Crime News :ಒಬ್ಬರಲ್ಲ ತನ್ನ ಇಬ್ಬರು ಪ್ರೇಮಿಗಳ ಜೊತೆಗೆ ವೈದ್ಯೆಯೊಬ್ಬರು (Lady Doctor) ಹೊಟೇಲ್ ಕೋಣೆಯೊಂದರಲ್ಲಿ ರೊಮ್ಯಾನ್ಸ್ ಮಾಡುವಾಗಲೇ ಪತಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಘಟನೆಯೊಂದು (Crime News) ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ಇಬ್ಬರು ಪ್ರೇಮಿಗಳ ಜೊತೆ ವೈದ್ಯೆ ಎಂಜಾಯ್ ಮಾಡುವಾಗಲೇ ಆಕೆಯ ಪತಿ ಶಾಕಿಂಗ್ ಎನ್ನುವಂತೆ ಸ್ಥಳಕ್ಕೆ ಎಂಟ್ರಿಯನ್ನು ಕೊಟ್ಟಿದ್ದು, ಪತ್ನಿ ಇಬ್ಬರ ತೋಳ ತೆಕ್ಕೆಯಲ್ಲಿ ಇದ್ದುದ್ದನ್ನು ನೋಡಿ ಬೆಚ್ಚಿದ್ದಾನೆ.
ಅನಂತರ ತನ್ನ ಪತ್ನಿಯೂ ಸೇರಿದಂತೆ ಆಕೆಯ ಜೊತೆಗಿದ್ದ ಇಬ್ಬರು ಪ್ರೇಮಿಗಳಿಗೂ ಆತ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಉತ್ತರ ಪ್ರದೇಶದ (Uttar Pradesh) ಕಾಸ್ ಘಂಜ್ ನಲ್ಲಿ ಘಟನೆ ನಡೆದಿದ್ದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವೃತ್ತಿಯಿಂದ ವೈದ್ಯರಾಗಿರುವ ದಂಪತಿ ಮಧ್ಯೆ ಬಿರುಕು ಮೂಡಿ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದ್ದು, ಪತಿಗೆ ಆತನ ಪತ್ನಿಯ ನಡತೆಯ ಬಗ್ಗೆ ಶಂಕೆ ಇತ್ತೆನ್ನಲಾಗಿದೆ.
ಆತ ಈ ಹಿಂದೆ ಪತ್ನಿಗೆ ಎಚ್ಚರಿಕೆ ಕೊಟ್ಟಾಗ ಅದೇ ವಿಷಯವಾಗಿ ಜಗಳವಾಗುತ್ತಿತ್ತು ಎನ್ನಲಾಗಿದ್ದು, ವೈದ್ಯೆ ತನ್ನ ಗಂಡ ಮತ್ತು ಅತ್ತೆಯ ಮೇಲೆ ಕೌಟುಂಬಿಕ ಹಿಂಸೆಯ ದೂರನ್ನು ಸಹಾ ನೀಡಿದ್ದಳು ಎನ್ನಲಾಗಿದೆ. ಅನಂತರ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ಆದರೆ ಪತಿಯು ಪತ್ನಿಯ ಅಸಲಿಯತ್ತನ್ನ ಎಲ್ಲರ ಮುಂದೆ ತರದೇ ಹೋದರೆ ಯಾರೂ ನಂಬೋದಿಲ್ಲ ಎನ್ನುವ ಕಾರಣಕ್ಕೆ ಆಕೆಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ.
ಯಾರು ಎಷ್ಟೇ ಬುದ್ಧಿ ಹೇಳಿದರೂ ಅದಕ್ಕೆ ಬೆಲೆ ನೀಡದ ವೈದ್ಯೆ ಇತ್ತೀಚಿಗೆ ಹೊಟೇಲ್ ಒಂದಕ್ಕೆ ತೆರಳಿದ್ದು, ಅದರ ಸುಳಿವು ಪಡೆದ ಪತಿಯು ತನ್ನ ಸಂಬಂಧಿಕರ ಜೊತೆಗೆ ಹೊಟೇಲ್ ಗೆ ತೆರಳಿದ್ದು ಪತ್ನಿ ಇಬ್ಬರ ಜೊತೆಗೆ ಸರಸವಾಡುವಾಗಲೇ ಅವರನ್ನು ಹಿಡಿದಿದ್ದಾನೆ. ಅನಂತರ ಎಲ್ಲರೂ ಸೇರಿ ಪತ್ನಿ ಮತ್ತು ಆಕೆಯ ಇಬ್ಬರು ಪ್ರೇಮಿಗಳನ್ನು ಥಳಿಸಿದ್ದಾರೆ. ಪೊಲೀಸರು ಸಾಮಾಜಿಕ ಶಾಂತಿ ಕದಡಿದ ಆರೋಪದ ಮೇಲೆ ವೈದ್ಯ ದಂಪತಿ ಮತ್ತು ಇನ್ನೂ ಮೂವರನ್ನು ಬಂಧಿಸಿದೆ.