Lakshmi Nivasa: ಜಯಂತ್ ನ ಫ್ಲಾಷ್ ಬ್ಯಾಕ್ ಟ್ವಿಸ್ಟ್; ಸೈಕೋಗೂ ವೆಂಕಿಗೂ ಏನ್ ಸಂಬಂಧ? ಥ್ರಿಲ್ಲಿಂಗ್ ಟ್ವಿಸ್ಟ್

Written by Soma Shekar

Published on:

---Join Our Channel---

Lakshmi Nivasa: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಸೀರಿಯಲ್ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಯುಗಾದಿ ಹಬ್ಬದ ಎಪಿಸೋಡ್ ನಲ್ಲೇ ನೀಡಲಾಗಿದೆ ಹೊಸ ಟ್ವಿಸ್ಟ್. ಈ ತಿರುವು ಖಂಡಿತ ಯಾರೂ ಸಹಾ ಊಹೆ ಮಾಡಿರಲಿಲ್ಲ ಎಂದೇ ಹೇಳಬಹುದಾಗಿದ್ದು, ಪ್ರೇಕ್ಷಕರ ತಲೆಯಲ್ಲೀಗ ನೂರು ಪ್ರಶ್ನೆಗಳು ಮೂಡಿದೆ. ಯುಗಾದಿ ಹಬ್ಬಕ್ಕಾಗಿ ಜಯಂತ್ ಜಾಹ್ನವಿಯನ್ನ ಕರ್ಕೊಂಡು ಅವರ ಮನೆಗೆ ಬಂದಿದ್ದಾನೆ ಹಾಗೂ ಮನೆ ಮಂದಿಗೆಲ್ಲಾ ಉಡುಗೊರೆಗಳನ್ನು ತಂದು ಕೊಟ್ಟಿದ್ದಾನೆ. ಇನ್ನು ಜಾಹ್ನವಿ ಗಂಡನಿಗೆ ಎಣ್ಣೆ ಸ್ನಾನವನ್ನು ಮಾಡಿಸಿದ್ದಾಳೆ. ಮನೆ ಮಂದಿಯೆಲ್ಲಾ ಹಬ್ಬವನ್ನು ಖುಷಿಯಿಂದ ಸಂಭ್ರಮಿಸಿದ್ದಾರೆ.

ವೆಂಕಿ (Venki) ವಿಚಾರವಾಗಿ ನಡೆದ ಬೆಳವಣಿಗೆಗಳಲ್ಲಿ ಜಯಂತ್ ಗೆ (Jayanth) ತನ್ನ ಫ್ಲಾಷ್ ಬ್ಯಾಕ್ ನೆನಪಾಗೋಕೆ ಆರಂಭವಾಗಿದೆ. ಇದನ್ನೂ ನೋಡಿದಾಗ ವೆಂಕಿಗೂ ಹಾಗೂ ಜಯಂತ್ ಗೂ ಏನಾದ್ರು ಲಿಂಕ್ ಇದ್ಯಾ? ಅನ್ನೋ ಹೊಸ ಪ್ರಶ್ನೆಗಳನ್ನು ಪ್ರೇಕ್ಷಕರನ್ನು ಕಾಡೋದಿಕ್ಕೆ ಶುರುವಾಗಿದೆ. ಜಯಂತ್ ಗೆ ತಾನು ಬಾಲ್ಯದಲ್ಲಿ ಅನಾಥಾಶ್ರಮದಲ್ಲಿ ಬೆಳೆದ ಘಟನೆಗಳು ನೆನಪಾಗಿವೆ. ಅಲ್ಲಿ ತನ್ನ ಜೊತೆಯಲಿದ್ದವರ ನೆನಪು ಕಾಡಿದೆ.

ಅಲ್ಲದೇ ವೆಂಕಿ ತಂಗಿ ಮನೆಗೆ ಹೋದ್ಲು ಅಂತ ಗೊತ್ತಾಗಿ, ಗಿಣ್ಣು ಕೊಡೋಕೆ ಓಡೋಡಿ ಬಂದಿದ್ದಾನೆ. ಇದು ಕೂಡಾ ಜಯಂತ್ ಗೆ ಯಾವುದೋ ನೆನಪನ್ನ ಮೂಡಿಸಿದೆ. ಹುಡುಗನೊಬ್ಬ ಓಡೋಡಿ ಬರುತ್ತಿರುವ ಚಿತ್ರಣ ಅವನ ನೆನಪಿನಲ್ಲಿ ಮೂಡಿದೆ. ಈ ದೃಶ್ಯಗಳು ಈಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ ಹಾಗೂ ಒಂದಷ್ಟು ಪ್ರಶ್ನೆಗಳು ಜನರ ಮನಸ್ಸಲ್ಲಿ ಮೂಡಿದೆ.

ವೆಂಕಿ ಏನಾದ್ರೂ ಜಯಂತ್ ಗೆ ಅಣ್ಣ ಇರಬಹುದಾ? ಫ್ಲಾಷ್ ಬ್ಯಾಕ್ ನಲ್ಲಿ ಜಯಂತ್ ಮತ್ತು ವೆಂಕಿ ನಡುವೆ ಎಂತಹ ಸಂಬಂಧ ಇತ್ತು. ಅವರಿಬ್ಬರು ಅಣ್ಣ ತಮ್ಮಾನ ಅಥವಾ ಒಂದೇ ಆಶ್ರಮದಲ್ಲಿ ಬೆಳೆದಂತಹ ಸ್ನೇಹಿತರಾಗಿದ್ರಾ? ಅನ್ನೋದು ಸಹಾ ಈಗ ಇರೋ ಪ್ರಶ್ನೆ. ಈಗಂತೂ ಎಲ್ಲರ ಗಮನ ವೆಂಕಿ ಜಯಂತ್ ಗೆ ಏನಾಗಬೇಕು? ಆಶ್ರಮದಲ್ಲಿ ಇದ್ದ ಜಯಂತ್ ಹೀಗೆ ಶ್ರೀಮಂತನಾಗಿ ಬದಲಾಗಿದ್ದರ ಹಿಂದೆ ಕೂಡಾ ಏನಾದ್ರೂ ಕಥೆ ಇದ್ಯಾ? ಕಾದು ನೋಡಬೇಕಾಗಿದೆ.

Leave a Comment