Raja Rani Show: ರೀಲ್ಸ್ ನಿಂದ ಫೇಮಸ್, ರಿಯಾಲಿಟಿ ಶೋ ಗೆ ಎಂಟ್ರಿ; ಕರ್ನಾಟಕ ಜೋಡಿ ಮಾಡುತ್ತಾ ಕಮಾಲ್

Written by Soma Shekar

Published on:

---Join Our Channel---

Raja Rani Show: ಪ್ರಸ್ತುತ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳು (Social Media) ಎಷ್ಟು ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಮಾದ್ಯಮಗಳೆಂದರೆ ಬಹಳಷ್ಟು ಜನ ಇಲ್ಲಿ ಜನಪ್ರಿಯತೆ ಪಡೆದು ಸಿನಿಮಾ, ಸೀರಿಯಲ್ ಮತ್ತು ರಿಯಾಲಿಟಿ ಶೋಗಳಿಗೆ ಎಂಟ್ರಿಯನ್ನು ನೀಡಿದ್ದಾರೆ ಅನ್ನೋದು ನಿಜ. ಬಹಳಷ್ಟು ಜನ ಪ್ರತಿಭಾವಂತರು ಸೆಲೆಬ್ರಿಟಿಗಳಿಗಿಂತ ಹೆಚ್ಚು ಹಿಂಬಾಲಕರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹೊಂದಿದ್ದಾರೆ ಎನ್ನುವುದು ಸಹಾ ನಿಜವಾದ ಮಾತಾಗಿದೆ.

ಈಗ ಅದೇ ಹಾದಿಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಮಾಡುತ್ತಾ, ಹಾಡುಗಳಿಗೆ ಅಂದವಾಗಿ ಹೆಜ್ಜೆ ಹಾಕುತ್ತಾ ಜನರ ಮನಸ್ಸನ್ನು ಗೆದ್ದಿರುವ ಮಧ್ಯ ವಯಸ್ಕರಾದ ಗೋವಿಂದ ರಾಜ್ ದಂಪತಿ (Govinda Raj Vaila Couple) ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸ್ಟಾರ್ ರಾಜಾ ರಾಣಿಯ ಹೊಸ ಸೀಸನ್ ಗೆ (Raja Rani Show)ಕಾಲಿಡುವ ಮೂಲಕ ಸುದ್ದಿಯಾಗಿದ್ದಾರೆ ಮತ್ತು ಅನೇಕರು ಈ ಜೋಡಿಗೆ ಮೆಚ್ಚುಗೆಗಳನ್ನು ನೀಡಿದ್ದಾರೆ.

ಗೋವಿಂದ ರಾಜ್ ದಂಪತಿಯು ಕದಂಬ ಸಿನಿಮಾದ ಯಾಮಿನಿ ಯಾರಮ್ಮ ನೀನು ಯಾಮಿನಿ ಹಾಡಿಗೆ ಡ್ಯಾನ್ಸ್ ಮಾಡಿದಾಗ ಅವರ ಆ ಡ್ಯಾನ್ಸ್ ವೀಡಿಯೋ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಯಿತು. ಅಲ್ಲಿಂದ ಅವರನ್ನು ಫಾಲೋ ಮಾಡುವವರ ಸಂಖ್ಯೆಯಲ್ಲಿ ಸಹಾ ಏರಿಕೆಯಾಗ ತೊಡಗಿತು. ಇವರು ಕರ್ನಾಟಕದ ಜೋಡಿ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡರು.

ಸೋಶಿಯಲ್ ಮೀಡಿಯಾ ತಂದುಕೊಟ್ಟ ಜನಪ್ರಿಯತೆ ಅವರನ್ನು ಈಗ ಕಲರ್ಸ್ ಕನ್ನಡ ವಾಹಿನಿಯ ರಾಜಾ ರಾಣಿ ರೀಲೋಡೆಡ್ ರಿಯಾಲಿಟಿ ಶೋ ಗೆ ತಂದು ನಿಲ್ಲಿಸಿದೆ‌. ಕಿರುತೆರೆಯ ವೀಕ್ಷಕರಿಗೆ ಗೋವಿಂದರಾಜ್ ದಂಪತಿಯ ಸುಂದರವಾದ ಡ್ಯಾನ್ಸ್ ಗಳನ್ನು ನೋಡುವಂತಹ ಅವಕಾಶ ಸಹಾ ಸಿಗಲಿದೆ. ಕರ್ನಾಟಕದ ಜೋಡಿ ಶೋ ಗೆ ಎಂಟ್ರಿ ನೀಡಿರುವ ಪ್ರೊಮೊವನ್ನು ವಾಹಿನಿ ಬಿಡುಗಡೆ ಮಾಡಿದೆ.

Leave a Comment