Megha Shetty: ಮಾಧವನ್ ಜೊತೆಗೆ ಮೇಘಾ ಶೆಟ್ಟಿ, ಪರಭಾಷೆಗೆ ಹಾರಿದ್ರಾ ಜೊತೆ ಜೊತೆಯಲಿ ನಟಿ; ಥ್ರಿಲ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

Megha Shetty: ನಟಿ ಮೇಘಾ ಶೆಟ್ಟಿ (Megha Shetty) ಜೊತೆ ಜೊತೆಯಲಿ ಸೀರಿಯಲ್ (Jothe Jotheyali) ಮೂಲಕ ಭರ್ಜರಿ ಜನಪ್ರಿಯತೆಯನ್ನು ಪಡೆದಂತಹ ನಟಿಯಾಗಿದ್ದರು. ಕಿರುತೆರೆಯಲ್ಲಿ ನಟಿಸುವಾಗಲೇ ಒಬ್ಬ ಸಿನಿಮಾ ನಟಿಯಷ್ಟು ಜನಪ್ರಿಯತೆಯನ್ನು ಅವರು ಪಡೆದುಕೊಂಡಿದ್ದರು. ಅನಂತರ ನಟಿ ಆ ಜನಪ್ರಿಯತೆಯಿಂದಲೇ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದರು. ಆದರೆ ನಟಿಗೆ ಕಿರುತೆರೆಯಲ್ಲಿ ಸಿಕ್ಕಂತಹ ಯಶಸ್ಸು ಬೆಳ್ಳಿತೆರೆಯಲ್ಲಿ ಸಿಗಲಿಲ್ಲ ಎನ್ನುವುದು ಸತ್ಯ. ನಟಿಯು ಒಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಈಗ ನಟಿ ಮೇಘಾ ಶೆಟ್ಟಿ ಅವರು ಕನ್ನಡದಿಂದ ಪರಭಾಷೆಗೆ ಹಾರಲು ಸಜ್ಜಾಗಿದ್ದಾರಾ? ಅನ್ನೋ ಅನುಮಾನವೊಂದು ಅಭಿಮಾನಿಗಳನ್ನು ಕಾಡಿದೆ. ಹೌದು, ನಟಿ ಮೇಘಾ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡ ಫೋಟೋ ಗಳು ಈಗ ಇಂತಹ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇಷ್ಟಕ್ಕೂ ಆ ಫೋಟೋಗಳ ವಿಚಾರ ಏನೆಂದು ತಿಳಿಯೋಣ ಬನ್ನಿ.

ಮೇಘಾ ಶೆಟ್ಟಿ ಅವರು ತಮ್ಮ ಖಾತೆಯಲ್ಲಿ ದಕ್ಷಿಣ ಮತ್ತು ಬಾಲಿವುಡ್ ನಲ್ಲಿ ತನ್ನದೇ ಆದ ಹೆಸರನ್ನು ಪಡೆದಿರುವ ನಟ ಮಾಧವನ್ (Madhavan) ಅವರ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಅದರ ಜೊತೆಗೆ ಅಂತಹ ಅಸಾಧಾರಣ ನಟನ ಜೊತೆಗೆ ಮಾತನಾಡುವ ಸಮಯ, ನಿಜವಾಗಿಯೂ ಉತ್ತಮ ಕಲಿಕೆಯ ಅನುಭವ ಎಂದು ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.

ನಟಿ ಶೇರ್ ಮಾಡಿದ ಫೋಟೋಗಳಿಗೆ ಮೆಚ್ಚುಗೆಗಳನ್ನು ನೀಡುತ್ತಿರುವ ಅಭಿಮಾನಿಗಳು ಇದೇ ವೇಳೆ ನೀವು ಪರಭಾಷೆಯ ಕಡೆಗೆ ಮುಖ ಮಾಡುತ್ತಿದ್ದೀರಾ ? ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅನೇಕರು ನಟಿಗೆ ಶುಭಾಶಯವನ್ನು ಸಹಾ ತಿಳಿಸುತ್ತಿದ್ದಾರೆ. ಬಾಲಿವುಡ್ ನಲ್ಲೂ ನಟಿಸಿ ಎಂದು ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ. ಮೇಘಾ ಶೆಟ್ಟಿ ಅವರ ಫೋಟೋಗಳು ಸದ್ಯಕ್ಕೆ ಹಾಟ್ ಟಾಪಿಕ್ ಆಗಿದೆ.

Leave a Comment