Mahanati Show: ಶ್ರಮಿಕ ವರ್ಗಕ್ಕೆ ಅಪಮಾನ; ಮಹಾನಟಿ ಶೋನ ಗಗನ, ರಮೇಶ್, ಪ್ರೇಮ, ಅನುಶ್ರೀ ವಿರುದ್ಧ ದೂರು

Written by Soma Shekar

Published on:

---Join Our Channel---

Mahanati Show: ಜೀ ಕನ್ನಡ (Zee Kannada) ವಾಹಿನಿಯು ತನ್ನ ಹೊಸ ಹೊಸ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರವುದು ಮಾತ್ರವೇ ಅಲ್ಲದೇ ಹಲವು ಪ್ರತಿಭೆಗಳನ್ನು ನಾಡಿಗೆ ಪರಿಚಯ ಮಾಡಿಕೊಟ್ಟ ಹೆಗ್ಗಳಿಕೆಯನ್ನು ಕೂಡಾ ತನ್ನದಾಗಿಸಿಕೊಂಡಿದೆ. ಈಗ ಹೊಚ್ಚ ಹೊಸ ಕಾನ್ಸೆಪ್ಟ್ ನೊಂದಿಗೆ ಮಹಾನಟಿ (Mahanati Show) ಎನ್ನುವ ರಿಯಾಲಿಟಿ ಶೋ ಮೂಲಕ ಪ್ರತಿಭಾವಂತ ನಟಿಯರನ್ನು ಪರಿಚಯಿಸುವ ಅದ್ಭುತವಾದ ಒಂದು ಪ್ರಯತ್ನ ನಡೆಯುತ್ತಿದೆ. ಮಹಾನಟಿ ರಿಯಾಲಿಟಿ ಶೋ ಆರಂಭವಾದ ಕೆಲವೇ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿಯಾಗಿದೆ. ಮಹಾನಟಿ ಶೋ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಗಗನಾ ಶೋ ನಲ್ಲಿ ಒಂದು ಪ್ರಮುಖ ಆಕರ್ಷಣೆಯಾಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.

ವಿಷಯ ಯಾವುದೇ ನೀಡಿದರೂ ಅದಕ್ಕೆ ತಕ್ಕಂತೆ ತಾನೇ ಸಂಭಾಷಣೆ ಸಿದ್ಧಪಡಿಸಿಕೊಂಡು ಅಭಿನಯಿಸುವ ಗಗನಾ (Gagana) ಈಗ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗಿದ್ದಾರೆ. ಅಲ್ಲದೇ ಇದೀಗ ಅವರನ್ನು ಸೇರಿದಂತೆ ನಿರೂಪಕಿ ಅನುಶ್ರೀ, ತೀರ್ಪುಗಾರರಾದ ರಮೇಶ್ ಅರವಿಂದ್ (Ramesh Arvind), ನಟಿ ಪ್ರೇಮ (Prema) ಮತ್ತಿತರರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿದೆ. ಇಷ್ಟಕ್ಕೂ ದೂರು ದಾಖಲಾಗಿದ್ದು ಏಕೆ? ಅಂತದ್ದೇನು ನಡೆಯಿತು? ಅನ್ನೋದನ್ನ ತಿಳಿಯೋಣ ಬನ್ನಿ.

ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಅವರು ಸನ್ನಿವೇಶವೊಂದನ್ನು ನೀಡಿ ಅಭಿನಯಿಸಲು ಹೇಳಿದ್ದರು. ಆ ಸಮಯದಲ್ಲಿ ಮೆಕ್ಯಾನಿಕ್ ಕುರಿತಾಗಿ ಇದ್ದ ಸನ್ನಿವೇಶದಲ್ಲಿ ಗಗನಾ ಅವರು ಅಭಿನಯಿಸುವ ವೇಳೆಯಲ್ಲಿ, ಡೈಲಾಗ್ ಹೇಳುವ ಹುಮ್ಮಸ್ಸಿನಲ್ಲಿ ಗಗನಾ ಮೆಕ್ಯಾನಿಕ್ ನ ಮದುವೆಯಾದರೆ ಗ್ರೀಸ್ ತಿಂದು ಬದುಕಬೇಕಾಗುತ್ತೆ ಅಂತ ಹೇಳಿದ್ದರು. ಈ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಚರ್ಚೆ ನಡೆದಿದ್ದು , ಅನೇಕರು ಅಸಮಾಧಾನವನ್ನು ಸಹಾ ಹೊರ ಹಾಕಿದ್ದಾರೆ.

‌ಚಿಕ್ಕನಾಯಕನಹಳ್ಳಿಯ ದ್ವಿಚಕ್ರ ವಾಹನ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಬಗ್ಗೆ ದೂರನ್ನು ದಾಖಲು ಮಾಡಿದ್ದಾರೆ ಎನ್ನುವ ಸುದ್ದಿಗಳಾಗಿದೆ. ಗಗನಾ ಅವರು ಹೇಳಿದ ಡೈಲಾಗ್ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವನ್ನು ಉಂಟು ಮಾಡಿದೆ ಎಂದು ದೂರನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.‌ ಗಗನಾ ಅವರ ವೀಡಿಯೋ ಗಳಿಗೆ ಮಾಡಿರುವ ಕಾಮೆಂಟ್ ಗಳಲ್ಲಿ ಸಹಾ ಶಾಕಿಂಗ್ ಆಗಿವೆ.

ಇದೇ ವೇಳೆ ಶೋನಲ್ಲಿ ಗಗನಾ ಅವರ ಬಗ್ಗೆ ವಿಶೇಷ ಮೆಚ್ಚುಗೆ ತೀರ್ಪುಗಾರರಿಂದ ವ್ಯಕ್ತವಾಗಿದೆ. ಶೋ ನ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಿರ್ದೇಶಕ ತರುಣ್ ಸುಧೀರ್ (Tarun Sudhir) ಅವರು ಈಗಾಗಲೇ ಗಗನಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಮಾತ್ರವೇ ಅಲ್ಲದೇ ಅಡ್ವಾನ್ಸ್ ಹಣವನ್ನು ಸಹಾ ನೀಡಿದ್ದಾರೆ. ಎರಡನೇ ಬಾರಿ ಅವರು ಒಂದು ಲೋಟವನ್ನು ಸಹಾ ಬಹುಮಾನವಾಗಿ ನೀಡಿದ್ದರು.

Leave a Comment