Kannada Serial TRP: ಟಾಪ್ ಐದರಲ್ಲಿ ಸ್ಥಾನಕ್ಕೆ ಸೀರಿಯಲ್ ಗಳ ಸ್ಪರ್ಧೆ; ಪುಟ್ಟಕ್ಕನ ಮಕ್ಕಳಿಗೆ ಪೈಪೋಟಿ ಇಲ್ವೇ ಇಲ್ಲ

Written by Soma Shekar

Published on:

---Join Our Channel---

Kannada Serial TRP: ಪ್ರತಿ ವಾರಾಂತ್ಯದಲ್ಲಿ ಸೀರಿಯಲ್ ಗಳ ಟಿ ಆರ್ ಪಿ (Kannada Serial TRP) ಆಧಾರದಲ್ಲಿ ಅವುಗಳು ಪಡೆದಿರುವ ಸ್ಥಾನದ ಸುದ್ದಿ ಹೊರ ಬಂದಾಗ ಬಹುತೇಕ ಜೀ ಕನ್ನಡದ ಧಾರಾವಾಹಿಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುತ್ತವೆ. ಈಗ ಈ ವಾರದಲ್ಲಿ ಯಾವ ಸೀರಿಯಲ್ ಗಳು ಟಾಪ್ ಐದರಲ್ಲಿ ಯಾವ ಸ್ಥಾನವನ್ನ ಪಡೆದುಕೊಂಡಿದೆ ಎನ್ನುವುದನ್ನು ತಿಳಿಯುವ ಸಮಯವಾಗಿದ್ದು, ಈ ವಾರ ಮೂರನೇ ಸ್ಥಾನದಲ್ಲಿ ಎರಡು ಸೀರಿಯಲ್ ಗಳು ಸ್ಥಾನವನ್ನು ಪಡೆದುಕೊಂಡಿದೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಈ ವಾರವೂ ಸಹಾ ಮೊದಲನೇ ಸ್ಥಾನದಲ್ಲೇ ಮುಂದುವರೆದಿದೆ. ಸೀರಿಯಲ್ ನ ಕಥೆಯಲ್ಲಿ ಪುಟ್ಟಕ್ಕನ ಹಿರಿಯ ಮಗಳು ಸಹನಾ ತೀರಿಕೊಂಡಿದ್ದಾಳೆಂದು ಭಾವಿಸಿ ಪುಟ್ಟಕ್ಕ ಭಾವುಕಳಾಗಿದ್ದರೆ, ಮತ್ತೊಂದು ಕಡೆ ಸಹನಾ ಸ್ವಾವಲಂಬಿಯಾಗಿ ಜೀವನ ನಡೆಸುವ ಉದ್ದೇಶದಿಂದ ಬಂದಿದ್ದಾಳೆ. ಧಾರಾವಾಹಿಯಲ್ಲಿನ ಹೊಸ ತಿರುವುಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು ಸೀರಿಯಲ್ ಅಪಾರ ಜನರ ಪ್ರೀತಿಗೆ ಪಾತ್ರವಾಗಿದೆ.

ಎರಡನೇ ಸ್ಥಾನವನ್ನು ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವಾರವೂ ಲಕ್ಷ್ಮಿ ನಿವಾಸಕ್ಕೆ ಎರಡನೇ ಸ್ಥಾನ ಸಿಕ್ಕಿತು. ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಕಲಾವಿದರ ಒಂದು ದೊಡ್ಡ ದಂಡು ಇದೆ. ಅಲ್ಲದೇ ವಿಶೇಷವಾದ ಕಥಾ ಹಂದರವು ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಒಂದೆರಡು ವಾರ ಪುಟ್ಟಕ್ಕನ ಮಕ್ಕಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನವನ್ನು ಪಡೆದಿದ್ದ ಲಕ್ಷ್ಮಿ ನಿವಾಸ ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ಸ್ಪರ್ಧೆಯಿಂದಾಗಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಆರಂಭದಿಂದಲೂ ಕಿರುತೆರೆಯ ಪ್ರೇಕ್ಷಕರ ವಿಶೇಷ ಗಮನವನ್ನು ಸೆಳೆದಿರುವ ಒಂದು ಹೊಸ ಕಥಾನಕದೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಸೀತಾರಾಮ (SeethaRama) ಧಾರಾವಾಹಿ ಈ ವಾರ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸೀತಾರಾಮನ ಮದುವೆಯ ಸಿದ್ಧತೆಗಳು ನಡೆದಿದ್ದು, ಅದನ್ನು ತಡೆಯೋದಕ್ಕೆ ಭಾರ್ಗವಿಯು ತನ್ನೆಲ್ಲಾ ಪ್ರಯತ್ನಗಳನ್ನ ಮಾಡುತ್ತಿದ್ದು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ.

