Lakshmi Nivasa: ಜಯಂತ್ ಅಸಲಿ ರೂಪ ನೋಡಿದ ಅಜ್ಜಿ, ಎಲ್ಲವೂ ಆಯ್ತು ಅರ್ಥ, ಇನ್ನು ಜಯಂತ್ ಪಾಡೇನು ?

Written by Soma Shekar

Published on:

---Join Our Channel---

Lakshmi Nivasa Serial : ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಸೀರಿಯಲ್ ಗಳಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ (Lakshmi Nivasa Serial) ಒಂದಾಗಿದೆ. ಆರಂಭದಿಂದಲೂ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿರುವ ಈ ಸೀರಿಯಲ್ ನಲ್ಲಿ ಎಲ್ಲಾ ಪಾತ್ರಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.. ಆದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗಳಿಗೆ ಕಾರಣವಾಗಿರುವ ಪಾತ್ರ ಜಯಂತ್ ಪಾತ್ರವಾಗಿದೆ. ಜಯಂತ್ (Jayanth) ಪಾತ್ರದಲ್ಲಿನ ವೈವಿದ್ಯತೆ, ಸೈಕೋ ರೀತಿ ವರ್ತಿಸುವ ವಿಧಾನ ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

ಹೆಂಡತಿಯ ಮೇಲಿನ ಅತಿಯಾದ ಪ್ರೀತಿ, ಹೆಂಡತಿಗೆ ತಾನೇ ಪ್ರಪಂಚ ಆಗಿರಬೇಕು ಅಂತ ಜಯಂತ್ ಮಾಡೋ ಕೆಲಸಗಳು ಒಂದೆರಡಲ್ಲ. ಜಾನ್ವಿ ಮನೆಯವರ ಜೊತೆ ಮಾತನಾಡಬಾರದು ಅಂತ ಫೋನ್ ಕನೆಕ್ಟ್ ಆಗದ ಹಾಗೆ ಮಾಡಿದ್ದ ಜಯಂತ್. ಮಗಳ ಫೋನ್ ಕನೆಕ್ಟ್ ಆಗಲಿಲ್ಲ ಏನಾಯ್ತೋ ಏನೋ ಅಂತ ಟೆನ್ಷನ್ ಇಂದ ಜಾಹ್ನವಿ ಅವರ ತಂದೆ, ತಾಯಿ, ಅಣ್ಣ ಮತ್ತು ಅಜ್ಜಿ ನೇರವಾಗಿ ಜಯಂತ್ ಮನೆಗೆ ಬಂದಿದ್ದು ಜಯಂತ್ ಗೆ ಶಾಕ್ ನೀಡಿತ್ತು.

ಮನೆಗೆ ಎಲ್ಲರೂ ಬಂದ ಅಸಮಾಧಾನ ತೋರಿಸದೇ ತನಗೆ ಅವರೆಲ್ಲಾ ಬಂದಿದ್ದು ಖುಷಿ ಎಂದು ನಾಟಕವಾಡಿದ ಜಯಂತ್ ಕೊನೆಗೆ ಜಾನ್ವಿಯನ್ನ ತವರು ಮನೆಗೆ ಕರೆದುಕೊಂಡು ಹೋಗೋದಕ್ಕೆ ಅವಳ ತಂದೆ ತಾಯಿ ಬಯಸಿದಾಗ ಅದನ್ನ ನಿಲ್ಲಿಸೋದಕ್ಕೆ ಜಯಂತ್ ಗಾಜಿನ ಗ್ಲಾಸ್ ಅನ್ನ ತನ್ನ ಕೈಯಿಂದಲೇ ಗಟ್ಟಿಯಾಗಿ ಒತ್ತಿ ಗಾಯ ಮಾಡಿಕೊಂಡಿದ್ದಾನೆ. ಇದರಿಂದ ಜಾನ್ವಿ ಅಪ್ಪ ಅಮ್ಮನ ಜೊತೆಗೆ ಹೋಗೋದು ಕ್ಯಾನ್ಸಲ್ ಆಗಿದೆ.

ಆದರೆ ಈಗ ಲಕ್ಷ್ಮೀ ನಿವಾಸದ ಅಜ್ಜಿಗೆ ಜಯಂತ್ ನಡವಳಿಕೆ ಮತ್ತು ವರ್ತನೆ ಮೇಲೆ ಅನುಮಾನ ಮೂಡಿದೆ. ಮನೆಗೆ ಬಂದ ಮೇಲೆ ಅಜ್ಜಿ ವೆಂಕಿಯನ್ನ ಕರೆದು ಮನೇಲಿ ಏನೋ ನಡೀತಾ ಇದೆ. ಜಯಂತ್ ಜಾನುನ ನಮ್ಮ ಜೊತೆಗೆ ಮನೆಗೆ ಕಳಿಸಬಾರದು ಅಂತ ಬೇಕೂ ಅಂತಾನೇ ತನ್ನ ಕೈಯನ್ನ ಗಾಯ ಮಾಡ್ಕೊಂಡಿದ್ದಾನೆ‌ ಅಂತ ಹೇಳಿದ್ದಾರೆ. ಅಜ್ಜಿ ಮಾತನ್ನ ಬೇರೆ ಅವ್ರು ಸೀರಿಯಸ್ ಆಗಿ ತಗೊಳ್ತಾರಾ, ಇನ್ನಾದ್ರು ಜಯಂತ್ ಅಸಲಿ ಮುಖ ತಿಳ್ಕೊಳ್ತಾರಾ ಕಾದು ನೋಡಬೇಕಾಗಿದೆ.

Leave a Comment