Rave Party: ರೇವ್ ಪಾರ್ಟಿ ಪ್ರಕರಣ, ನಟಿ ಹೇಮಾ ಪರ ನಿಂತು ಗುಡುಗಿದ ನಟ ವಿಷ್ಣು ಮಂಚು; ಆಕೆ ನಿರಪರಾಧಿ

Written by Soma Shekar

Published on:

---Join Our Channel---

Rave Party : ಕೆಲವೇ ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ನಡೆದಂತಹ ರೇವ್ ಪಾರ್ಟಿ (Rave Party) ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾದ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯ ಬಳಿ ಫಾರ್ಮ್ ಹೌಸ್ ಒಂದರಲ್ಲಿ ರೇವ್ ಪಾರ್ಟಿ ನಡೆದಿತ್ತು. ಈ ವೇಳೆ ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆಯಾಗಿದೆ ಎಂದು ಹೇಳಲಾಗಿತ್ತು. ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಲ್ಲಿದ್ದವರನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ಪಾರ್ಟಿಯಲ್ಲಿ ತೆಲುಗು ಸಿನಿಮಾಗಳ ಜನಪ್ರಿಯ ಪೋಷಕ ನಟಿ ಹೇಮಾ (Actress Hema) ಸಹಾ ಇದ್ದರು ಎನ್ನುವುದಾಗಿ ಪೊಲೀಸ್ ಕಮಿಷನರ್ ಸ್ಪಷ್ಟನೆಯನ್ನು ನೀಡಿದ್ದರು.

ರೇವ್ ಪಾರ್ಟಿ ಪ್ರಕರಣದ ಕುರಿತಾಗಿ ತನಿಖೆ ನಡೆಯುತ್ತಿರುವಾಗಲೇ ನಟಿಯ ಪರವಾಗಿ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಜನಪ್ರಿಯ ನಟ ವಿಷ್ಣು ಮಂಚು (Vishnu Manchu) ಈಗ ದನಿಯನ್ನು ಎತ್ತಿದ್ದಾರೆ. ನಟಿ ಹೇಮಾ ಅವರನ್ನು ಬೆಂಬಲಿಸುತ್ತಾ ತಮ್ಮ ಎಕ್ಸ್ (X) ಖಾತೆಯಲ್ಲಿ ವಿಷ್ಣು ಮಂಚು ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ರೇಪ್ ಪಾರ್ಟಿಯಲ್ಲಿ ಡ್ರ ಗ್ಸ್ ಬಳಕೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಒಂದಷ್ಟು ಮಾಧ್ಯಮಗಳು ನಟಿ ಹೇಮಾ ಅವರ ವಿರುದ್ಧ ಆಧಾರ ರಹಿತವಾದ ಆರೋಪಗಳನ್ನ ಮಾಡುತ್ತಿದೆ.

ಯಾರೂ ಸಹಾ ಈಗಲೇ ನಿರ್ಧಾರಕ್ಕೆ ಬಂದು ಸತ್ಯವಲ್ಲದೇ ಇರುವ ವಿಚಾರಗಳನ್ನು ಅನ್ಯರೊಂದಿಗೆ ಹಂಚಿಕೊಳ್ಳಬೇಡಿ ಎಂದು ನಾನು ಮನವಿಯನ್ನು ಮಾಡುತ್ತಿದ್ದೇನೆ. ಹೇಮಾ ಮೇಲಿನ ಆರೋಪಗಳು ಸಾಬೀತಾಗುವವರೆಗೂ ಆಕೆ ನಿರಪರಾಧಿ. ಆಕೆ ಒಬ್ಬ ತಾಯಿ ಹೆಂಡತಿ ಹಾಗೂ ಮಹಿಳೆ ಎನ್ನುವುದರ ಬಗ್ಗೆಯೂ ನಾವೆಲ್ಲರೂ ಆಲೋಚಿಸಬೇಕಾಗಿದೆ. ಆಕೆಯ ವ್ಯಕ್ತಿತ್ವದ ಕುರಿತಾಗಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ವಿರೋಧಿಸುತ್ತದೆ.

ಹೇಮಾ ಅವರ ವಿರುದ್ಧ ಪೊಲೀಸರು ಘನವಾದ ಸಾಕ್ಷಿಗಳನ್ನು ಸಾಬೀತುಪಡಿಸಿದಲ್ಲಿ ಕಲಾವಿದರ ಸಂಘವು ಹೇಮ ವಿರುದ್ಧ ಶಿಸ್ತಿನ ಕ್ರಮವನ್ನು ಜರುಗಿಸುತ್ತದೆ. ಆದರೆ ಅಲ್ಲಿಯವರೆಗೆ ದಯವಿಟ್ಟು ಈ ವಿಷಯದ ಕುರಿತಾಗಿ ಕಾಮಂಟ್ ಗಳನ್ನು ಮಾಡುವುದು ಬೇಡ ಎಂದು ನಟ ಹೇಳುವ ಮೂಲಕ ಹೇಮ ಅವರ ಪರವಾಗಿ ನಿಂತಿದ್ದಾರೆ ವಿಷ್ಣು ಮಂಚು. ನಟಿ ಹೇಮಾ ತೆಲುಗು ಚಿತ್ರರಂಗದಲ್ಲಿ ಬಹಳಷ್ಟು ದೊಡ್ಡ ಹೆಸರನ್ನು ಮಾಡಿರುವ ಪೋಷಕ ನಟಿಯಾಗಿದ್ದು ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Comment