Malaika Arora: ನಿಂಗೆ ತೋರ್ಸೋಕೂ ಬರಲ್ಲ, ಮುಚ್ಕೊಳ್ಳೋಕೂ ಬರಲ್ಲ, ಮಲೈಕಾ ಫೋಟೋಗೆ ಮಹಿಳೆಯ ರಿಯಾಕ್ಷನ್

Written by Soma Shekar

Published on:

---Join Our Channel---

Malaika Arora: ಬಾಲಿವುಡ್ ನಟಿ ಮಲೈಕಾ ಅರೋರ (Malaika Arora) ಇತ್ತೀಚಿನ ದಿನಗಳಲ್ಲಿ ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ವಿಚಾರವಾಗಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಅರ್ಜುನ್ ಕಪೂರ್ ಮಲೈಕಾ ಮದುವೆ ಯಾವಾಗ ಎಂದು ಕಾಯ್ತಾ ಇದ್ದವರಿಗೆ ಅವರ ಬ್ರೇಕಪ್ ವಿಷಯವು ಶಾಕ್ ಅನ್ನು ನೀಡಿದೆ. ಬ್ರೇಕಪ್ ಸುದ್ದಿಯ ಬೆನ್ನಲ್ಲೇ ಈಗ ನಟಿ ಗೆಳತಿಯರ ಜೊತೆಗೂಡಿ ಮಲೈಕಾ ವಿದೇಶಕ್ಕೆ ಹಾರಿದ್ದಾರೆ.

ನಟಿ ತಮ್ಮ ವಿದೇಶ ಪ್ರವಾಸದ ಪೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಾಗರದ ಬಳಿ ನಿಂತು ಪೋಸ್ ಕೊಟ್ಟಿರುವ ನಟಿ ಫೋಟೋ ಶೇರ್ ಮಾಡಿದ ನಂತರ ಅದಕ್ಕೆ ನೆಟ್ಟಿಗರಿಂದ ಕಾಮೆಂಟ್ ಗಳ ಹೊಳೆಯೇ ಹರಿದು ಬರುತ್ತಿದೆ ಅಂದರೆ ಅದು ಖಂಡಿತ ಸುಳ್ಳಲ್ಲ.

ಪ್ರತಿ ಬಾರಿ ಅರ್ಜುನ್ ಕಪೂರ್ (Arjun Kapoor) ಜೊತೆಗೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದ ನಟಿ ಈ ಬಾರಿ ತಮ್ಮ ಗೆಳತಿಯರ ಜೊತೆಗೆ ವಿದೇಶ ಪ್ರವಾಸಕ್ಕೆ ಹಾರಿದ್ದಾರೆ. ಅರ್ಜುನ್ ಇಲ್ಲದ ಮಲೈಕಾನ ನೋಡಿ ಅಭಿಮಾನಿಗಳು ತಮ್ಮ ಬೇಸರವನ್ನು ಸಹಾ ವ್ಯಕ್ತಪಡಿಸಿದ್ದಾರೆ.

ವೈವಿದ್ಯಮಯ ಹಾಟ್ ಮತ್ತು ಬೋಲ್ಡ್ ಡ್ರೆಸ್ ಗಳನ್ನು ಧರಿಸಿಕೊಂಡು ವಿವಿಧ ಕಡೆಗಳಲ್ಲಿ ಪೋಸ್ ನೀಡಿರುವ ನಟಿಯು, ತಮ್ಮ ಗೆಳತಿಯರ ಜೊತೆಗಿನ ಫೋಟೋಗಳು ಮತ್ತು ತಾವು ಉಳಿದುಕೊಂಡಿರುವ ಕೋಣೆಯ ಫೋಟೋಗಳನ್ನು ಸಹಾ ಶೇರ್ ಮಾಡಿಕೊಂಡಿದ್ದಾರೆ‌.

ನಟಿಯ ಫೋಟೋ ನೋಡಿದ ಮಹಿಳೆಯೊಬ್ಬರು ನಿನಗೆ ಮುಚ್ಚಿಕೊಳ್ಳೋದು ಬರಲ್ಲ, ತೋರಿಸೋಕೂ ಬರಲ್ಲ ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಜೂಮ್ ಮಾಡಿ ನೋಡಿದವರಿಗೆ ಹತ್ತು ಅಂಕ ಅಂತ ವ್ಯಂಗ್ಯ ಮಾಡಿದರೆ, ಇನ್ನೊಬ್ಬರು ಜೂಮ್ ಮಾಡಿ ನೋಡೋರಿಗೆ ಟೀ, ಸ್ನಾಕ್ಸ್ ಅರೇಂಜ್ ಮಾಡಿ ಎಂದಿದ್ದಾರೆ. ಒಟ್ನಲ್ಲಿ ನಟಿಯ ಫೋಟೋಗಳಿಗೆ ಭರ್ಜರಿ ಕಾಮೆಂಟ್ ಗಳು ಹರಿದು ಬರ್ತಿವೆ.

Leave a Comment