Naga Chaitanya: ಮಗನ ಎಂಗೇಜ್ಮೆಂಟ್ ಗೆ ಬರ್ಲಿಲ್ಲ ಲಕ್ಷ್ಮಿ ದಗ್ಗುಬಾಟಿ, ನಾಗಚೈತನ್ಯ ಮೇಲೆ ತಾಯಿ ಕೋಪ ಏಕೆ?

Written by Soma Shekar

Published on:

---Join Our Channel---

Naga Chaitanya: ನಟ‌ ನಾಗಚೈತನ್ಯ (Naga Chaitanya) ಹಿರಿಯ ನಟ ನಾಗಾರ್ಜುನ ಮತ್ತು ಅವರ ಮೊದಲ ಪತ್ನಿ ಲಕ್ಷ್ಮಿ ದಗ್ಗುಬಾಟಿ (Lakshmi Daggubati) ಅವರ ಪುತ್ರ. ನಾಗಾರ್ಜುನ ಲಕ್ಷ್ಮೀ ದಗ್ಗುಬಾಟಿ ಅವರಿಗೆ ವಿಚ್ಚೇದನ ನೀಡಿದ ನಂತರ ನಟಿ ಅಮಲಾ ಜೊತೆಗೆ ಮದುವೆಯಾದರು. ನಾಗಾರ್ಜುನ ಮತ್ತು ಅಮಲಾ ಅವರ ಪುತ್ರನೇ ಅಖಿಲ್ ಅಕ್ಕಿನೇನಿ.‌

ನಾಗಚೈತನ್ಯ 2017 ರಲ್ಲಿ ಸಮಂತಾರನ್ನು (Samantha) ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅನಿರೀಕ್ಷಿತ ಎನ್ನುವಂತೆ ಸಮಂತಾ ನಾಗಚೈತನ್ಯ ಇಬ್ಬರೂ ಸಹಾ ವಿಚ್ಚೇದನ ಪಡೆದು ದೂರಾದರು. ಈಗ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಳ (Shobhita Dhulipala) ಜೊತೆಗೆ ಎರಡನೇ ಮದುವೆಗೆ ಸಜ್ಜಾಗಿದ್ದಾರೆ.‌

ಇಬ್ಬರ ಎಂಗೇಜ್ಮೆಂಟ್ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆದರೆ ನಾಗಚೈತನ್ಯ ಅವರ ತಾಯಿ ಲಕ್ಷ್ಮೀ ದಗ್ಗುಬಾಟಿ ಅವರಾಗಲೀ ಅವರ ಕುಟುಂಬದ ಅನ್ಯ ಸದಸ್ಯರೇ ಆಗಲೀ ನಾಗಚೈತನ್ಯ ಮತ್ತು ಶೋಭಿತಾ ಅವರ ನಿಶ್ಚಿತಾರ್ಥದಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ.

ಲಕ್ಷ್ಮೀ ದಗ್ಗುಬಾಟಿ ಅವರು ನಾಗಾರ್ಜುನರಿಂದ ದೂರವಾದ ಮೇಲೆ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಅವರು ಎರಡನೇ ವಿವಾಹವಾಗಿದ್ದಾರೆ. ನಾಗಚೈತನ್ಯ ಸಹಾ ತಮ್ಮ ಶಿಕ್ಷಣ ಮುಗಿಯುವವರೆಗೆ ತಾಯಿಯ ಜೊತೆಯಲ್ಲಿ ಅಮೆರಿಕಾದಲ್ಲೇ ಇದ್ದರು.

ಈಗ ಲಕ್ಷ್ಮಿ ದಗ್ಗುಬಾಟಿ ಅವರಿಗೆ ಮಗನ ಎರಡನೇ ಮದುವೆ ಬಗ್ಗೆ ಸಂತೋಷವಿಲ್ಲ ಎಂದು ಸುದ್ದಿಗಳಾಗಿದೆ. ಸಮಂತಾ ರನ್ನು ಸೊಸೆ ಎಂದು ಒಪ್ಪಿಕೊಂಡ ಹಾಗೆ ಶೋಭಿತಾರನ್ನು ಸೊಸೆ ಎಂದು ಸ್ವೀಕರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.‌

ವಿಚ್ಚೇದನದ ವಿಚಾರದಲ್ಲಿ ಸಮಂತಾ ತಪ್ಪೇನಿಲ್ಲ ಎನ್ನುವುದು ಲಕ್ಷ್ಮಿ ಅವರ ಭಾವನೆಯಾಗಿದ್ದು, ಮಯೋಸೈಟಿಸ್ ನಿಂದ ಬಳಲುವಾಗ ಸಮಂತಾ ಜೊತೆಗೆ ಕಾಳಜಿಯಿಂದ ಲಕ್ಷ್ಮೀ ಅವರು ಮಾತನಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ನಾಗಚೈತನ್ಯ ಎರಡನೇ ಮದುವೆಗೆ ಅವರ ತಾಯಿ ಹಾಜರಾಗೋದು ಅನುಮಾನ ಎನ್ನಲಾಗಿದೆ.

Puttakkana Makkalu: ಒಂದೇ ಸಲಕ್ಕೆ ಮೂರು ಟ್ವಿಸ್ಟ್, ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಥೆಯ ವೇಗ ಹೆಚ್ಚಾಯ್ತು

Leave a Comment