ತನಗೆ ಸಂಬಳ ಸಾಕಾಗ್ತಿಲ್ಲ ಅನಿಸಿ ಸೈಡ್ ಬ್ಯುಸಿನೆಸ್ ಆರಂಭಿಸುವ ಆಲೋಚನೆ ಮಾಡಿ ಒಂದಷ್ಟು ಅಧ್ಯಯನವನ್ನು ಮಾಡಿದರಂತೆ.
ಆಗ ಕೆಲವೊಂದು ಸಮುದಾಯದ ಮಹಿಳೆಯರು ಹೀಗೆ ಗಂಡಸರನ್ನ ಹಿಡಿತಕ್ಕೆ ತೆಗೆದುಕೊಂಡು, ಅವರನ್ನು ತಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಸಿ ಹಣ ಗಳಿಸುತ್ತಿದ್ದಾರೆ ಎಂದು ತಿಳಿದುಕೊಂಡು, ತಾನು ಸಹಾ ಅದೇ ಬ್ಯುಸಿನೆಸ್ ಮಾಡುವ ತಯಾರಿ ನಡೆಸಿದರಂತೆ. ಆಕೆಯ ಮೊದಲ ಪುರುಷ ಗ್ರಾಹಕ 50 ಡಾಲರ್ ಹಣ ಮತ್ತು ಆಕೆಯ ಊಟದ ಖರ್ಚು ನೀಡಿದರಂತೆ.
ಪುರುಷರು ತನ್ನ ಬಳಿಗೆ ಬಂದು ಹಣ ನೀಡಿ, ಗಿಫ್ಟ್ ನೀಡಿ ಅವಮಾನಿಸಿಕೊಳ್ಳುತ್ತಾರೆ ಎಂದು ಹೇಳುವ ಮಾರ್ಲೆ ಅವರು ನಾನು ಎಷ್ಟೇ ಅವಮಾನ ಮಾಡದರೂ ಸಹಿಸಿಕೊಳ್ತಾರೆ, ನಂತರ ಕೈ ತುಂಬಾ ಹಣ ಕೊಟ್ಟು ಹೋಗ್ತಾರೆ ಎಂದು ಹೇಳಿದ್ದಾರೆ. ಮಾರ್ಲೆ ಫೋಟೋ ವೈರಲ್ ಆದ ಮೇಲೆ ನೆಟ್ಟಿಗರು ಕ್ಯಾಮರಾ ಹಿಂದೆ ಬೇರೆ ಏನೋ ಮಾಡಿ, ಕ್ಯಾಮರಾ ಮುಂದೆ ಅವಮಾನ ಮಾಡೋ ತರ ನಾಟಕ ಆಡಬೇಡಿ ಅಂತ ಅನುಮಾನಿಸಿದ್ದಾರೆ.