Lakshmi Nivasa: ಜಾನು ಹೇಳಿದಿದ್ರು ಲಕ್ಷ್ಮೀಗೆ ಜಯಂತ್ ವಿಚಾರ ಗೊತ್ತಾಯ್ತು; ಮನಸ್ಸಲ್ಲೇ ಈಗ ಶುರುವಾಯ್ತು ಭಯ

Written by Soma Shekar

Published on:

---Join Our Channel---

Lakshmi Nivasa Serial: ಮಗಳು ಜಾಹ್ನವಿಗೆ ಎಷ್ಟು ಸಲ ಫೋನ್ ಮಾಡಿದ್ರು ಕನೆಕ್ಟ್ ಆಗ್ತಿಲ್ಲ ಅನ್ನೋ ಆತಂಕದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ (Lakshmi Nivasa Serial) ಜಾಹ್ನವಿ ಅವರ ಅಪ್ಪ, ಅಮ್ಮ, ಅಜ್ಜಿ ಮತ್ತು ಅಣ್ಣ ನೇರವಾಗಿ ಜಯಂತ್ ಮನೆಗೆ ಬಂದಿದ್ದಾರೆ. ಜಯಂತ್ ಗೆ ಅವರನ್ನು ನೋಡಿ ಸಿಟ್ಟಾಗಿದ್ದಾನೆ ಆದರೆ ಅದನ್ನು ತೋರಿಸಿಕೊಳ್ಳದೇ ಖುಷಿಯಲ್ಲಿ ಇರುವವನ ತರಹ ನಾಟಕ ಆಡ್ತಾ ಇದ್ದಾನೆ. ಅಲ್ಲದೇ ಎಲ್ಲಿ ತನ್ನ ಅಸಲಿ ಬಣ್ಣ ಬಯಲಾಗುತ್ತೋ ಅನ್ನೋ ಭಯ ಕೂಡಾ ಅವನನ್ನ ಕಾಡ್ತಿದೆ.

ಜಾಹ್ನವಿ (Jahnavi) ತನ್ನ ಗಂಡ ದಿನಾ ತನ್ನನ್ನ ಮನೇಲಿ ಕೂಡಾ ಹಾಕಿ ಹೋಗ್ತಾನೆ ಅನ್ನೋದನ್ನಾಗ್ಲಿ, ಅವನ ವಿಚಿತ್ರ ವರ್ತನೆಯು ಇನ್ನೂ ತನಗೆ ತೊಂದರೆ ಅನಿಸಿಲ್ಲದ ಕಾರಣ ಅದೇನನ್ನೂ ಸಹಾ ಅವಳು ಹೇಳಿಲ್ಲ, ಯಾಕಂದ್ರೆ ಗಂಡ ತನ್ನನ್ನ ತುಂಬಾ ಪ್ರೀತಿ ಮಾಡ್ತಾನೇ ಅನ್ನೋ ನಂಬಿಕೇಲಿ ಅವಳು ಇದ್ದಾಳೆ. ಆದ್ರೂ ಜಾನು ಅವರ ತಾಯಿ ಲಕ್ಷ್ಮೀ ಗೆ ಮಾತ್ರ ಅನುಮಾನ ಅನ್ನೋದು ಶುರುವಾಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ.

ಅಳಿಯನ ಮನೆಗೆ ಬಂದು ಅಷ್ಟು ದಿನ ಆದ್ರು ಮಗಳು ಮನೆಯ ಟೆರೆಸ್ ನೋಡೇ ಇಲ್ಲ ಅಂದಿದ್ದನ್ನ ಕೇಳಿ ಲಕ್ಷ್ನೀಗೆ ಆಶ್ಚರ್ಯ ಆಗಿದೆ. ಆದ್ರೆ ಜಯಂತ್ (Jayanth) ಮಾತ್ರ ಅದಕ್ಕೂ ಒಂದು ಕಾರಣ ಕೊಡ್ತಾ, ಜಾಹ್ನವಿ ಎಕ್ಸಾಂ, ಓದೋದು ಅಂತ ಬ್ಯುಸಿ ಇದ್ದಿದ್ರಿಂದ ಇದೆಲ್ಲಾ ನೋಡೋಕಾಗಿಲ್ಲ ಅಂತ ಸುಳ್ಳನ್ನು ಹೇಳಿ ಹೇಗೋ ಅತ್ತೆಯನ್ನು ನಂಬಿಸಿದ್ದಾನೆ.

ಮತ್ತೊಂದು ಕಡೆ ಜಾಹ್ನವಿಯನ್ನ ನೋಡೋಕೆ ಬಂದಿದ್ದ ಮಂಗಳಾನ ಸೆಕ್ಯುರಿಟಿ ಗಾರ್ಡ್ ಕೂಡಿ ಹಾಕಿದ್ದು ಅವಳಿಗೆ ಭಯ ಹುಟ್ಟಿಸಿದೆ. ಕನಸಿನಲ್ಲೂ ಆ ಘಟನೆ ನೋಡಿ ಬೆಚ್ಚಿ ಬಿದ್ದಿದ್ದಾಳೆ. ತನ್ನ ಅಮ್ಮ ಜಾಹ್ನವಿ ಮನೆಗೆ ಹೋಗಿರೋ ವಿಷಯ ತಿಳಿದು ಫೋನ್ ಮಾಡಿ ತನ್ನನ್ನ ಕೂಡಿ ಹಾಕಿದ್ದ ವಿಷಯ ಹೇಳಿದ್ದು ಮಾತ್ರವೇ ಅಲ್ಲದೇ ತಂಗಿಯನ್ನ ಎಂತಾ ಮನೆಗೆ ಕೊಟ್ಟಿದ್ದೀರಾ ಅಂತ ಆತಂಕದಿಂದ ಹೇಳಿಕೊಂಡಿದ್ದಾಳೆ.

ಮಗಳ ಮಾತುಗಳನ್ನ ಕೇಳಿ ಆತಂಕಕ್ಕೆ ಒಳಗಾದ ಲಕ್ಷ್ಮೀ ನೇರವಾಗಿ ಅಳಿಯ ಜಯಂತ್ ಹತ್ರ ಬಂದು, ಜಾನುನ ನೋಡೋಕೆ ಮಂಗಳಾ ಇಲ್ಲಿಗೆ ಬಂದಿದ್ಲಂತೆ, ಆದ್ರೆ ಇಲ್ಲಿ ತನ್ನ ಮಗಳಿಗೆ ಯಾಕೆ ಹೀಗೆ ಮಾಡಿದ್ರಿ? ಅಂತ ಪ್ರಶ್ನೆಯನ್ನು ಕೇಳಿದ್ದಾಳೆ. ಇದಕ್ಕೆ ಜಯಂತ್ ಏನಂತ ಉತ್ತರ ಕೊಡ್ತಾನೆ ಅನ್ನೋದನ್ನ ನೋಡಬೇಕಾಗಿದೆ. ಈ ವಿಚಾರದಿಂದ ಲಕ್ಷ್ಮೀ ಅವರ ಮನೆಯವರಿಗೆ ಜಯಂತ್ ಮೇಲೆ ಅನುಮಾನ ಬರುತ್ತಾ ಅಂತ ಕಾದು ನೋಡಬೇಕಾಗಿದೆ.

Leave a Comment