Kannada Serial: ಭಾಗ್ಯಲಕ್ಷ್ಮೀ ತರಾನೇ ಆಯ್ತಾ ಭೂಮಿಗೆ ಬಂದ ಭಗವಂತಾ? ಅಲ್ಲಿ ಸ್ಕೂಲ್ ಇಲ್ಲಿ ಕಾಲೇಜು ಅಂದ್ರು ನೆಟ್ಟಿಗರು

Written by Soma Shekar

Published on:

---Join Our Channel---

Kannada Serial: ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಸೀರಿಯಲ್ ಗಳು (Kannada Serial) ಸಾಕಷ್ಟಿವೆ. ಇವುಗಳಲ್ಲಿ ಕೆಲವು ಸೀರಿಯಲ್ ಗಳು ಟಾಪ್ ಸೀರಿಯಲ್ ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿವೆ. ಬೇರೆ ಬೇರೆ ವಾಹಿನಿಗಳಲ್ಲಿ ಪ್ರಸಾರ ಆಗೋ ಸೀರಿಯಲ್ ಗಳಲ್ಲಿ ಕೆಲವೊಮ್ಮೆ ಕಥೆಯು ಹೊಂದಾಣಿಕೆಯಾದಾಗ ಸೋಶಿಯಲ್ ಮೀಡಿಯಾಗಳಲ್ಲಿ ತಕ್ಷಣ ನೆಟ್ಟಿಗರು ಅದರ ಬಗ್ಗೆ ಕಾಮೆಂಟ್ ಗಳನ್ನು ಮಾಡೋದಕ್ಕೆ ಆರಂಭ ಮಾಡಿ ಬಿಡ್ತಾರೆ. ಈಗ ಅಂತದ್ದೇ ಒಂದು ಬೆಳವಣಿಗೆ ನಡೆದಿದೆ.

ಹೌದು, ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿರುವ ಭಾಗ್ಯ ಲಕ್ಷ್ಮೀ ಸೀರಿಯಲ್ (Bhagyalakshmi Serial) ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಗಳಲ್ಲಿ ಒಂದಾಗಿದೆ. ಇದರಲ್ಲಿ ಭಾಗ್ಯ ಶಿಕ್ಷಣವನ್ನ ಮುಂದುವರೆಸಬೇಕು ಅಂತ ಅತ್ತೆಯ ಬೆಂಬಲದಿಂದ ಹತ್ತನೇ ತರಗತಿಗೆ ಸೇರಿ ತನ್ನ ಮಗಳ ಕ್ಲಾಸ್ ನಲ್ಲೇ ಕೂತು, ಈಗ ಎಕ್ಸಾಂ ಸಹಾ ಬರೆದಿದ್ದಾಳೆ. ಆದ್ರೆ ಕಥೆಯಲ್ಲಿ ಭಾಗ್ಯ ಸ್ಕೂಲಿಗೆ ಸೇರಿದಾಗ ಮಗಳು ತನ್ವಿಗೆ ಅದು ಸ್ವಲ್ಪ ಕೂಡಾ ಇಷ್ಟ ಇರಲ್ಲ.

ತನ್ವಿ ತನ್ನ ಅಮ್ಮನ ಬಗ್ಗೆ ಅಸಮಾಧಾನ ಪಟ್ಕೊಂಡು, ಅಮ್ಮನ ವಿರುದ್ಧವೇ ಕೆಲಸಗಳನ್ನ ಮಾಡ್ತಾಳೆ. ಆದ್ರೆ ಅನಂತರ ಅವಳಿಗೆ ತನ್ನ ಅಮ್ಮನ ಮಹತ್ವ ಏನು ಅಂತ ಅರ್ಥ ಆಗುತ್ತೆ. ಈಗ ಜೀ ಕನ್ನಡ ವಾಹಿನಿಯ ಭೂಮಿಗೆ ಬಂದ ಭಗವಂತ ಸೀರಿಯಲ್ ನಲ್ಲಿ (Bhumige Banda Bhagavanta) ಗಿರಿಜಾ ಕಾಲೇಜಿಗೆ ಸೇರಿದ್ದಾಳೆ. ಅದು ಮಗಳು ಪ್ರಣೀತ ಓದ್ತಾ ಇರೋ ಅದೇ ಕಾಲೇಜಿನಲ್ಲಿ. ಆದ್ರೆ ಪ್ರಣೀತಾ ಗೆಳತಿಯರು ಇದಕ್ಕೆ ವ್ಯಂಗ್ಯ ಮಾಡಿದ್ದಾರೆ.

ಇದನ್ನ ನೋಡಿ ಪ್ರಣೀತಾಗೆ ಅಸಮಾಧಾನ ಆಗಿದೆ. ಅವಳಿಗೆ ತನ್ನ ಅಮ್ಮ ಕಾಲೇಜಿಗೆ ಬರ್ತಾ ಇರೋದು ಇರಿಸು ಮುರಿಸು ಉಂಟು ಮಾಡಿದೆ‌. ಸ್ನೇಹಿತೆಯರ ಮುಂದೆ ಅವಳಿಗೆ ಮುಜುಗರ ಉಂಟಾಗಿದೆ. ವಾಹಿನಿ ಹಂಚಿಕೊಂಡ ಈ ಪ್ರೊಮೋ ವನ್ನು ನೋಡಿದ ನೆಟ್ಟಿಗರು ಇದೇ‌ನಿದು ಭಾಗ್ಯ ಲಕ್ಷ್ಮೀ ಕಾಪಿ ಮಾಡಿದ ಹಾಗೆ ಇದೆ ಅಂತಿದ್ದಾರೆ. ಮತ್ತೆ ಕೆಲವರು ಅಲ್ಲಿ ಅಮ್ಮ ಮಗಳು ಹೈಸ್ಕೂಲ್ ಗೆ ಹೋದ್ರು, ಇಲ್ಲಿ ಕಾಲೇಜಿಗೆ ಅಷ್ಟೇ ವ್ಯತ್ಯಾಸ ಅಂತಿದ್ದಾರೆ.

ನಿಜಕ್ಕೂ ನೆಟ್ಟಿಗರ ಅನುಮಾನದ ಹಾಗೇ ಎರಡೂ ಸೀರಿಯಲ್ ಗಳ ಕಥೆಯಲ್ಲಿನ ಈ ಒಂದು ಘಟ್ಟ ಸೇಮ್ ಅನುಭವ ಕೊಡ್ತಾ ಇದ್ಯಾ? ಭೂಮಿಗೆ ಬಂದ ಭಗವಂತ ಭಾಗ್ಯ ಲಕ್ಷ್ಮಿ ತರ ಇಲ್ಲ ಅನ್ನೋದನ್ನ ಶೀಘ್ರದಲ್ಲೇ ಪ್ರೇಕ್ಷಕರಿಗೆ ಸ್ಪಷ್ಟ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಸದ್ಯಕ್ಕಂತೂ ಪ್ರೋಮೋ ಅನೇಕರಿಗೆ ಭಾಗ್ಯಲಕ್ಷ್ಮೀ ಸೀರಿಯಲ್ ನ ನೆನಪು ಮಾಡಿದೆ.

Leave a Comment