ಇತ್ತೀಚಿಗಷ್ಟೇ ಆರಂಭವಾದ ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿ ಈ ವಾರ ಸೀತಾರಾಮ ಸೀರಿಯಲ್ ನೊಂದಿಗೆ ಸ್ಥಾನವನ್ನು ಹಂಚಿಕೊಂಡಿದೆ. ಅಪ್ಪನ ಪ್ರೀತಿಗಾಗಿ ಪಡದಾಡುವ ಮಗಳು ಶ್ರಾವಣಿ, ಕುಟುಂಬದ ಜವಾಬ್ದಾರಿಗಳನ್ನು ಹೊತ್ತು ಕಷ್ಟಪಡುತ್ತಿರುವ ಸುಬ್ರಹ್ಮಣ್ಯ ಈ ಇಬ್ಬರ ಕಥೆಯು ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿದೆ. ಈ ಹಿಂದೆ 5 ಮತ್ತು 4ನೇ ಸ್ಥಾನಕ್ಕೆ ಬಂದಿದ್ದ ಶ್ರಾವಣಿ ಸುಬ್ರಮಣ್ಯ ಈಗ ಮೂರನೇ ಸ್ಥಾನಕ್ಕೆ ಏರಿದೆ.

ಇನ್ನು ನಾಲ್ಕನೇ ಸ್ಥಾನದಲ್ಲಿ ಈ ವಾರ ಅಮೃತಧಾರೆ (Amruthadhaare) ಸೀರಿಯಲ್ ಇದ್ದು, ಕಥೆಯಲ್ಲಿನ ಹೊಸ ತಿರುವುಗಳು ಪ್ರೇಕ್ಷಕರನ್ನ ಕುತೂಹಲದಲ್ಲಿ ತೇಲಾಡಿಸುತ್ತಿದೆ. ಕೆಲಸ ಕಳೆದುಕೊಂಡಿರುವ ಜೀವಾ, ಅವನಿಗೆ ಸಹಾಯ ಮಾಡಲು ಒಡವೆಗಳನ್ನು ಅಡ ಇಟ್ಟ ಭೂಮಿಕಾ ಇಬ್ಬರ ವಿಷಯ ಗೌತಮ್ ದೀವಾನ್ ಗೆ ಗೊತ್ತಾಗಿದ್ದು, ಅದಕ್ಕೊಂದು ಪರಿಹಾರ ಹುಡುಕುವ ಪ್ರಯತ್ನಕ್ಕೆ ಮುಂದಾಗಿದ್ದಾನೆ ಗೌತಮ್. ಛಾಯಾಸಿಂಗ್ ಮತ್ತು ರಾಜೇಶ್ ನಟರಂಗ ಅವರ ಜೋಡಿ ಪ್ರೇಕ್ಷಕರ ವಿಶೇಷ ಮೆಚ್ಚುಗೆ ಪಡೆದಿದೆ.

ಐದನೆಯ ಸ್ಥಾನದಲ್ಲಿ ಈ ವಾರ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ (RAMACHARI) ಸ್ಥಾನವನ್ನು ಪಡೆದುಕೊಂಡಿದೆ. ಕಿಟ್ಟಿಯ ಆಗಮನದ ನಂತರ ಧಾರಾವಾಹಿಯಲ್ಲಿ ಇಬ್ಬರು ನಾಯಕರು ಕಾಣಿಸಿಕೊಂಡಿರುವುದು ಕಥೆಯಲ್ಲಿ ಒಂದು ಹೊಸತನವನ್ನು ಮೂಡಿಸಿದೆ. ಅಣ್ಣ ತಮ್ಮ ಇಬ್ಬರೂ ಸೇರಿಕೊಂಡು ಹೇಗೆ ತಮ್ಮ ಶತ್ರುಗಳನ್ನು ಸದೆಬಡಿಯುತ್ತಾರೆ ಎನ್ನುವುದನ್ನು ನೋಡುವುದಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ.

Leave a Comment